ಶಿವರಾಮ ಕಾರಂತರ ಬೆಟ್ಟದ ಜೀವ

Author : ಶ್ರೀಧರ ಹೆಗಡೆ ಭದ್ರನ್‍

Pages 180

₹ 110.00




Year of Publication: 2022
Published by: ಅರವಿಂದ್ ಇಂಡಿಯಾ
Address: 645/ಎ, 6ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ, ವಿಜಯನಗರ, ಬೆಂಗಳೂರು- 560040
Phone: 08040924213

Synopsys

ಡಾ. ಶ್ರೀಧರ ಹೆಗಡೆ ಭದ್ರನ್ ಅವರು ಸಂಪಾದಿಸಿರುವ ವಿಮರ್ಶಾ ಲೇಖನಗಳ ಸಂಕಲನ ‘ಶಿವರಾಮ ಕಾರಂತರ ಬೆಟ್ಟದ ಜೀವ’. 1943ರಲ್ಲಿ ಧಾರವಾಡದ ಮನೋಹರ ಗ್ರಂಥ ಮಾಲೆಯಿಂದ ಬೆಟ್ಟದ ಜೀವ ಮೊದಲು ಪ್ರಕಟವಾಯಿತು. ಅಂದಿನಿಂದ ಹತ್ತಾರು ಮುದ್ರಣಗಳನ್ನು ಕಂಡಿರುವ, ಹಲವು ಶೈಕ್ಷಣಿಕ ಹಂತಗಳಲ್ಲಿ ಪಠ್ಯಪುಸ್ತಕವಾಗಿ ನಿಯಮಿತವಾಗಿದ್ದ ಬೆಟ್ಟದ ಜೀವ ಇಂದಿಗೂ ತನ್ನ ತಾಜಾತನದಿಂದ ಗಮನ ಸೆಳೆಯುವ ಕೃತಿ. ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದವಾಗಿರುವ ಬೆಟ್ಟದಜೀವ ಹತ್ತಿರ ಹತ್ತಿರ ಎಂಟು ದಶಕಗಳಿಂದ ಚಲಾವಣೆಯಲ್ಲಿರುವ ಕಾದಂಬರಿ. ಇದೇ ಕಾರಣಕ್ಕೆ ಸಹೃದಯರ ಮೆಚ್ಚುಗೆಯೊಂದಿಗೆ ವಿಮರ್ಶಕರ ಚರ್ಚೆಗೂ ನಿರಂತರವಾಗಿ ಇದು ಒಳಗಾಗುತ್ತ ಬಂದಿದೆ. ಕಾರಂತರ ಅನುಭವವಿಶಿಷ್ಟ ದ್ರವ್ಯ ಹದವಾಗಿ ಬೆರೆಚ ಕೃತಿ ಎಂಬುದೇ ಕಾದಂಬರಿಯ ಹೆಗ್ಗಳಿಕೆ. ವಸ್ತು ತಂತ್ರಗಳೊಂದಿಗೆ ಸಾರ್ಥಕ ಪಾತ್ರ ಪ್ರಪಂಚದಿಂದ ಕೂಡಿರುವ ಕಾದಂಬರಿ ಬಾಳನ್ನು ತಿಳಿಯಲು ಬೇಕಾದ ಸಾಧನಗಳನ್ನು ನಿರೂಪಿಸಿದೆ. ಬೆಟ್ಟದಜೀವ ಕಾದಂದಬರಿಯ ಕುರಿತು ಇದುವರೆಗೆ ಹಲವು ದೃಷ್ಟಿಕೋನಗಳ ವಿಮರ್ಶೆ ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಬರೆಹಗಳನ್ನು ಸಂಗ್ರಹಿಸುವುದು ಮತ್ತು ಹೊಸ ತಲೆಮಾರಿನ ವಿಮರ್ಶಕರ ಪ್ರತಿಕ್ರಿಯೆಗಳನ್ನು ದಾಖಲಿಸುವುದು ಪ್ರಸ್ತುತ ಪುಸ್ತಕದ ಮೂಲ ಉದ್ದೇಶ ಎಂದಿದ್ದಾರೆ.

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books