ಸಾಹಿತ್ಯ, ಸೃಜನಶೀಲತೆ ಮತ್ತು ನಾನು

Author : ಯಶವಂತ ಚಿತ್ತಾಲ

Pages 120

₹ 80.00




Year of Publication: 2005
Published by: ವಸಂತ ಪ್ರಕಾಶನ
Address: 360, 10/B ಮೇನ್ ಜಯನಗರ 3ನೇ ಬ್ಲಾಕ್ ಬೆಂಗಳೂರು - 11
Phone: 9986020852

Synopsys

ಕನ್ನಡ ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಯಶವಂತ ಚಿತ್ತಾಲರ ಪ್ರಬಂಧಗಳ ಸಂಕಲನ ’ಸಾಹಿತ್ಯ, ಸೃಜನಶೀಲತೆ ಮತ್ತು ನಾನು’. ಈ ಸಂಕಲನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಆರು ಟಿಪ್ಪಣಿಗಳಿವೆ. ಈ ಟಿಪ್ಪಣಿಗಳು ಲೇಖಕರ ಸೃಜನಶೀಲ ಮಿಡಿತ ಹಿಂದಿರುವ ಜೀವನ್ಮುಖಿ ಬೇರುಗಳ ಅನ್ವೇಷಣೆಯಿದೆ. ಎರಡನೆ ಭಾಗದಲ್ಲಿ ಎಂಟು ಬರಹಗಳಿವೆ. ಇವು ಸಾಹಿತ್ಯವನ್ನು ಕುರಿತ ತಾತ್ವಿಕ ಚರ್ಚೆ ಹಾಗೂ ಕೃತಿ ವಿಮರ್ಶೆಯನ್ನು ಒಳಗೊಂಡಿವೆ.

ಈ ಸೃಜನೇತರ ಗದ್ಯ ಬರಹಗಳ ಬಗ್ಗೆ ಹಿರಿಯ ವಿಮರ್ಶಕ ಕೆ. ವಿ. ನಾರಾಯಣ ಅವರು ’ಸೃಜನಶೀಲ ಲೇಖಕರೊಬ್ಬರು, ಕೃತಿ ರಚನೆಯ ಹಿಂದಿರುವ ಪ್ರೇರಣೆಗಳನ್ನು ವಿವೇಚಿಸುವ ಸಂದರ್ಭಗಳು ಕನ್ನಡದಲ್ಲಿ ತೀರಾ ಕಡಿಮೆ. ಆ ಬಗೆಯ ಸಾಹಿತ್ಯಕ್ಕೆ ಇಲ್ಲಿನ ಟಿಪ್ಪಣಿಗಳು ಯೋಗ್ಯ ಸೇರ್ಪಡೆ. ಈ ಟಿಪ್ಪಣಿಗಳಲ್ಲಿ ಲೇಖಕರು ಮುಖ್ಯವಾಗಿ ಸಾಹಿತ್ಯದ ಜೀವನ ಸಂಯೋಜನಾ ಸಾಮರ್ಥ್ಯವನ್ನು, ಅದರ ಸಾವಯವ ಸಂಘಟನಾ ನೆಲೆಗಳನ್ನು, ಅನೂಹ್ಯ ಸಂಬಂಧ ರಚನಾ ಕೌಶಲವನ್ನು ಸಂಬಂಧರಹಿತ ಘಟನೆಗಳ ಮುಖಾಮುಖಿಯಲ್ಲಿ ಹೊಸ ಸತ್ಯಗಳ ಹೊಳಹುಗಳನ್ನು ನೀಡುವ ಶಕ್ತಿಯನ್ನು ವಿವರಿಸಿದ್ದಾರೆ. ಈ ವಿವರಣೆಯೂ ರೋಚಕವೂ ಹೃದ್ಯವೂ ಆಗುವಂತೆ ನೋಡಿಕೊಂಡಿದ್ದಾರೆ. ಸಾಹಿತ್ಯ ರಚನೆ ಕೇವಲ ಬುದ್ಧಿಪ್ರಧಾನ ಚಟುವಟಿಕೆ ಎಂಬುದು ಹೊರಕವಚ ಮಾತ್ರವಾಗಿದ್ದು ಒಳಗೆ ಅಡಗಿರುವ ತರ್ಕದೂ ರ ಸಂಗತಿಗಳ ಪರಿಚಯ ಇಲ್ಲಿ ಸಾಧ್ಯ’ ಎಂದು ವಿವರಿಸಿದ್ದಾರೆ.

’ಇಲ್ಲಿನ ಸಾಹಿತ್ಯ ಮೀಮಾಂಸೆಯ ಟಿಪ್ಪಣಿಗಳಲ್ಲಿಯೂ ಕೆಲಸ ಮಾಡುವ ಮನಸ್ಸು ಸೃಜನಶೀಲ ಲೇಖಕನದ್ದೇ ಆಗಿದೆ. ಕೃತಿ ರೂಪ ತಳೆಯುವ ಹಿಂದಿನ ಪ್ರಕ್ರಿಯೆಗಳನ್ನು, ಪ್ರೇರಣೆಗಳನ್ನು ಗುರುತಿಸುವ ಯತ್ನಕ್ಕೆ ಒತ್ತು ಬಿದ್ದಿದೆ. 'ಕಥಾ ಸಾಹಿತ್ಯದಲ್ಲಿ ತಂತ್ರ', 'ಸಾಹಿತ್ಯ ಮತ್ತು ಸಾಮಾಜಿಕ ಪ್ರಜ್ಞೆ ಕುರಿತ ಎರಡು ಟಿಪ್ಪಣಿಗಳು ಮೇಲಿನ ಮಾತಿಗೆ ಪುರಾವೆಯಾಗಿವೆ’ ಎಂದು ನಾರಾಯಣ ಅವರು ಈ ಪುಸ್ತಕದ ಬರಹಗಳ ಬಗ್ಗೆ ಬರೆದಿದ್ದಾರೆ.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books