ಶಿಖಂಡಿ

Author : ಡಿ.ಎನ್‌. ಶ್ರೀನಾಥ್‌

Pages 168

₹ 200.00
Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

ಈ ಕಾದಂಬರಿ 'ಮಹಾಭಾರತ'ದ ವಿಶಿಷ್ಟ ಪಾತ್ರ ಶಿಖಂಡಿ'ಯ ಬಗ್ಗೆ ಒಂದು ಹೊಸ ದೃಷ್ಟಿಕೋನವನ್ನು ಮೂಡಿಸುತ್ತದೆ. ಇವು ಆ ವ್ಯಕ್ತಿಯೊಂದಿಗೆ ಕಲೆತ ಅನೇಕ ಪ್ರಶ್ನೆಗಳು... ಏಕೆಂದರೆ ಅವನ ಅಸ್ತಿತ್ವ ಸಾಮಾನ್ಯವಾಗಿರಲಿಲ್ಲ. ಆ ಶಕ್ತಿಭರಿತ ಪಾತ್ರ 'ಮಹಾಭಾರತ' ಮಹಾಕಾವ್ಯದ ಅತ್ಯಂತ ದೃಢಚಿತ್ತದ ಪಾತ್ರವಾಗಿದ್ದು, ಅದು ತನ್ನ ಜೀವನದ ಪ್ರತಿಯೊಂದು ಮಗ್ಗಲುಗಳೊಂದಿಗೆ ನಮ್ಮನ್ನು ಆಶ್ಚರ್ಯಚಕಿತಗೊಳಿಸುವುದು ಮಾತ್ರವಲ್ಲ, ಪ್ರತಿಯಾಗಿ ತನ್ನೆಡೆಗೆ ಚುಂಬಕೀಯದಂತೆ ಆಕರ್ಷಿಸುತ್ತದೆ. ಆ ಪಾತ್ರ ಶಿಖಂಡಿಯಾಗಿದ್ದು ಅವನನ್ನು ದ್ರುಪದಾತ್ಮಜ ಎಂದೂ ಹೇಳಲಾಯಿತು. 'ಮಹಾಭಾರತ'ದಲ್ಲಿ ಇತಿಹಾಸ ಮತ್ತು ಯುದ್ಧದ ಕಥೆಗಳೊಂದಿಗೆ ಮನೋವಿಜ್ಞಾನ ಮತ್ತು ವಿಜ್ಞಾನದ ಜ್ಞಾನವೂ ಇದೆ. ಕ್ಷಿಪಣಿ, ಟೆಸ್ಟ್ ಟ್ಯೂಬ್ ಬೇಬಿ ಮತ್ತು ಶಲ್ಯಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆಯ ವಿವರಣೆ ಸಹ ಲಭಿಸುತ್ತದೆ. ಈ ವೈಜ್ಞಾನಿಕ ಜ್ಞಾನ 'ಮಹಾಭಾರತ'ದ ಮಹತ್ವವನ್ನು ವಿಶ್ವವ್ಯಾಪಿಗೊಳಿಸಿದೆ. 'ಮಹಾಭಾರತ'ದ ಲಭ್ಯ ಪ್ರಾಚೀನ ಲೇಖನಬದ್ಧ-ರೂಪದ ಅಧ್ಯಯನವನ್ನು ಅಮೆರಿಕಾದ ಅಂತರಿಕ್ಷ ಸಂಶೋಧನಾ ಎಜೆನ್ಸಿ 'ನಾಸಾ'ದ ಮೂಲಕವೂ ಹಾಗೂ ನಿರಂತರವಾಗಿ ಮಾಡಲಾಗುತ್ತಿದೆ. ಜಗತ್ತಿನ ಏನ್ಶಿಯಂಟ್ ಎಲಿಯನ್ ರಿಸರ್ಚರ್ ಸಹ 'ಮಹಾಭಾರತ'ದ ಕಾಲದಲ್ಲಿ ಎಲಿಯನ್ಸ್ ಇರುವ ಸಾಧ್ಯತೆಗಳನ್ನು ತಿಳಿಯಲು 'ಮಹಾಭಾರತ' ಗ್ರಂಥವನ್ನ ಅಧ್ಯಯನ ಮಾಡುತ್ತಿದ್ದಾರೆ. ಮಹಾಭಾರತದ ಶ್ಲೋಕಗಳಲ್ಲಿ ಈಗಲೂ ಬಹಳಷ್ಟು 'ಕೋಡಿಫೈ' ಇದೆ. ಇದನ್ನು 'ಡಿಕೋಡ್' ಮಾಡಿ ಪುರಾತನ ಕಾಲದ ವಿಕಸಿತ ಜ್ಞಾನವನ್ನು ಪಡೆಯಬಹುದು. ಮಹಾಭಾರತದಲ್ಲಿ ಶಿಖಂಡಿಯ ಪಾತ್ರ ಅದ್ಭುತವಾಗಿದೆ. ಶಿಖಂಡಿಯ ಅಸ್ತಿತ್ವ ಭ್ರಾಂತಿಗಳ ಜಾಲದಲ್ಲಿ ಸಿಲುಕಿದೆ. ಶಿಖಂಡಿ ಅತ್ಯಂತ ಪ್ರಭಾವಶಾಲಿ ಪಾತ್ರವಾಗಿದ್ದು, ಮಹರ್ಷಿ ವೇದವ್ಯಾಸರು 'ಮಹಾಭಾರತ'ದ ಉಕ್ಕಿನ ಪಾತ್ರ ಭೀಷ್ಟರಿಂದ ಶಿಖಂಡಿಯ ಕಥೆ 'ಅಂಬೋಪಾಖ್ಯಾನ' ವನ್ನು ಹೇಳಿಸಿದ್ದಾರೆ. ಭೀಷ್ಮ ಮತ್ತು ಶಿಖಂಡಿಯ ನಡುವೆ ವೈಮನಸ್ಸಿತ್ತು. ಈ ರೋಚಕ ಪಾತ್ರದ ಜೀವನ-ಕತೆ ನಮ್ಮ ಮನಸ್ಸನ್ನು ಸ್ಪರ್ಶಿಸುವುದರಲ್ಲಿ ಸಮರ್ಥವಾಗಿದೆ. ಶಿಖಂಡಿಯ ಸಂಪೂರ್ಣ ಜೀವನವನ್ನು ಹೊಸ ದೃಷ್ಟಿಕೋನದಿಂದ ಪರೀಕ್ಷಿಸುವ, ನೋಡುವ, ಅರಿಯುವ ಮತ್ತು ಪ್ರಸ್ತುತ ಪಡಿಸುವ ಅವಶ್ಯಕತೆಯಿದೆ. ಶಿಖಂಡಿಯ ಜೀವನದ ಪದರಗಳು ತೆರೆದಾಗ ನಮ್ಮ ಪ್ರಾಚೀನ ಭಾರತದಲ್ಲಿದ್ದ ವಿಕಸಿತ ಜ್ಞಾನದ ಸಂಗತಿ ಸಹ ಅರಿವಿಗೆ ಬರುತ್ತದೆ; ಆಗ ಶಲ್ಯಚಿಕಿತ್ಸೆಯಿಂದ ಲಿಂಗ ಪರಿವರ್ತನೆ ಮಾಡುವ ಜ್ಞಾನದ ಅರಿವಿತ್ತು ಎಂಬುದು ಸಹ ತಿಳಿದು ಬರುತ್ತದೆ. ಈ ತಥ್ಯಗಳ ರೂಪವೇ ಈ ಕಾದಂಬರಿ 'ಶಿಖಂಡಿ: ಒಂದು ಹೆಣ್ಣಿನ ದೇಹದ ಆಚೆಗಿನ ದೇಹದ ಕಥೆ'ಯಾಗಿದೆ. ಈ ಕಾದಂಬರಿಯ ಕೇಂದ್ರ ಬಿಂದು ಶಿಖಂಡಿಯಾಗಿದ್ದು 'ಮಹಾಭಾರತ'ದಲ್ಲಿ ಶಿಖಂಡಿಯ ಜೀವನದೊಂದಿಗೆ ಕಲೆತ ಪ್ರಸಂಗಗಳಿಗೆ ಇಲ್ಲಿ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಶಿಖಂಡಿಯಂಥ ಪಾತ್ರಕ್ಕೆ ಆತ್ಮೀಯತೆ ಲಭಿಸುವುದೇ ಅವನಿಗೆ ದೊಡ್ಡ ನ್ಯಾಯವನ್ನು ಕಲ್ಪಿಸಿಕೊಟ್ಟಂತಾಗುತ್ತದೆ. ಎಂದು ಶರದ್ ಸಿಂಹ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books