ಕನ್ನಡಿಯ ನೋಟ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 152

₹ 125.00




Year of Publication: 2002
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ. 7, 2ನೇ ಮುಖ್ಯರಸ್ತೆ, ಜಬ್ಬಾರ್‌ ಬ್ಲಾಕ್‌, ವೈಯಾಳಿಕಾವಲ್‌, ಬೆಂಗಳೂರು-03

Synopsys

ಹಿರಿಯ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ವಿಮರ್ಶಾ ಬರೆಹಗಳ ಸಂಕಲನ. ಈ ಸಂಕಲನದಲ್ಲಿ 15 ಲೇಖನಗಳಿವೆ. ಆಧುನಿಕ ಕನ್ನಡ ಸಾಹಿತ್ಯ ಮತ್ತು ಪುರಾಣ, ಯೋಗೀಶ್ವರರ ತತ್ತ್ವವಿಚಾರ, ಬೇಂದ್ರೆ, ಕುವೆಂಪು ಮತ್ತು ಪುತಿನ ಕವಿತೆಗಳಲ್ಲಿ ಕೊಳಲಿನ ಪ್ರತಿಮೆ, ಕುವೆಂಪು ಅವರ ಎರಡು ಕವಿತೆಗಳು, ಚಕೋರಿ ಆನುಭಾವಿಕ ನೆಲೆಗಳ ವಿನ್ಯಾಸ, ಸಮಗಾರ ಭೀಮವ್ವ : ಒಂದು ಟಿಪ್ಪಣಿ, ಕೊಳಲಿನ ಕರೆ, ಕಣವಿ ಅವರ ಎರಡು ಕವಿತೆಗಳು, ಕಣವಿ ಸಮಗ್ರ ಕಾವ್ಯ : ಒಂದು ಟಿಪ್ಪಣಿ, ಮೂಡ್ನಾಕೂಡು ಚಿನ್ನಸ್ವಾಮಿಯವರ 'ನಾನೊಂದು ಮರವಾಗಿದ್ದರೆ', ವಿ. ಜಿ. ಭಟ್ಟರ ಕಾವ್ಯದಲ್ಲಿ ವಿಡಂಬನೆ, ವ್ಯಂಗ್ಯ, ಭಾರತ ಸಿಂಧುರಶ್ಮಿ : ಸ್ವತಂತ್ರ ನಿರ್‍ಮಿತಿ - ಕೆಲವು ಮೌಲಿಕ ಪ್ರಸಂಗಗಳು, ಕರ್ಣಾಟ ಕಾದಂಬರಿ : ಅಕ್ಷಮಾಲ ತಾಂಬೂಲ, ಮನುಮುನಿ ಗುಮ್ಮಟದೇವ, ಕನ್ನಡ ಕಾವ್ಯದ ಮೇಲೆ ಸಂಸ್ಕೃತ ಕಾವ್ಯ ಪ್ರಭಾವದ ನೆಲೆಗಳು ಎಂಬ ಲೇಖನಗಳನ್ನು ಸಂಕಲನ ಒಳಗೊಂಡಿದೆ.

ವಿದ್ವಾಂಸ ನಿ. ಮುರಾರಿ ಬಲ್ಲಾಳರು ’ಮಲ್ಲೇಪುರಂ ನಮ್ಮ ನಡುವಿನ ಕರ್ನಾಟಕದ ಒಬ್ಬ ವಿಶಿಷ್ಟ ವಿದ್ವಾಂಸ, ಇವರು ಕನ್ನಡ-ಸಂಸ್ಕೃತ - ಸಾಹಿತ್ಯಗಳೆರಡರಲ್ಲೂ ಆಳವಾದ ವಿಮರ್ಶಾತ್ಮಕ ತಿಳವಳಿಕೆ ಪಡೆದವರು. ಶಬ್ಬ ಸೂತಕದಾಚಿನ ಅಗಮ್ಯವನ್ನು ತನ್ನ - ಅಂತಃಶೀಲತೆಯಲ್ಲಿ ಪರಿಭಾವಿಸಿ ನೆಲೆನಿಲ್ಲಲು ತವಕಿಸಿದವರು, ಆ ನಿಟ್ಟಿನಲ್ಲಿ ನಡೆಯುತ್ತಿರುವವರು. ದಿಗಂತದಾಚಿನ ನೋಟವನ್ನು ತನ್ನ ಅಂತಃಕರಣದ ಕನ್ನಡಿಯಲ್ಲಿ ಪ್ರತಿಬಿಂಬಿಸುವವರು. ಹಾಗಾಗಿಯೇ ಅವರ 'ಕನ್ನಡಿ ನೋಟ'ದ ಬಿಂಬನವು ಸಮಗ್ರವನ್ನು ದಾಟಿಕೊಳ್ಳಲು ತುಡಿಯುವಂಥದು. ಈ ಪುಸ್ತಕವು ಕನ್ನಡ ಕವಿತೆಯ ಹಲವು ಮುಖಗಳನ್ನು, ಹಲವಂದದ ನೆಲೆಗಳನ್ನು ಹುಡುಕಲು ತೊಡಗುತ್ತದೆ, ಈಗ ಕಾವ್ಯದ ಅನುಸಂಧಾನವನ್ನು ಬೌದ್ಧಿಕವಾಗಿ, ತರ್ಕಬದ್ಧವಾಗಿ ವಿಮರ್ಶಿಸುವ ಹಲವು ಬಗೆಯ ವಿಮರ್ಶಾಕ್ರಮಗಳು ನಮ್ಮ ನಡುವೆ ಇವೆ. ಇಂಥ ವೇಳೆಯಲ್ಲಿ ಮಲ್ಲೇಪುರಂ, ಕಾವ್ಯಗರ್ಭದಲ್ಲಿ ವಿಶ್ವಕದೃಷ್ಟಿಯನ್ನು - ಅನ್ವೇಷಿಸುವ ಅಪೂರ್ವ ಧ್ವನಿ ವಿಧಾನವನ್ನು ವಿನ್ಯಾಸಗೊಳಿಸುವ ಕಡೆ ದಿಟ್ಟತೆಯಿಂದ ನಡೆದಿದ್ದಾರೆ. ಇದು ಕ್ಲಾಸಿಕಲ್ ಕಾವ್ಯ ಮತ್ತು ಆಧುನಿಕ ಕಾವ್ಯದ ಬಹು ಮಹತ್ವದ ಕವಿತೆಗಳ ಕುರಿತ ಅನುಸಂಧಾನದ ನಿಲುವುಗನ್ನಡಿಯಲ್ಲಿ ನಮಗೆ ಕಾಣುತ್ತದೆ. ಇದು ದಿಟವಾದ ಕಾವ್ಯಮೀಮಾಂಸಾ ಕ್ರಮವೇ ಹೌದು. ಕನ್ನಡಿಯ ನೋಟವು ಕವಿತೆಗಳನ್ನು ಕುರಿತ ವಿಮರ್ಶಾಗ್ರಂಥ, ಇದು ಕವಿತೆಗಳ ಅನುಸಂಧಾನ ಲೋಕದಲ್ಲಿ ಅಪೂರ್ವ ಕೃತಿಯೆಂಬ ನಂಬಿಕೆ ನನ್ನದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books