ಕಲ್ಲು ಸಕ್ಕರೆ

Author : ರಾಜೇಶ್ ಬಿ. ಹೊನ್ನೇನಹಳ್ಳಿ

Pages 102

₹ 80.00




Year of Publication: 2018
Published by: ಚಾಣಕ್ಯ ಪ್ರಕಾಶನ
Address: ’ಕಾವ್ಯಶ್ರೀ’ ಹೇಮಾವತಿ ನಗರ, ಹಾಸನ -573202
Phone: 9108554099

Synopsys

’ಕಲ್ಲು ಸಕ್ಕರೆ’ ವಿಮರ್ಶೆಗಳ ಸಂಕಲನ. ಇಲ್ಲಿ ಕಾವ್ಯತತ್ವವಾದ-ಕಾವ್ಯತ್ವದ ಆಗುವಿಕೆ ಮತ್ತು ಮಾಗುವಿಕೆ ಎಂಬ ತಿಳಿವಳಿಕೆ ಸಹಜವಾಗಿದೆ. ಒಟ್ಟು 12 ವಿಮರ್ಶಾ ಲೇಖನಗಳಿವೆ. ’ತುಂತುರು ಮಳೆಯೊಳಗೊಂದು ಘಳಿಗೆ ನೆನೆಯುತಾ' ಎನ್ನುವ ಲೇಖನದ ಆರಂಭದಲ್ಲಿಯೇ “ಕಾವ್ಯ ಎನ್ನುವುದು ಭಯದಿಂದ ಬಲವಂತವಾಗಿ ಹಾಗೂ ಅವಸರದಿಂದ ಕಾಗದದ ಮೇಲೆ ಗೀಚುವ ಅಕ್ಷರದ ಮೊತ್ತವಲ್ಲ ಅಥವಾ ಪರೀಕ್ಷೆ ಅಲ್ಲ. ಅದೊಂದು ಅಂತರಂಗದ ಕಟ್ಟುವಿಕೆ, ಭಾವನೆಗಳೊಂದಿಗೆ ಆಡುವ ಚದುರಂಗದ ಆಟ, ವೇದನೆ-ಸಂವೇದನೆಗಳ ನಡುವೆ ಮೂಡುವ ವೈಚಿತ್ಯ್ರದ ಶಾಶ್ವತ ಚಿತ್ರ ಕಾವ್ಯ ಸ್ವತಂತ್ರ  ಪಕ್ಷಿ. ಅದಕ್ಕೆ ಯಾವುದರ, ಯಾರೊಬ್ಬರ ಹಂಗಿಲ್ಲ. ನೆಲದಾಳದಿಂದ ಅಣಬೆ ಹೊರಪಡುವ ರೀತಿ, ಮಲ್ಲಿಗೆ ಮೊಗ್ಗಿನಿಂದ ಪರಿಮಳ ಚೆಲ್ಲಿದಂತೆ, ಕವಿಮನದ ಮನೆಯಿಂದ ಹೊರಡುವ ಸುಗಂಧ ಪರಿಮಳ ಕಾವ್ಯ. ಪ್ರತಿಯೊಬ್ಬ ಓದುಗನನ್ನು ಮನದ ಕದ ತಟ್ಟಿಬರುತ್ತದೆ. ಇನ್ನು ಕೆಲವು ಕಾವ್ಯಗಳು ಓದುಗನನ್ನು ಚಿಂತೆನೆಗೆ ಹಚ್ಚುತ್ತವೆ.

About the Author

ರಾಜೇಶ್ ಬಿ. ಹೊನ್ನೇನಹಳ್ಳಿ

ಕವಿ ರಾಜೇಶ್ ಬಿ. ಹೊನ್ನೇನಹಳ್ಳಿ, "ಆತ್ಮದೀಪ" ಮತ್ತು "ಕೊಳಲನಾದ" ಕವನ ಸಂಕಲನಗಳನ್ನು ಪ್ರಕಟಿಸಿದ್ದು, ‘ಕಲ್ಲು ಸಕ್ಕರೆ ....ಬತ್ತಳಿಕೆ’  ವಿಮರ್ಶಾ ಕೃತಿ , ‘ಚೆಂದಳಿರು’, ‘ನಕ್ಷತ್ರ ತೆನೆ’, ‘ನನ್ನ ದಿನಗಳು’ ಬಿಡಿ ಬರಹಗಳ ಕೃತಿ ಹೊರತಂದಿದ್ದಾರೆ. ಹಲವು ಸಂಪಾದನಾ ಕೃತಿಗಳಲ್ಲೂ ಇವರ ಕವನಗಳು ಪ್ರಕಟವಾಗಿವೆ. ಪ್ರಸ್ತುತ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ...

READ MORE

Related Books