ಶೂನ್ಯ ಸಂಪಾದನೆಗಳು: ಸಾಂಸ್ಕೃತಿಕ ಮುಖಾಮುಖಿ

Author : ಅಮರೇಶ ನುಗಡೋಣಿ

Pages 186

₹ 80.00




Year of Publication: 2002
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆಯ ಜತೆಗೆ ನಂತರ ಬಂದಿರುವ ಮೂರು ಶೂನ್ಯಸಂಪಾದನೆಗಳನ್ನು ಮುಂದಿಟ್ಟುಕೊಂಡು ಸಮಕಾಲೀನ ದೃಷ್ಟಿಕೋನ ದಿಂದ ನಡೆಸಿರುವ ಸಂವಾದದ ಫಲವೇ ಈ ಗ್ರಂಥ. ಇದರಲ್ಲಿ ಒಟ್ಟು ೧೪ ಅಧ್ಯಯನ ಲೇಖನಗಳಿವೆ. ಈ ಕೃತಿಯಲ್ಲಿ ಅಡಕವಾಗಿರುವ ಅಧ್ಯಾಯಗಳೆಂದರೆ: ಶೂನ್ಯಸಂಪಾದನೆ : ನೆನಪಿನ ತೋಟದಲ್ಲಿ ತಿರುಗಾಟ; ,ಶೂನ್ಯಸಂಪಾದನೆಗಳು : ಓದುವುದು ಹೇಗೆ?; ಶೂನ್ಯಸಂಪಾದನೆಗಳು: ಆಧುನಿಕ ವ್ಯಾಖ್ಯಾನ ಗಳ ಹಿಂದಿನ ತಾತ್ವಿಕತೆ , ಶೂನ್ಯಸಂಪಾದನೆಗಳು ರಚನಾ ವಿನ್ಯಾಸ; ಅನುಸಂಧಾನದ ಹೊಸ ಸಾಧ್ಯತೆಗಳು , ಅರಿವೆಂಬ ಅಲಗ ಅವಧಾನ ತಪ್ಪದೆ.ಹಿಡಿ , ಶೂನ್ಯಸಂಪಾದನೆಗಳು : ಕೆಲವು ಟಿಪ್ಪಣಿಗಳು , ಶೂನ್ಯಸಂಪಾದನೆ ಮತ್ತು ಡೆಮಾಕ್ರಸಿ ,ಶೂನ್ಯಸಂಪಾದನೆ : ನನ್ನ ಓದು ,ಅಲ್ಲಮನ ಜೀವನದ ಕಥಾನಕಗಳು ಶೂನ್ಯಸಂಪಾದನೆಗಳ ಅಧ್ಯಯನಗಳು; ಮೌಖಿಕ ಪರಂಪರೆಗಳು. 

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books