
ತ.ರಾ.ಸು (ತ.ರಾ.ಸುಬ್ಬಾರಾವ್ ) ಅವರು ಬರೆದ ರೇಡಿಯೋ ನಾಟಕಗಳ 2ನೇ ಭಾಗ ಕೃತಿ-ಅನ್ನಾವತಾರ. ಸಾಮಾನ್ಯವಾಗಿ ನಾಟಕಗಳಿಗೆ ಅಗತ್ಯವಾಗಿ ಬೇಕಾದ ರಂಗಮಂಟಪ, ದೀಪಾಲಂಕಾರ, ಸ್ಥಳ ಇತ್ಯಾದಿ ರೇಡಿಯೋ ಪ್ರಸಾರದ ನಾಟಕಗಳಿಗೆ ಬೇಕಾಗುವುದಿಲ್ಲ. ಉಪಕರಣಗಳೂ ಬೇಕಿಲ್ಲ. ಆದರೆ, ರೇಡಿಯೋ ನಾಟಕಗಳಲ್ಲಿ ಶಬ್ಧಸಿದ್ಧಿ ಬೇಕು. ಅದಿಲ್ಲದಿದ್ದರೆ ಉತ್ತಮ ರೇಡಿಯೋ ನಾಟಕ ಪ್ರಸಾರಕನಾಗುವುದಿಲ್ಲ. ಆದ್ದರಿಂದ, ರೇಡಿಯೋ ನಾಟಕಗಳನ್ನು ಬರೆಯುವುದು ಸ್ವಲ್ಪ ಕಷ್ಟದ ಕೆಲಸ. ಸ್ವಾತಂತ್ಯ್ರವೀರ, ಅನ್ನಾವತಾರ, ನರಕವಾದ ನಂದನ, ಕರವಸ್ತ್ರ ಹಾಗೂ ಗಂಗಾದೇವಿ-ಈ ಐದು ರೇಡಿಯೋ ನಾಟಕಗಳ ಸಂಕಲನವಿದು.

©2025 Book Brahma Private Limited.