
ಕನ್ನಡದ ಮೊಟ್ಟಮೊದಲ ಮುಸ್ಲಿಂ ತತ್ವಪದಕಾರ ಚೆನ್ನೂರ ಜಲಾಲ್‌ಸಾಹೇಬರ ಶರಣ ಸಾಹಿತ್ಯ ಹಾಗೂ ಸೌಹಾರ್ದ ಬದುಕಿನ ಕುರಿತು ನಡೆಸಿದ ಹೋರಾಟದ ಕಥಾಹಂದರ ಹೊಂದಿರುವ ಐತಿಹಾಸಿಕ ನಾಟಕ ಕೃತಿಯೇ ಹುಕುಂಪತ್ರ. ಪತ್ರಕರ್ತ ಪ್ರಭುಲಿಂಗ ನೀಲೂರೆ ರಚಿಸಿದ್ದಾರೆ. ಚೆನ್ನೂರ ಜಲಾಲ್‌ಸಾಹೇಬರು ಸಗರನಾಡಿನ ಸೂಫಿ ಪರಂಪರೆಯ ಪ್ರತೀಕವಾಗಿ ಬಾಳಿಹೋಗಿದ್ದಾರೆ. ಮಡಿವಾಳಪ್ಪನವರ ಶಿಷ್ಯ ಪರಂಪರೆಯ ಸಮೂಹದಲ್ಲಿದ್ದು, ಹಿಂದು-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿದ್ದರು. ತಮ್ಮ ಸಮಕಾಲೀನ ಸಮಾಜದ ಸೌಹಾರ್ದತೆಯ ಸೇತುವೆಯಾಗಿದ್ದ ಜಲಾಲ್ ಸಾಹೇಬರು ವ್ಯಕ್ತಿಗಿಂತಲೂ ತತ್ವದೊಡ್ಡದು, ಮತಧರ್ಮಗಳಿಗಿಂತಲೂ ವಾಸ್ತವ ಬದುಕು ದೊಡ್ಡದು ಎಂಬುದನ್ನು ನಂಬಿದ್ದರು. ಹಿಂದು-ಮುಸ್ಲಿಂ ಎರಡೂ ಪರಂಪರೆಯಲ್ಲಿರುವ ಒಳಿತನ್ನು ಸ್ವೀಕರಿಸಿ ಮತೀಯ ಸೌಹಾರ್ದಕ್ಕೆ ಸೇತುವೆಯಾಗಿ ಬಾಳಿದವರು. ಮುಸ್ಲಿಂ ಧರ್ಮದಲ್ಲಿ ಜನಿಸಿದ ಜಲಾಲ್‌ಸಾಹೇಬರು ತಮ್ಮ ಸಾತ್ವಿಕತೆಯಿಂದ ಶರಣತತ್ವವನ್ನು ಅಳವಡಿಸಿಕೊಂಡವರು. ಇದನ್ನೇ ಮಠವೊಂದರಲ್ಲಿ ಪುರಾಣದ ಮೂಲಕ ಸಾರ್ವಜನಿಕರಿಗೆ ತಿಳಿಹೇಳಬೇಕು ಎಂಬ ಆಪೇಕ್ಷೆಯನ್ನು ಇಟ್ಟುಕೊಂಡವರು. ಪುರಾಣ ಹೇಳಲು ಎರಡೂ ಧರ್ಮದವರು ಅಡ್ಡಿಪಡಿಸಿದಾಗ ಹೈದ್ರಾಬಾದ್‌ನ ನಿಜಾಮ್ ದೊರೆ ಹತ್ತಿರ ಹೋಗಿ ಹುಕುಂಪತ್ರ(ಒಪ್ಪಿಗೆಪತ್ರ)ತಂದು ಪುರಾಣ ಆರಂಭಿಸುವ ಕಥಾಹಂದರವೇ ಈ ‘ಹುಕುಂಪತ್ರ’.
©2025 Book Brahma Private Limited.