ಮನ್ವಂತರ (ನಾಟಕ)

Author : ರಾಜು ಭಂಡಾರಿ ರಾಜಾವರ್ತ

Pages 84

₹ 50.00




Year of Publication: 2012
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಕ್ರಾಸ್, ನೆಲ ಮಹಡಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು - 79
Phone: 08023153226

Synopsys

ಲೇಖಕ ರಾಜು ಭಂಡಾರಿ ಅವರ ನಾಟಕ ’ಮನ್ವಂತರ’. ಕೃತಿಗೆ ಮುನ್ನುಡಿ ಬರೆದ, ಎಮ್. ಆರ್. ಸುಬ್ಬರಾವ್ ’ ಇಂದು ಭಯೋತ್ಪಾದಕತೆಯಿಂದ ಆಗುತ್ತಿರುವ ಅನಿಷ್ಟ, ಶ್ರೀಸಾಮಾನ್ಯನಿಗೆ, ಸಮಾಜಕ್ಕೆ, ಒಟ್ಟಾರೆ ಪ್ರಪಂಚದ ಅನೇಕ ದೇಶಗಳಲ್ಲಿ ಸಂಭವಿಸುತ್ತಿರುವ ಭೀಕರ ಸಾವುನೋವುಗಳು-ಅಮಾಯಕರನ್ನು ಧರ್ಮದ ಹೆಸರಲ್ಲಿ ಮರಳುಮಾಡಿ ಉಗ್ರಗಾಮಿಗಳನ್ನಾಗಿ ಪರಿವರ್ತಿಸುತ್ತಿರುವ ಜಾಲ-ಇಂದು ಇಡೀ ವಿಶ್ವಕ್ಕೆ ಆವರಿಸಿರುವ ಪಿಡುಗು. ಇಂತಹ ಜ್ವಲಂತ ಸಮಕಾಲೀನ ಸಮಸ್ಯೆಯನ್ನು ಒಂದು ಕಾಲ್ಪನಿಕ ಐತಿಹಾಸಿಕ ಘಟನೆಗಳ ಹಿನ್ನೆಲೆಯಲ್ಲಿ ಮನ್ವಂತರ ನಾಟಕ ರಚಿಸಿರುವ ಲೇಖಕರ ಪ್ರಯತ್ನ ಶ್ಲಾಘನೀಯ’ ಎಂದಿದ್ದಾರೆ.

 

About the Author

ರಾಜು ಭಂಡಾರಿ ರಾಜಾವರ್ತ

ಲೇಖಕ ರಾಜು ಭಂಡಾರಿ ರಾಜಾವರ್ತ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಕಳೆದ 15 ವರ್ಷಗಳಿಂದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ನಾಟಕ ರಚನಾಕಾರರಾಗಿ ಅನುಭವವಿದೆ. ಕೃತಿಗಳು: ಮನ್ವಂತರ,ಮಧಮರ್ತ್ಯ, ಅಗ್ನಿ ಮರ್ಧನ, ಬಂಗಾರ ತೀರದಲ್ಲಿ ಬೊಗಸೆ ನೀರು. ಇವರ ಮನ್ವಂತರ ಕೃತಿಗೆ ರಾಜ್ಯ ಅರಳು ಪುರಸ್ಕಾರ ಲಭಿಸಿದೆ.  ...

READ MORE

Related Books