ಬೇಂದ್ರೆಯವರ ಕಾವ್ಯ ಸೃಷ್ಟಿಯ ಸ್ವರೂಪ

Author : ಜಿ.ಎಸ್. ಶಿವರುದ್ರಪ್ಪ

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಬೇಂದ್ರೆಯವರ ಕಾವ್ಯ ಸೃಷ್ಟಿಯ ಸ್ವರೂಪವನ್ನು ಮುಟ್ಟಿನೋಡುವ ಯತ್ನ ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರದು. ಬೇಂದ್ರೆ ಕಾವ್ಯ ಸೃಜನೆಯ ಹಲವು ಮಗ್ಗುಲುಗಳನ್ನು ಕೃತಿ ಪರಿಚಯಿಸುತ್ತದೆ. 

ಕೃತಿಯಲ್ಲಿರುವ ಕೆಲವು ಸಾಲುಗಳು ಬೇಂದ್ರೆಯವರ ಕಾವ್ಯದ ಉತ್ತುಂಗವನ್ನು ವರ್ಣಿಸುವುದು ಹೀಗೆ: ಬೇಂದ್ರೆ ಅಂದರೆ ಕಾವ್ಯ, ಕಾವ್ಯ ಅಂದರೆ ಬೇಂದ್ರೆ ಅನ್ನುವಷ್ಟರಮಟ್ಟಿಗೆ ಕವಿತೆಯನ್ನೆ ತಮ್ಮ ಕೇಂದ್ರ ಕಾಳಜಿಯನ್ನಾಗಿ ಮಾಡಿಕೊಂಡು ಬದುಕಿದವರು ಬೇಂದ್ರೆಯವರು. ಕಾವ್ಯೇತರವಾದ ಹಲವು ಪ್ರಕಾರಗಳಲ್ಲಿಯೂ, ನಾಟಕ, ಹರಟೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ಅನುವಾದ ಇತ್ಯಾದಿ ಕ್ಷೇತ್ರಗಳಲ್ಲಿ - ಅವರು ಗಣನೀಯವಾದ ಗೆಲುವನ್ನು ಪಡೆದರೆಂಬುದು ನಿಜವಾದರೂ ಅವರು ತಮ್ಮ ಸಮಗ್ರ ವ್ಯಕ್ತಿತ್ವವನ್ನು ಇಡಿಯಾಗಿ ತೊಡಗಿಸಿಕೊಂಡದ್ದು ಕವಿತೆಯಲ್ಲಿಯೇ. ಆದಕಾರಣವೇ ಅವರ ಕವಿತೆ ತನ್ನ ಗೇಯಗಾರುಡಿಯಿಂದ, ಛಂದೋವೈವಿಧ್ಯ ಹಾಗೂ ಭಾಷಾ ವೈವಿಧ್ಯಗಳಿಂದ ಸಮೃದ್ಧವಾದ ಅನುಭವ ಪ್ರಪಂಚಗಳನ್ನು ಅನಾವರಣಗೊಳಸುತ್ತ ಕನ್ನಡ ಜನಮನವನ್ನು ಮರುಳುಗೊಳಿಸಿದೆ. ಅದು ತನ್ನ ಮೂಲಗುಣವಾದ ಉತ್ಸಾಹ ಮತ್ತು ಲವಲವಿಕೆಗಳಿಂದ ಸದಾ ಪುಟಿಯುವ ಚಿಲುಮೆಯ ಲಕ್ಷಣಗಳನ್ನು ಒಳಗೊಂಡಿದೆ. ಬೇಂದ್ರೆಯವರ ವ್ಯಕ್ತಿತ್ವವೇ ಒಂದು ಚೈತನ್ಯದ ಚಿಲುಮೆ ಎಂದರೆ ಅದೇನೂ ಉತ್ತೇಕ್ಷೆಯ ಮಾತಲ್ಲ.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books