ನಾಡಿ ನೀರು ಮತ್ತು ನೆತ್ತರು

Author : ಮಾರ್ಷಲ್ ಶರಾಂ

Pages 112

₹ 100.00




Year of Publication: 2013
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ.
Phone: 9141833556

Synopsys

ನಾಡಿ ನೀರು ಮತ್ತು ನೆತ್ತರು ಕೃತಿಯಲ್ಲಿ ಹತ್ತು ವಿಮರ್ಶಾ ಲೇಖನಗಳಿವೆ. ಡಾ. ಮಾರ್ಷಲ್ ಶರಾಂ ಅವರು ಕೃತಿಯಲ್ಲಿಆರಂಭದಲ್ಲೇ ನಾ.ಡಿಸೋಜ ಅವರ ಸಾಹಿತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಮತ್ತು ಗಂಭೀರ ಸಾಹಿತ್ಯ ಕುರಿತ ತಾತ್ವಿಕ ಪ್ರಶ್ನೆಯನ್ನು ಎತ್ತುತ್ತಾರೆ. ಈ ಪ್ರಶ್ನೆ ದೀರ್ಘ ಕಾಲ ಜೀವಂತವಾಗಿದ್ದು ಬಗೆ ಹರಿಯದ ಸಂಗತಿಯಾಗಿಯೇ ಉಳಿದಿದೆ.  ಕಾಲಾತೀತ ನೆಲೆಯಲ್ಲಿ ಪಂಥ ಪಂಗಡಗಳ ಗೆರೆ ಅಳಿಸಿಹೋಗಿ ಜೀವ ಪರವಾಗಿ ಉಳಿಯುವ ಪ್ರಕ್ರಿಯೆಯೆ ಮುಖ್ಯವಾಗುತ್ತದೆ. ನಾ.ಡಿಸೋಜ ಅವರ ಒಟ್ಟಾರೆ ಸಾಹಿತ್ಯ ಅದು. ಕಥೆ ಇರಲಿ, ಕಾದಂಬರಿ ಇರಲಿ, ಮಕ್ಕಳ ಸಾಹಿತ್ಯವಿರಲಿ ಈ ಗುಣದಿಂದಾಗಿ ಪ್ರಸ್ತುತವಾಗುತ್ತದೆ. 

ನಾ.ಡಿಸೋಜ ಅವರು ಹಿರಿಯ ಸಾಹಿತಿ ಮಾಸ್ತಿಯವರಿಂದ ಹಿಡಿದು ಕಾಲಕಾಲಕ್ಕೆ ಬಂದ ಸಾಹಿತ್ಯ ಚಳವಳಿಗಳೊಂದಿಗೆ ಅನುಸಂಧಾನ ಮಾಡಿಕೊಂಡು ಬಂದಿದ್ದಾರೆಂದೇ ಅನಿಸುತ್ತದೆ. ಅವೆಲ್ಲದರ ಸಕಾರಾತ್ಮಕ ಅಂಶಗಳನ್ನು ಅವರು ಗ್ರಹಿಸುತ್ತಲೇ ತನ್ನ ಅನುಭವದ ಪರಿಸರದ ತಲ್ಲಣಗಳಿಗೆ ಬರವಣಿಗೆಯಲ್ಲಿ ಮುಖಾಮುಖಿಯಾಗುತ್ತಾರೆ. 'ಮುಳುಗಡೆ', 'ದ್ವೀಪ', 'ಒಡ್ಡು' ಮುಂತಾದ ಕಾದಂಬರಿಗಳ ವಸ್ತು ಒಂದೇ ಆದರೂ ದೃಷ್ಟಿಕೋನ ವಿಭಿನ್ನ, ಪ್ರಳಯ ಹಾಗೂ ಪ್ರಣಯದ ಚೌಕಟ್ಟಿನ ಅಂತಿಮ ಫಲಿತಾಂಶ ಅವನತಿ ಅಥವಾ ನಾಶ, ಅದು ಸಂಸ್ಕೃತಿ ಮತ್ತು ಜನಾಂಗದ ಮೇಲೆ ಬೀರುವ ಪರಿಣಾಮಗಳನ್ನು ಅವರ ಕೃತಿಗಳು ವಿಶಾಲ ಭಿತ್ತಿಯಲ್ಲಿ ಪರಿಶೀಲಿಸುತ್ತವೆ. ಅಧಿಕಾರಶಾಹಿ ಮೋಸ ಜೊತೆಗೆ ಜನರ ಸ್ವಾರ್ಥ ತೆಕ್ಕೆ ಹಾಕಿಕೊಂಡು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುವ ಪ್ರಕ್ರಿಯೆ ಅವರ ಕಾದಂಬರಿ, ಕಥೆಗಳ ದೃಷ್ಠಿಧೋರಣೆಯನ್ನು ನಿರ್ಣಯಿಸುತ್ತದೆ. 

About the Author

ಮಾರ್ಷಲ್ ಶರಾಂ

ಮಾರ್ಷಲ್ ಶರಾಂ- ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ.ಮಾರ್ಷಲ್ ಶರಾಂರವರು ಉಪನ್ಯಾಸ ವೃತ್ತಿಯೊಂದಿಗೆ ಕೆಲವು ವಿಶೇಷ ಪ್ರವೃತ್ತಿಗಳನ್ನು ರೂಢಿಸಿಕೊಂಡಿದ್ದಾರೆ. ಪರಿಸರ ಹೋರಾಟ, ಪ್ಲಾಸ್ಟಿಕ್ ನಿರ್ಮೂಲನಾ ಚಳುವಳಿ, ಚಾರಣಗಳ ಸಂಘಟನೆ, ವ್ಯಕ್ತಿತ್ವ ವಿಕಸನ ಶಿಬಿರಗಳು, ಮಕ್ಕಳ ಶಿಬಿರಗಳು ಹೀಗೆ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಂಸ್ಕೃತಿಯ ಕುರಿತಂತೆ ಇವರು ಮುನ್ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರಸಿದ್ದ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ನೂರೈವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಕವಿತೆಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಮರ್ಶಾ ಲೇಖನಗಳನ್ನು ...

READ MORE

Related Books