ಓದಿನ ಜಾಡು

Author : ರಂಗನಾಥ ಕಂಟನಕುಂಟೆ

Pages 252

₹ 160.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಸಾಹಿತ್ಯ, ಸಂಸ್ಕೃತಿ ಕುರಿತು ನಡೆಸುವ ಶೋಧದ ಕಾರಣಕ್ಕೆ ರಂಗನಾಥ ಕಂಟನಕುಂಟೆ ಅವರ ’ಓದಿನ ಜಾಡು’ ಮುಖ್ಯವಾಗಿ ತೋರುತ್ತದೆ. ಒಟ್ಟು ೨೦ ಲೇಖನಗಳನ್ನು ಹೊಂದಿರುವ ಕೃತಿ ಹಲವು ಒಳನೋಟಗಳ ಮೂಲಕ ಸೆಳೆಯುತ್ತದೆ. ಹೊಸ ತಲೆಮಾರಿನ ವಿಮರ್ಶೆ ನವೀನ ಶೈಲಿಯಲ್ಲಿ ತಲೆ ಎತ್ತಿನಿಂತಂತೆ ಭಾಸವಾಗುತ್ತದೆ. 

ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ನೆಲೆಗಳು, ಸಂಸ್ಕೃತಿ ವಿಮರ್ಶೆಯಾಗಿ ಸಾಹಿತ್ಯದ ಓದು, ಸಾಂಸ್ಕೃತಿಕ ಓದಿನ ಪರಿಕಲ್ಪನೆಗಳ ತಾತ್ವಿಕ ತೊಡಕು, ಪರಿಕಲ್ಪನೆಗಳ ಅನುವಾದ ಮತ್ತು ವೈಚಾರಿಕತೆಯ ಗೊಂದಲ, ಮಂಟೇಸ್ವಾಮಿ ಪರಂಪರೆಯ ಮುಖಾಮುಖಿಯ ಸವಾಲು, ಜನಪದ ಸಾಹಿತ್ಯದ ಜನಪರತೆಯ ಕುರಿತ ಅನುಮಾನಗಳು, ಕನ್ನಡ ರಾಷ್ಟ್ರೀಯತೆ ಚಿಂತನೆಯ ಹೆಜ್ಜೆಗುರುತುಗಳು, ಕಿ.ರಂ ಕಣ್ಣಲ್ಲಿ ಸಾಹಿತ್ಯದ ಓದು, ಲಂಕೇಶ್-ಚೈತನ್ಯದ ನೆಲೆಗಳ ಶೋಧಕ ರೀತಿಯ ಲೇಖನಗಳ ಮೂಲಕ ಕೃತಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ. ವರ್ತಮಾನವನ್ನು ಕಾಡುತ್ತಿರುವ ಹಲವು ವಿಚಾರಗಳು ಮತ್ತು ಸಾಹಿತ್ಯಿಕ ಸಾಂಸ್ಕೃತಿಕ ತೊಡಕುಗಳ ಹಿನ್ನೆಲೆಯಲ್ಲಿ ಇಲ್ಲಿನ ಬರಹಗಳು ರೂಪು ತಳೆದಿವೆ. ಕನ್ನಡ ಕಥನಗಳಲ್ಲಿ ಭಾಷೆಯ ಬಳಕೆ ಮತ್ತು ಕನಕನ ಬಗೆಗೆ ಬರೆದ ಲೇಖನಗಳು ರಂಗನಾಥರ ವಿಮರ್ಶಾ ಸಾಮರ್ಥ್ಯವನ್ನು ಎತ್ತಿ ಹಿಡಿಯುವಂತಿವೆ. 

About the Author

ರಂಗನಾಥ ಕಂಟನಕುಂಟೆ

ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...

READ MORE

Related Books