ಕುವೆಂಪು ಕಾದಂಬರಿಗಳಲ್ಲಿ ಪರಿಸರ

Author : ಗುರುಪಾದ ಮರಿಗುದ್ದಿ

Pages 22

₹ 5.00




Year of Publication: 1999
Published by: ಪ್ರಸಾರಾಂಗ
Address: ನ್ನಡ ವಿಶ್ವವಿದ್ಯಾಲಯ, ಹಂಪಿ-581276

Synopsys

ಮನುಷ್ಯನ ಬದುಕು ಮತ್ತು ಪರಿಸರಗಳ ನಡುವಿನ ಸಂಘರ್ಷ ಸಾಮರಸ್ಯಗಳನ್ನು ಕುವೆಂಪು ಅವರು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ ಬಗೆಯನ್ನು ಈ ಕೃತಿ ಚರ್ಚಿಸುತ್ತದೆ.

 ಹೂವಯ್ಕನಂತಹ ಪಾತ್ರಗಳ ಮೂಲಕ ಇಲ್ಲಿ ಪ್ರಕಟವಾಗಿರುವ ತತ್ವವೆಂದರೆ ಪ್ರಕೃತಿಯು ಸತ್ಯದ, ಸೌಂದರ್ಯದ, ಶಿವಮಯತೆಯ ಇನ್ನೊಂದು ರೂಪವಾಗಿದೆ ಎಂಬುದು. ಪ್ರಕೃತಿ ಭೂಮದಲ್ಲಿ, ಶಕ್ತಿಯಲ್ಲಿ ದೇವರಿಗೆ ಸಮಾನವಾಗಿದೆ. “ದೇವರು ಈ ಜಗತ್ತನ್ನೆಲ್ಲಾ ಸೃಷ್ಟಿ ಮಾಡಿದ್ದಾನೆ. ಅವನು ಎಲ್ಲೆಲ್ಲಿಯೂ ಇದ್ದಾನೆ....ಬೆಳಿಗ್ಗೆ ಸೂರ್ಯನಾಗಿ ಮೂಡಿ ಬರುತ್ತಾನೆ. ರಾತ್ರಿ ಕತ್ತಲೆಯ ರೂಪದಿಂದ ಬರುತ್ತಾನೆ. ಅವನೇ ಗಾಳಿಯಾಗಿ ಬೀಸುತ್ತಾನೆ, ಮಳೆಯಾಗಿ ಸುರಿಯುತ್ತಾನೆ. ಮಿಂಚಾಗಿ ಹೊಳೆಯುತ್ತಾನೆ'' (ಕಾ.ಹೆ.೧೭೮) ಎಂದು ಹೂವಯ್ಯ ಸೀತೆಗೆ ತಿಳಿಸುತ್ತಾ, ಮುಂದುವರೆದು "ದೊಡ್ಡದೆಲ್ಲಾ ದೇವರೇ' ಎಂದುಬಿಡುವನು. ಪ್ರಕೃತಿಗೂ,ದೇವರಿಗೂ ಅಭಿನ್ನವಾಗಿ ಕಾಣುವ ತತ್ವವು ಕಾದಂಬರಿಗಳಲ್ಲಿ ತುಂಬಿಕೊಂಡಿದೆ; ಪ್ರ ಕೃತಿ ಚಿತ್ರಣದ ಹಿಂದೆ. ಈ ತತ್ವವೇ ಕೆಲಸ ಮಾಡಿದೆ.

                 ಕಾದಂಬರಿಗಳಲ್ಲಿಯ ಪರಿಸರ 'ತನ್ನ ಅಸ್ತಿತ್ವದಿಂದ ಶಕ್ತಿ ಸಾಮರ್ಥ್ಯದಿಂದ, ನದಿಪ್ರವಾಹ, ಗಾಳಿ, ಮಳೆ, ಬೆಂಕಿ, ಬಿಸಿಲು, ಮಿಂಚು, ಗಿಡ ಮರ ಬಳ್ಳಿ, ಪಕ್ಷಿ ಪ್ರಾಣಿಗಳ ಮೂಲಕ ಪ್ರಸ್ಫುಟವಾಗಿದೆ. ಅದು ಜನರ ಬದುಕನ್ನು, ಅವರ ಸಂಸ್ಕೃತಿಯನ್ನು ಕಟ್ಟಿದೆ, ರೂಪಿಸಿದೆ. ಜನರು ಅದರ ಲೀಲೆಗೆ ಬಾಗಿದ್ದಾರೆ; ಆರಾಧನೆ ಪೂಜೆ ಮಾಡಿದ್ದಾರೆ. ಭಯಪಟ್ಟಿದ್ದಾರೆ;ಹರಕೆ ಬಲಿ ನೀಡಿದ್ದಾರೆ. ಮನೆಗಳು ಗುಡಿಸಿಲುಗಳು, ಗದ್ದೆ ತೋಟಗಳು ದೇವಾಲಯ ತೀರ್ಥಸ್ಥಳಗಳು ಎಲ್ಲ ಕಾಡಿನ ನಡುವೆ ಬೆಟ್ಟಸಾಲುಗಳ ನಡುವೆ ನಿರ್ಮಾಣಗೊಂಡಿವೆ.ಅಲ್ಲಿಯ ಗಿಡಮರ, ಪ್ರಾಣಿಪಕ್ಷಿ ಮತ್ತು ಇತರ ಕಾಡಿನ ಉತ್ಪತ್ತಿಗಳಿಗೆ ಬೆಲೆ ಕಟ್ಟುವಂತಿಲ್ಲ; ಅಷ್ಟು ಅಪೂರ್ವ ಅಮೂಲ್ಯವಾಗಿವೆ. ಇಂಬಳದಿಂದ ಹುಲಿಯವರೆಗೆ ಅಪಾಯಗಳ ಸಾಲುಸಾಲು ಬಾಯ್ದೆರೆದದ್ದೂ ಇರುವುದರಿಂದ ಸಾವು ಕ್ರೌರ್ಯ ಹಿಂಸೆಗಳೂ ಪ್ರಚ್ಛನ್ನವಾಗಿವೆ. ಮಲೆನಾಡು ಇಲ್ಲಿ ನಿಜಕ್ಕೂ ಮಲೆತುಕೊಂಡುದ್ದು; ಮಲೆ ಮತ್ತು ನಾಡುಗಳು ಒಂದಾಗಿಬಿಟ್ಟಿವೆ. ಆದರೆ ಆತ್ಮಶ್ರೀ ದೊರೆಯುವುದಿಲ್ಲಿ; ಭವ್ಯತೆ ತೋರುವುದಿಲ್ಲಿ; ಒಂದು ಹಕ್ಕಿಯದನಿಯೂ ಆ ಲೋಕದ ಸೇತುಬಂಧವಾಗುವುದಿಲ್ಲಿಯೇ.

                            ಈ ಕಾದಂಬರಿಗಳಲ್ಲಿಯ ಹಸಿರು. ಕಣ್ಣಿಗೆ ಮೆತ್ತಿಕೊಳ್ಳುತ್ತದೆ; . ಮನಸ್ಸಿಗೆ ತುಂಬಿಕೊಳ್ಳುತ್ತದೆ. ಮನೆಯ ಹೊರಗೆ ಕಾಲಿಟ್ಟರೆ, ತಲೆಯೆತ್ತಿ ದೃಷ್ಟಿಸಿದರೆ ಪ್ರಕೃತಿಯ ಬಣ್ಣಬೆಡಗು ರಾರಾಜಿಸುತ್ತದೆ. ಪಕ್ಸಿಕಾಶಿಯ "ಹಸುರು' ಕವನದ ಹೇಳಿಕೆ ಸತ್ಯವೆನಿಸುತ್ತದೆ.ಈ ಅನುಭವ ಅನುಭೂತಿ ಎಲ್ಲರಿಗೂ. ಲಭಿಸುತ್ತದೆ”

ಹಸುರತ್ತಲ್‌! ಹಸುರಿತ್ತಲ್‌!

ಹಸುರೆತ್ತಲ್‌. ಕಡಲಿನಲಿ

ಹಸುರ್ಗಟ್ಟಿತೊ ಕವಿಯಾತ್ಮಂ

ಹಸುರ್ನೆತ್ತರ್‌. ಒಡಲಿನಲಿ.

 

 

About the Author

ಗುರುಪಾದ ಮರಿಗುದ್ದಿ
(20 June 1956)

ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’.  ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...

READ MORE

Related Books