ಪೇಯಿಂಗ್‌ ಗೆಸ್ಟ್‌

Author : ಡಿ.ಎಸ್.ಚೌಗಲೆ

Pages 92

₹ 75.00




Year of Publication: 2003
Published by: ಸೂರ್ಯ ಪ್ರಿಂಟರ್ಸ್
Address: ಸೂರ್ಯ ಪ್ರಕಾಶನ, ಮಂಚೀಕೇರಿ - 581347

Synopsys

`ಪೇಯಿಂಗ್‌ ಗೆಸ್ಟ್‌’ ಡಿ. ಎಸ್‌. ಚೌಗಲೆ ಅವರು ರೂಪಾಂತರಿಸಿರುವ ನಾಟಕವಾಗಿದೆ. ಹೊಸಹೊಸ ಪ್ರಯೋಗಗಳನ್ನು ಬಯಸುವ ಕನ್ನಡ ರಂಗಭೂಮಿಗೆ ಇದು ಮರಾಠಿ ಅನುವಾದಿತ ನಾಟಕ. ಈಗಾಗಲೇ ರಂಗದಲ್ಲಿ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದೆ. ಕಥಾವಸ್ತು ತುಂಬ ಸರಳವಾದರೂ ನಾಟಕದ ನಿರೂಪಣೆ ಮತ್ತು ಸಂಭಾಷಣೆಯ ದೃಷ್ಟಿಯಿಂದ ತೀರಾ ಹೊಸತನವನ್ನು ಮೈಗೂಡಿಸಿಕೊಂಡಿದೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Reviews

ಹೊಸತು- 2004- ಜನವರಿ

ಹೊಸಹೊಸ ಪ್ರಯೋಗಗಳನ್ನು ಬಯಸುವ ಕನ್ನಡ ರಂಗಭೂಮಿಗೆ ಇದು ಮರಾಠಿ ಅನುವಾದಿತ ನಾಟಕ. ಈಗಾಗಲೇ ರಂಗದಲ್ಲಿ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದೆ. ಕಥಾವಸ್ತು ತುಂಬ ಸರಳವಾದರೂ ನಾಟಕದ ನಿರೂಪಣೆ ಮತ್ತು ಸಂಭಾಷಣೆಯ ದೃಷ್ಟಿಯಿಂದ ತೀರಾ ಹೊಸತನವನ್ನು ಮೈಗೂಡಿಸಿಕೊಂಡಿದೆ. ಮುಗ್ಧ ಮನುಷ್ಯನ ಸಹಜ ಆಕಾಂಕ್ಷೆ ಮಹತ್ವಾಕಾಂಕ್ಷೆಯಾಗಿ ಪರಿವರ್ತಿತಗೊಂಡಾಗ ಮಾನವೀಯ ಮೌಲ್ಯಗಳು ಕುಸಿಯುವುದನ್ನು ನಾಟಕವು ಹೇಳುತ್ತದೆ. ಸೊಗಸಾದ ಅನುವಾದ ಚೌಗಲೆ ಅವರದ್ದು.

Related Books