ಜಾಗೃತಿಗಾಗಿ ಆರು ನಾಟಕಗಳು

Author : ಲಿಂಗರಾಜ ರಾಮಾಪೂರ

Pages 128

₹ 130.00




Year of Publication: 2023
Published by: ಸಾಗರಿ ಪ್ರಕಾಶನ
Address: #275/ಎಫ್ 6-1, ಮೊದಲ ಮಹಡಿ, 4 ನೇ ವೆಸ್ಟ್ ಕ್ರಾಸ್, ಉತ್ತರಾದಿ ಮಠದ ರಸ್ತೆ, ಮೈಸೂರು - 570 004
Phone: 9740129274

Synopsys

ಈ ಪುಸ್ತಕದಲ್ಲಿ ಆರು ನಾಟಕಗಳನ್ನು ನೀಡಲಾಗಿದೆ. ಪ್ರಸ್ತುತ ಕರೋನಾದಂತಹ ಹೊಸ ಅಲೆ ಹೊಂದಿದ ಒಂದು ನಾಟಕದೊಂದಿಗೆ, ನಮ್ಮ ಆಹಾರದ ಮಹತ್ವ ಸಾರುವ ನಾಟಕ, ಪ್ರತಿಯೊಬ್ಬರೂ ಶೌಚಾಲಯ ಹೊಂದುವ ವಿಷಯವನ್ನು ಹೊಂದಿದ ನಾಟಕ, ಪವಾಡಗಳ ಗುಟ್ಟನ್ನು ರಟ್ಟು ಮಾಡುವ, ಮಣ್ಣನ್ನು ಯಾವಾಗಲೂ ಜೀವಂತವಾಗಿಡುವ, ಕೃಷಿಕನ ಸಮಸ್ಯೆಗಳನ್ನು ಬಿಂಬಿಸುವ ಹೀಗೆ ಆರು ಬೇರೆ ಬೇರೆ ವಿಷಯಗಳ ಮೇಲೆ ಪಾತ್ರಗಳನ್ನು ಸೃಜಿಸಿ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಗೆ ಆಡಬಹುದಾದ ಸುಂದರ ಸಂಭಾಷಣೆಗಳನ್ನೊಳಗೊಂಡ ಕಥಾವಸ್ತುವನ್ನು ನಾಟಕಗಳು ಹೊಂದಿವೆ. ನಾಟಕದ ಮಧ್ಯೆ ಬರುವ ಪುಟ್ಟ ಪುಟ್ಟ ಗೀತೆಗಳು ನಾಟಕಗಳಿಗೆ ಸಾಂದರ್ಭಿಕ ಓಘವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಆದರೆ ಪಾತ್ರಗಳಿಗೆ ಜೀವ ತುಂಬಬೇಕಷ್ಟೇ. ಹಾಗಾದರೆ ಇನ್ನೇಕೆ ತಡ. ಬನ್ನಿ ಪಾತ್ರಗಳಿಗೆ ಜೀವ ತುಂಬೋಣ. ಪಾತ್ರಗಳನ್ನು ಅಭಿನಯಿಸೋಣ. ನಾವೇ ಪಾತ್ರಗಳಾಗೋಣ. ನಮ್ಮ ಅಂತರ್ಚೇತನವನ್ನು ಜಾಗೃತಗೊಳಿಸೋಣ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Reviews

ರಂಗಭೂಮಿ ನಿಂತ ನೀರಲ್ಲ. ಅದು ಹಾಗೆ ಆಗಬಾರದೂ ಕೂಡಾ. ಆಗುವುದಿಲ್ಲ. ಹಾಗಾಗಿ ಮಕ್ಕಳ ರಂಗಭೂಮಿಗೆ ಮಹತ್ವ, ಪ್ರಾಮುಖ್ಯತೆ, ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ಚಿತ್ರಕಲೆ, ರಂಗಸಜ್ಜಿಕೆ, ಉಡುಪು, ಬೆಳಕು, ಪ್ರಸಾದನ, ವೇದಿಕೆ, ನಟ ನಟಿಯರು, ತಂತ್ರಜ್ಞರು, ಪ್ರೇಕ್ಷಕರು, ಮೂಕಾಭಿನಯ, ಪ್ರಚಾರ ಹೀಗೆ ಎಲ್ಲಾ ಅಭಿವ್ಯಕ್ತಿ ಪ್ರಕಾರಗಳನ್ನು ಒಳಗೊಳ್ಳುವ ನಾಟಕ ಮಾಧ್ಯಮ ಎಲ್ಲರಿಗೂ ಬೇಕು, ಅದಕ್ಕೆ ಎಲ್ಲರೂ ಬೇಕು. ಮಕ್ಕಳು ಕಲಿಯುವ ಶಾಲೆಯಲ್ಲಿ ರಂಗಚಟುವಟಿಕೆ ಆಗಬೇಕು. ಪಠ್ಯ, ಕ್ರೀಡೆ ಮತ್ತು ಕಲೆ ಅವರ ಮುಂದಿನ ಬದುಕಿಗೆ ಕೈಮರಗಳಾಗಬೇಕು. ಅವರಲ್ಲಿರುವ ಸುಪ್ತ ಪ್ರತಿಭೆ ಮುಕ್ತವಾಗಲು, ಕಲ್ಪನೆ ಗರಿಗೆದರಲು ಅವಕಾಶ ಮತ್ತು ವ್ಯವಸ್ಥೆ ಒದಗಿಸಿಕೊಡಬೇಕು. ಭಾವನೆಗಳಿಗೆ ನೆಲೆಕೊಟ್ಟ ಮಾನವರಾಗಬೇಕು. ತಮ್ಮ ಇತಿ-ಮಿತಿಗಳನ್ನು ತಿಳಿಯುತ್ತಾ, ಒಗ್ಗಟ್ಟಾಗಿ ತೊಡಗಿಸಿಕೊಳ್ಳುವ, ತಮ್ಮ ದೇಹ-ಧ್ವನಿ-ಭಾವನೆಗಳನ್ನು ಅರಿತುಕೊಳ್ಳುತ್ತಾ ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯಬೇಕು.

ನಾಟಕ ಜನರ ಭಾವನೆಗಳನ್ನು ಸಾರುವ ಅತ್ಯುತ್ತಮ ಮಾಧ್ಯಮವಾಗಿದೆ. ಇದು ಅನಕ್ಷರಸ್ಥರಿಗೆ ಸಂವಹನದ ಮಾಧ್ಯಮವಾಗಿ ಅವರ ಮನಸ್ಸನ್ನು ತಟ್ಟುವಲ್ಲಿ ಸಂದೇಹವೇ ಇಲ್ಲ. ಈ ದಿಸೆಯಲ್ಲಿ ಕಳೆದ 20ವರ್ಷಗಳಿಂದ ತಾವೇ ನಾಟಕಗಳನ್ನು ಬರೆಯುತ್ತಾ, ತಮ್ಮ ಶಾಲೆಯ ಮಕ್ಕಳಿಂದ ಪ್ರಯೋಗಗಳನ್ನು ಕೈಗೊಳ್ಳುತ್ತಿರುವ ಡಾ.ಲಿಂಗರಾಜ ರಾಮಾಪೂರ ಅವರ ಕಾರ್ಯ ಶ್ಲಾಘನೀಯ. ಈಗಾಗಲೇ ನಾಲ್ಕು ಮಕ್ಕಳ ನಾಟಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಇವರು 12ಕ್ಕೂ ಹೆಚ್ಚು ಮಕ್ಕಳ ನಾಟಕಗಳ್ನು ನಿರ್ದೇಶಿಸಿದ್ದಾರೆ. ‘ಜಾಗೃತಿಗಾಗಿ ಆರು ನಾಟಕಗಳು’ ಈ ಕೃತಿಯಲ್ಲಿ ಹೆಸರೇ ಹೇಳುವಂತೆ ಜನರ ಅಂಧಶೃದ್ಧೆಯನ್ನು ಪ್ರಶ್ನಿಸುತ್ತಾ, ಪ್ರಚಲಿತ ವಿದ್ಯಾಮಾನಗಳನ್ನೊಳಗೊಂಡಂತೆ ಜನರನ್ನು ಮೌಢ್ಯತೆಯಿಂದ ವೈಜ್ಞಾನಿಕತೆಗೆ ಕರೆದೊಯ್ಯುವ, ಸಮಾಜದ ಓರೆಕೋರೆಗಳನ್ನು ತಿದ್ದುವ ಪ್ರಯತ್ನವಿದೆ.

ಈ ಪುಸ್ತಕದಲ್ಲಿ ಆರು ನಾಟಕಗಳನ್ನು ನೀಡಲಾಗಿದೆ. ಪ್ರಸ್ತುತ ಕೊರೋನಾದಂತಹ ಹೊಸ ಅಲೆ ಹೊಂದಿದ ಒಂದು ನಾಟಕದೊಂದಿಗೆ, ನಮ್ಮ ಆಹಾರದ ಮಹತ್ವ ಸಾರುವ ನಾಟಕ, ಪ್ರತಿಯೊಬ್ಬರೂ ಶೌಚಾಲಯ ಹೊಂದುವ ವಿಷಯವನ್ನು ಹೊಂದಿದ ನಾಟಕ, ಪವಾಡಗಳ ಗುಟ್ಟನ್ನು ರಟ್ಟು ಮಾಡುವ, ಮಣ್ಣನ್ನು ಯಾವಾಗಲೂ ಜೀವಂತವಾಗಿಡುವ, ಕೃಷಿಕನ ಸಮಸ್ಯೆಗಳನ್ನು ಬಿಂಬಿಸುವ ಹೀಗೆ ಆರು ಬೇರೆ ಬೇರೆ ವಿಷಯಗಳ ಮೇಲೆ ಪಾತ್ರಗಳನ್ನು ಸೃಜಿಸಿ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಗೆ ಆಡಬಹುದಾದ ಸುಂದರ ಸಂಭಾಷಣೆಗಳನ್ನೊಳಗೊಂಡ ಕಥಾವಸ್ತುವನ್ನು ನಾಟಕಗಳು ಹೊಂದಿವೆ. ನಾಟಕದ ಮಧ್ಯೆ ಬರುವ ಪುಟ್ಟ ಪುಟ್ಟ ಗೀತೆಗಳು ನಾಟಕಗಳಿಗೆ ಸಾಂದರ್ಭಿಕ ಓಘವನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. ಈ ನಾಟಕಗಳನ್ನು ಮಕ್ಕಳಲ್ಲದೇ ದೊಡ್ಡವರೂ ಮಾಡುವಂತೆ ಇದ್ದು,  ವೇದಿಕೆ ಅಥವಾ ಬೀದಿ ನಾಟಕಗಳಾಗಿಯೂ ಪ್ರಯೋಗಿಸುವಂತೆ ಲೇಖಕರು ಬರೆದಿರುವುದು ವಿಶೇಷ.

ಜನರೆಡೆಗೆ ವಿಜ್ಞಾನವನ್ನು ಒಯ್ಯುವ, ಅವರ ಜೀವನಶೈಲಿಯನ್ನು ಸುಧಾರಿಸುವ, ಅವರಲ್ಲಿ ವೈಚಾರಿಕತೆಯನ್ನು ಬಿತ್ತುವ ಡಾ.ಲಿಂಗರಾಜ ರಾಮಾಪೂರ ಅವರ ಪ್ರಯತ್ನ ಫಲಿಸಲಿ. ಭೂಮಿಯಲ್ಲಿ ಸಸಿ ಬೆಳೆದು ಮರವಾಗಿ ತಿಳಿಗಾಳಿ, ತಂಪು ನೆರಳು ರಸಪೂರಿ ಹಣ್ಣು ಕೊಡುವಂತೆ ಮಕ್ಕಳು ರಂಗಭೂಮಿಯಲ್ಲಿ ಬೆಳೆಯಲಿ. ಸಮಾಜಮುಖಿಯಾಗಿ ಉಳಿಯಲಿ. 

5ನೇ ಸಪ್ಟೆಂಬರ್ 2022

                                                                                                                                                                                                                                                                                        ರಮೇಶ ಪರವೀನಾಯ್ಕರ
                                                                                                                                                                                                                                                                               ರಂಗಾಯಣ ನಿರ್ದೇಶಕರು, ಧಾರವಾಡ

Related Books