ಯಾವ ಹಿರಿ ಕರ್ತನದೊ ಈ ಜಗದ ನಾಟಕವು...

Author : ಎನ್.ಸಿ. ಮಹೇಶ್

Pages 188

₹ 160.00




Year of Publication: 2018
Published by: ಪ್ರಗತಿ ಪ್ರಕಾಶನ
Address: ಜಯನಗರ, ವಿಶ್ವವಿದ್ಯಾಲಯ ರಸ್ತೆ , ಕಲಬುರಗಿ\n
Phone: 9449619162

Synopsys

‘ಯಾವ ಹಿರಿ ಕರ್ತನದೊ ಈ ಜಗದ ನಾಟಕವು…’ ಎನ್.ಸಿ. ಮಹೇಶ್ ಅವರ ನಾಟಕಸಂಕಲನವಾಗಿದೆ. ಕೃತಿಯ ಕುರಿತು ನಾಟಕಕಾರ ಹೀಗೆ ಹೇಳುತ್ತಾರೆ; ಬರೆಯುವಾತ-ಅದರಲ್ಲೂ ನಾಟಕ ಬರೆಯುವಾತ ರಂಗದ ಮೇಲೆ ತನ್ನ ಕೃತಿ ಜೀವ ತಳೆಯಲಿ ಎಂದೇ ಬರೆಯುತ್ತಾನೆ. ಹಾಗೆ ಬರೆಯುವಾಗ ರಂಗದ ಮೇಲೆ ತನ್ನ ನಾಟಕ ಸೋಲುತ್ತದೋ ಗೆಲ್ಲುತ್ತದೋ ಎಂಬ ಆಳುಕನ್ನು ಇಂದಿನ ಕಾಲ ಮೂಡಿಸುತ್ತಿದೆ ಎಂದು ನನಗೆ ಅನೇಕ ಸಲ ಅನಿಸಿದೆ ಎನ್ನುತ್ತಾರೆ. ತಮ್ಮ ನಾಟಕ ಗೆದ್ದೇ ಗೆಲುತ್ತದೆ ಎಂದುಕೊಂಡಿರುವವರಿಗೆ ಒಂದು ಕ್ಲಾಸೋ ಮಾಸೋ ಜನವರ್ಗವಿರುವಂತೆ, ಈ ನಾಟಕ ಸೋಲಲಾರದು ಅಂದುಕೊಂಡಿರುವವರಿಗೂ ಇರುತ್ತದೆ. ಆದರೆ ಈ ವಿಶ್ವಾಸವನ್ನ ಬುಡಮೇಲು ಮಾಡುವ ಶಕ್ತಿ ಪ್ರೇಕ್ಷಕರಿಗೆ ಇದೆ. ಮತ್ತು ಬದಲಾಗುತ್ತಿರುವ ಕಾಲಧರ್ಮಕ್ಕೂ ಇದೆ ಅಂದುಕೊಂಡಿದ್ದೇನೆ. ಈ ಎಲ್ಲಾ ನಾಟಕಗಳನ್ನು ಬರೆದ ತರುವಾಯ ಅವು ನನಗೆ ಇಂದಿನ ವಸ್ತು ಸ್ಥಿತಿ ಅರಿಯಲಿಕ್ಕೆ ಬೆಳಕು ಕಾಣಿಸಿ ತಾವು ಕತ್ತಲಿನಲ್ಲಿ ಉಳಿದ ಉದಾರಿ ನಾಟಕಗಳಿವು ಎಂದಿದ್ದಾರೆ

About the Author

ಎನ್.ಸಿ. ಮಹೇಶ್

ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗದಲ್ಲಿರುವ ಬೆಣಚನಹಳ್ಳಿಯಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಂತರ ಕೆಲಕಾಲ ಕನ್ನಡ ಪ್ರಭ ಹಾಗೂ ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಣೆ. ಮೇಷ್ಟ್ರು ವೃತ್ತಿ ಬಗ್ಗೆ ಮೊದಲಿಂದ ತೀವ್ರತರ ಒಲವು. ಪರಿಣಾಮವಾಗಿ ಕೆಲ ಕಾಲ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕಾರ್ಯನಿರ್ವಹಣೆ. ಪ್ರಸ್ತುತ  ಸುರಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನ ಕೆಲಸ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ. ‘ಬೆಳಕು ಸದ್ದುಗಳನ್ನು ಮೀರಿ’ , ‘ ಸರಸ್ವತಿ ಅಕಾಡಮಿ’- ಕಥಾಸಂಕಲನಗಳು. ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ – ಕಾದಂಬರಿ. ‘ ...

READ MORE

Related Books