ಅನ್ಯೋನ್ಯ

Author : ಜಿ.ಎನ್. ರಂಗನಾಥ ರಾವ್

Pages 172

₹ 85.00




Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

‘ಅನ್ಯೋನ್ಯ’ ಕೃತಿಯು ಜಿ.ಎನ್. ರಂಗನಾಥ ರಾವ್ ಅವರ ವಿಮರ್ಶಾ  ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಜಿ.ಎನ್.ಆರ್. ಅವರ ಈ ವಿಮರ್ಶಾ ಕೃತಿಯ ವೈಶಿಷ್ಟ್ಯವೆಂದರೆ, ಅನಂತಮೂರ್ತಿಯವರ `ಭವ್ಯ‘, ಕುಂವೀ ಅವರ `ಅರಮನೆ‘ಯಂತಹ ಲೇಟೆಸ್ಟ್ ಕೃತಿಗಳ ಕುರಿತು ಬರಹಗಳಿರುವುದು. ಯಾವ ತೂಕದ ವಿಮರ್ಶಾ ಕೃತಿ ತೆಗೆದುಕೊಂಡರೂ ಅದರಲ್ಲಿನ್ನೂ ಯಶೋಧರನ ಜನ್ನ ಚರಿತ್ರೆ, ಆನಂದಕಂದರ ಕತೆಗಳು ಮುಂತಾದ ತಲೆಬರಹಗಳನ್ನೂ ನೋಡಿ ಬೇಜಾರು ಬರುತ್ತಿರುವಾಗ ಇಂತಹದೊಂದು ಪ್ರಸ್ತುತತೆ ಅವಶ್ಯ. ರಂಗನಾಥರಾವ್ ಪತ್ರಿಕೆಯೊಂದರ ಪುರವಣಿ ಸಂಪಾದಕರೂ ಆಗಿದ್ದ ಕಾರಣ ಹೀಗೆ ಪ್ರೆಸ್ ನಿಂದ ಹೊರಬೀಳುವ ಗರಿ ಗರಿ ಕಾದಂಬರಿಗಳ ಕಡೆ ಅವರ ಗಮನ ಹರಿದಿದ್ದೀತು. ಆದರೆ ಅವರ ಶೈಲಿ ಮಾತ್ರ ಗರಿ ಗರಿಗೆ ವಿರುದ್ಧವಾಗಿದೆ. ಅಂದರೆ ಸಾಮಾನ್ಯೀಕರಣದ ಪದಗಳಿಂದ, ಚಿಂತನೆಗಳಿಂದ, ಹಿಂದೆ-ಮುಂದೆ ಯಾವ ಅರ್ಥ ವಿನ್ಯಾಸ, ಭಾವ ವಿಸ್ತಾರಗಳನ್ನೂ ಹೊಂದಿರದ ಚುಟುಕು ವಾಕ್ಯಗಳಿಂದ ಕುಗ್ಗಿದೆ.

 

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books