ದೈವಕ್ಕೆ ಮೊದಲು ಶರಣೆಂಬೆವು

Author : ರಂಗಸ್ವಾಮಿ ಎಸ್.

Pages 80

₹ 60.00
Year of Publication: 2019
Published by: ಪುಣ್ಯ ಪ್ರಕಾಶನ
Address: ಶಾಪ್‌ ನಂ.21 ಮಾಚೋಹಳ್ಳಿ ಕಾಲೋನಿ, ವಿಶ್ವನೀಡಂ ಪೋಸ್ಟ್‌, ಬೆಂಗಳೂರು
Phone: 7760182299

Synopsys

ಗ್ರಾಮೀಣ ಬದುಕು, ಆರ್ಥಿಕ ಪರಾವಲಂಬಿ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ನಾಟಕ ’ದೈವಕ್ಕೆ ಮೊದಲು ಶರಣೆಂಬೆವು’.

ಎಸ್. ರಂಗಸ್ವಾಮಿ ಚಿತ್ರಿಸಿರುವ ಗ್ರಾಮೀಣ ಬದುಕು, ಉತ್ತರ ಕರ್ನಾಟಕದ ಅದರಲ್ಲೂ ಹೈದರಾಬಾದ್ ಕರ್ನಾಟಕದ ಪ್ರಾಂತ್ಯಗಳಾದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಹಲವಾರು ತಾಲ್ಲೂಕುಗಳಲ್ಲಿ ಇಂದಿಗೂ ವಾಸ್ತವ ಸತ್ಯ. ರಾಯಚೂರು ಜಿಲ್ಲೆಯ ತಾಲ್ಲೂಕುಗಳಾದ ಸಿಂಧನೂರು, ಮಾನ್ವಿ, ಮುಂತಾದ ಪ್ರದೇಶಗಳಲ್ಲಿ, ಕಥೆಗಾರರು ಹೇಳುವ “ರೆಡ್ಡಿ ಕ್ಯಾಂಪ್'ಗಳು ಈಗಲೂ ಜೀವಂತವಿದ್ದು, ನಾಟಕದ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿರುವ ಭೂಮಾಲಿಕ ಪದ್ಧತಿ, ಜೀತ ಪದ್ಧತಿಯನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.

About the Author

ರಂಗಸ್ವಾಮಿ ಎಸ್.

ಬರಹಗಾರ ರಂಗಸ್ವಾಮಿ ಎಸ್. ಅವರು ಜನಿಸಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದಲ್ಲಿ. ತುಮಕೂರುನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಡ್ರಾಮಾ ಡಿಪ್ಲೊಮಾ ಶಿಕ್ಷಣವನ್ನು ಪಡೆದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಗವತಿ ಕಾಡು ಹಾಗೂ ಮೌನ ಗಲ್ಲಿಗೇರಿತು ಇವರ ಪ್ರಮುಖ ಕೃತಿಗಳು. ...

READ MORE

Related Books