ಒಲಿದಂತೆ ಹಾಡಿರುವೆ

Author : ಸಿದ್ಧರಾಮ ಹೊನ್ಕಲ್

Pages 328

₹ 200.00




Year of Publication: 2022
Published by: ಬೆರಗು ಪ್ರಕಾಶನ
Phone: 9945922151

Synopsys

ಲೇಖಕ ಸಿದ್ಧರಾಮ ಹೊನ್ಕಲ್ ಅವರ ವಿಮರ್ಷಾ ಕೃತಿ ʻಒಲಿದಂತೆ ಹಾಡಿರುವೆʼ. ಸಿದ್ದರಾಮ ಹೊನ್ಕಲ್‌ ಅವರು ಈ ವರೆಗೆ ಮುನ್ನುಡಿ ಬರೆದ 150ಕ್ಕೂ ಅಧಿಕ ಕೃತಿಗಳಲ್ಲಿ 101 ಸಾಹಿತ್ಯ ಕೃತಿಗಳನ್ನು ಆಯ್ಕೆಮಾಡಿ ಅವುಗಳನ್ನು ಇಲ್ಲಿ ಅವಲೋಕನ ಮಾಡಿದ್ದಾರೆ.  

 ಲೇಖಕ ಉದಯಕುಮಾರ ಹಬ್ಬು ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ,‌ ಸಿದ್ದರಾಮ ಹೊನ್ಕಲ್ ಅವರ 'ಒಲಿದಂತೆ ಹಾಡಿರುವೆ..ʼ ಕೃತಿ ಹೈದರಾಬಾದ್‌ ಕರ್ನಾಟಕದ ಸಾಹಿತಿಗಳ ಅಧ್ಯಯನ ಮಾಡುವವರಿಗೆ ಒಂದು ಆಕರ ಗ್ರಂಥವಾಗಿ ಉಪಯುಕ್ತವಾಗುವ ಬಹು ಮಹತ್ವದ ಕೃತಿಯಾಗಿದೆ. ಇಂತಹ ರಸವಿಮರ್ಶೆಗಳು ಬೇಕು ಸಾಹಿತಿಗಳಿಗೆ. ಇವರು ವಿವಿಧ ಲೇಖಕರ, ಅವರು ಪ್ರಸಿದ್ಧರೂ ಇರಬಹುದು, ಉದಯೋನ್ಮುಖ ಲೇಖಕರು, ಕವಿಗಳೂ, ವಿಮರ್ಶಕರೂ ಇರಬಹುದು. ಆ ಎಲ್ಲ ಕೃತಿಗಳನ್ನು ಸಹೃದಯ ಓದುಗರಾಗಿ ಲೇಖಕರ ಬೆನ್ನುತಟ್ಟುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದಾರೆ. 

 ಇವರು ಅವಲೋಕನ ಮಾಡಿದ ಎಲ್ಲ ಕೃತಿಗಳ ಕುರಿತು ಮೃದು ಧೋರಣೆಯಿಂದಲೆ ಬರೆದಿದ್ದಾರೆ. ಅವರು ಹೆಚ್ಚಾಗಿ ಹೈದರಾಬಾದ್ ಕರ್ನಾಟಕದ ಸಾಹಿತಿಗಳು, ಕಾದಂಬರಿಕಾರರು, ಗಝಲ್ ರಚಯಿತರ, ಕವಿಗಳ ಕೃತಿಗಳ ಅವಲೋಕನಗಳನ್ನು ಮಾಡಿದ್ದಾರೆ. ಕೃತಿಗಳನ್ನು ಓದುಗರು ಓದುವಂತೆ ಪ್ರೇರೇಪಣೆ ನೀಡುವ ಚಂದದ ಬರಹಗಳು. ಅನೇಕ ಗಝಲ್ ಸಂಕಲನಗಳನ್ನು ಹೊರತರುವ ಮೂಲಕ ಗಜಲ್ ಸಾಹಿತ್ಯ ಕ್ಷೇತ್ರವನ್ನು ಇತರ ಗಜಲ್ ಸಾಧಕರ ಜೊತೆ ಸೇರಿ ತಾವು ಒಬ್ಬ ಸಾಧಕರೇ ಆಗಿ ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದಿದ್ದಾರೆ. 

 ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. 

About the Author

ಸಿದ್ಧರಾಮ ಹೊನ್ಕಲ್
(22 December 1960)

ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು.  ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು.  ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...

READ MORE

Reviews

https://www.prajavani.net/artculture/book-review/olidante-hadiruve-book-review-kannada-literature-1010486.html

Related Books