
ಲೇಖಕರಾದ ಡಿ. ಎಸ್. ಚೌಗಲೆ ಹಾಗೂ ಪ್ರೇಮಾನಂದ ಗಜ್ವಿ ಅವರ ನಾಟಕ ಕೃತಿ ʼಕಿರಾವಂತʼ. ಪುಸ್ತಕದ ಬೆನ್ನುಡಿಯಲ್ಲಿ, “ಗ್ರೀಕ್ ದುರಂತಗಳು ಜಗತ್ತಿಗೆ ಪ್ರಸಿದ್ಧವಾದವು. ಗ್ರೀಕ್ನ ದುರಂತ ನಾಟಕದಂತೆ ಯಾರದ್ದು ದುಖಾಂತ್ಯವಾಗುತ್ತದೆಯೋ ಆ ವ್ಯಕ್ತಿ ದೊರೆ ಇಲ್ಲವೆ ಉಚ್ಚಪದ ವಿಭೂಷಿತನಾಗಿರುತ್ತಾನೆ. ದೈವವು ಆ ದುರಂತ ಘಟಿಸುವಂತೆ ಮಾಡುತ್ತದೆ. ಆದರೆ, ಕಿರವಂತದಲ್ಲಿ ದೊರೆಯೂ ಇಲ್ಲ, ದೈವವೂ ಇಲ್ಲ. ಆದರೂ ಸಿದ್ದೇಶ್ವರನದ್ದು ದುರಂತ ಘಟಿಸಿ ಬಿಡುತ್ತದೆ. ಕೇವಲ ಇದು ಸಿದ್ದೇಶ್ವರನ ದುರಂತವಲ್ಲ, ಇಡೀ ಅವನ ಕುಟುಂಬವೇ ದುರಂತದಲ್ಲಿ ಮುಳುಗುತ್ತದೆ. ಇಲ್ಲಿಯತನಕದ ನಾಟಕ ಪರಂಪರೆಯಲ್ಲಿ ಇದೊಂದು ಅಪಾರಂಪರಿಕ ದುರಂತವಾಗಿದೆ. ಕಿರವಂತ ಒಂದು ಅಪರೂಪದ ನಾಟಕವಾಗಿದೆ. ಇದರ ನಾಯಕ ಆರಂಭದಿಂದ ಅಂತ್ಯದವರೆಗೆ ಅಸಹಾಯಕನೇ ಆಗಿದ್ದಾನೆ ಹಾಗೂ ತನ್ನ ಅಸಹಾಯಕತನವನ್ನು ತಕರಾರಿಲ್ಲದೆ ಒಪ್ಪಿಕೊಂಡಿದ್ದಾನೆ. ಒಟ್ಟು ಇಡೀ ನಾಟಕವೇ ಈ ನಾಯಕನಲ್ಲದ ನಾಯಕನ ಸೋಲಿನ ಮನೋವೃತ್ತಿಯ ದ್ಯೋತಕವಾಗಿದೆ” ಎಂದು ಹೇಳಿದ್ದಾರೆ.
©2025 Book Brahma Private Limited.