ಸೀತೆಯ ತೊಟ್ಟಿಲು

Author : ದೇನಾಶ್ರೀ

Pages 50

₹ 40.00




Published by: ಶ್ರೀನಿವಾಸ ಮೂರ್ತಿ ಪ್ರಕಾಶಿಸಿರುವ ಕೃತಿ
Phone: 886139 0887

Synopsys

ಸೀತೆಯನ್ನು ಕೇಂದ್ರೀಕರಿಸಿಕೊಂಡು ರಾಮಾಯಣವನ್ನು ಮುರಿದು ಕಟ್ಟುವ ಕೆಲಸವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಆದರೆ ಇಲ್ಲಿ ಕತೆ ನಡೆಯುವುದು ಕೇವಲ ಪುರಾಣ ಸಂದರ್ಭದಲ್ಲಲ್ಲ. ವರ್ತಮಾನವನ್ನು ಪುರಾಣಕ್ಕೆ ಜೋಡಿಸಿದ್ದಾರೆ. ಅದಕ್ಕೆ ಸೂತ್ರದಾರ ಸೇತು.  ಸೂತ್ರಧಾರನ ವ್ಯಂಗ್ಯ ಮತ್ತು ಸೀತೆಯ ಪ್ರಶ್ನೆ ಇಡೀ ನಾಟಕದ ಪ್ರಮುಖ ಅಂಶಗಳಾಗಿವೆ. ಈ ಯುದ್ದ ಯಾರಿಗಾಗಿ? ಎಂದು ಶೂರ್ಪನಖಿಯ ಮಾತುಗಳಿಗೂ ಈ ನಾಟಕದಲ್ಲಿ ಪ್ರಮುಖವಾಗಿದೆ. ಹನುಮಂತನಿಲ್ಲಿ ಕೇವಲ ರಾಮಭಕ್ತನಾಗಿ ಉಳಿದಿಲ್ಲ. ವಿಚಾರ ವಿಮರ್ಶಕನಾಗಿದ್ದಾನೆ. ಆಧುನಿಕ ಕಣ್ಣುಗಳನ್ನು ಹೊಂದಿದ್ದಾನೆ. ರಾಮಾಯಣದ ಕುರಿತಂತೆ ಹಲವರು ವ್ಯಾಖ್ಯಾನಗಳನ್ನು, ವಿಮರ್ಶೆಗಳನ್ನು ಬರೆದಿದ್ದಾರೆ. ಮುರಿದುಕಟ್ಟುವ ಕೆಲಸವನ್ನೂ ಮಾಡಿದ್ದಾರೆ. ಈ ಹಿಂದೆ ಕುವೆಂಪು ಅವರು ಬರೆದಿರುವ ಶೂದ್ರ ತಪಸ್ವಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೇನಶ್ರೀ ಅವರು ವರ್ತಮಾನಕ್ಕೆ ಪೂರಕವಾಗಿ ಇನ್ನೊಂದು ಪ್ರಯತ್ನವನ್ನು ಮಾಡಿದ್ದಾರೆ.

Related Books