ಮಮತೆಯ ಮಂದರ

Author : ಶಂಭುಲಿಂಗ ವಾಲ್ದೊಡ್ಡಿ

Pages 96

₹ 80.00




Year of Publication: 2021
Published by: ಶೋಭಾ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್,
Address: ವಾಲ್ದೊಡ್ಡಿ, ಬೀದರ.
Phone: 9448186652

Synopsys

ಲೇಖಕ ಶಂಭುಲಿಂಗ ವಾಲ್ದೊಡ್ಡಿ ಅವರು ತಮ್ಮ ಪತ್ನಿ ದಿ. ಶೋಭಾವತಿ ಕುರಿತು ಬರೆದ ಜೀವನಚಿತ್ರ ಕೃತಿ ‘ಮಹಾತಾಯಿ’ಯ ಬಗ್ಗೆ ವಿವಿಧ ಲೇಖಕ-ಸಾಹಿತಿಗಳು ಬರೆದ ವಿಮರ್ಶೆಗಳ ಸಂಕಲನ-'ಮಮತೆಯ ಮಂದರ' . ಪತ್ನಿ ಶೋಭಾವತಿಯ ಧೈರ್ಯ, ಸಂಯಮ ಸೇರಿದಂತೆ ಒಟ್ಟು ವ್ಯಕ್ತಿತ್ವವನ್ನು ಮಹಾತಾಯಿ ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದು, ಈ ಕೃತಿಯು ಓದುಗರಲ್ಲಿ ಉಂಟು ಮಾಡಿರುವ ಪ್ರಭಾವಗಳನ್ನು, ಪರಿಣಾಮಕಾರಿ ಶೈಲಿಯನ್ನು ಇಲ್ಲಿಯ ಬರಹಗಳಲ್ಲಿ ಕಾಣಬಹುದು. ಸಂಪಾದಕರ ನುಡಿಯಲ್ಲಿ ಶಭುಲಿಂಗ ವಾಲ್ದೊಡ್ಡಿ ಅವರು, ಹತ್ತಾರು ಕನಸುಗಳ ಹೊತ್ತು ಬಡತನದ ಸಾಗರದಲ್ಲಿ ಬಾಳ ದೋಣಿ ಸಾಗಿಸಿಕೊಂಡು ಹೋಗುತ್ತಿರುವಾಗ, ನನ್ನ ಬಾಳ ಸಂಗಾತಿ ಶಶಿಕಲಾ ಅನಾರೋಗ್ಯದಿಂದ ಬಳಲಿ ನಾಲ್ಕು ಜನ ಮಕ್ಕಳಿಗೆ ನನ್ನ ಮಡಿಲಿಗಿಟ್ಟು ಮರಳಿಬಾರದೂರಿಗೆ ಹೋದಳು. ಪುಟ್ಟ ಪುಟ್ಟ ನಾಲ್ಕು ಮಕ್ಕಳು ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಕಷ್ವಾಗತೊಡಗಿತು. ಅಲ್ಲದೆ ನಾನು ನಿತ್ಯ ಕೂಳಿನ ಕಾಳಿಗಾಗಿ ಹೋರಾಡುವದು ಒಂದೆಡೆಯಾದರೆ, ಮಕ್ಕಳ ತಂದೆ ತಾಯಿಗಳ ಪಾಲನೆ ಪೋಷಣೆ ಮಾಡುವುದು ಇನ್ನೂ ಕಷ್ಟವಾಗತೊಡಗಿತು. ಇದನ್ನು ಕಂಡು ಅಪ್ಪ ಅಮ್ಮ, ಬಂಧು ಬಾಂದವರ ಒತ್ತಾಯದ ಮೇರೆಗೆ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ಮಾಣಿಕಪ್ಪ ರಾಜಮ್ಮ ದಂಪತಿಗಳ ಮಗಳಾದ ಶೋಭಾವತಿಯನ್ನು ಬಾಳ ಸಂಗತಿಯಾಗಿ ಮಾಡಿಕೊಂಡೆ ಎಂದು ಇಲ್ಲಿ ತಮ್ಮ ಜೀವನದಲ್ಲಿ ನಡೆದ ಕೆಲವೊಂದು ಘಟನೆಗಳನ್ನು ಬರವಣಿಗೆಯ ಮುಖೇನ ವಿವರಿಸಿದ್ದಾರೆ. 

About the Author

ಶಂಭುಲಿಂಗ ವಾಲ್ದೊಡ್ಡಿ

ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ)  ಪ್ರಶಸ್ತಿ-ಪುರಸ್ಕಾರಗಳು: ಅವರ  ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ'  ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ.    ...

READ MORE

Related Books