ಭೀಮೆಯ ತೀರದಲ್ಲಿ ಕಾವ್ಯದ ಬುಗ್ಗಿ

Author : ಬಿ.ಎಂ. ರಾವ್ ಆನೂರು

Pages 90

₹ 150.00




Year of Publication: 2015
Published by: ಚೇತನ್ ಪ್ರಕಾಶನ
Address: ಮಹಾಂತೇಶ ಶಾಲೆ ಹಿಂಭಾಗ, ಬಳೂರಗಿ ರಸ್ತೆ, ಅಫಜಲಪುರ, ಜಿಲ್ಲೆ ಕಲಬುರಗಿ
Phone: 9663089561

Synopsys

ಕವಿ ಹಾಗೂ ಲೇಖಕ ಬಿ.ಎಂ. ರಾವ್ ಆನೂರು ಅವರ ವಿಮರ್ಶಾತ್ಮ ಬರಹಗಳ ಸಂಗ್ರಹ ಕೃತಿ-ಭೀಮೆಯ ತೀರದಲ್ಲಿ ಕಾವ್ಯದ ಬುಗ್ಗಿ. ಕಲಬುರಗಿ ಜಿಲ್ಲೆಯ ಸುಮಾರು 20 ಲೇಖಕರ ಪುಸ್ತಕಗಳಿಗೆ 20 ವಿಮರ್ಶಕರಿಂದ ವಿಮರ್ಶೆ ಬರೆಯಿಸಿ, ಅವುಗಳನ್ನು ಸಂಪಾದಿಸಿದ ಕೃತಿ ಇದು. ಈ ಪುಸ್ತಕಗಳಲ್ಲಿ ಕವನ ಸಂಕಲನ, ಕಥಾ ಸಂಕಲನಗಳು ಹಾಗೂ ಲೇಖನಗಳ ಕೃತಿಗಳೂ ಸೇರಿವೆ. ಕಲಬುರಗಿ ಜಿಲ್ಲೆಯ ಲೇಖಕರಿಗೂ, ಅವರ ಕೃತಿಗಳಿಗೆ ವಿಮರ್ಶೆಯೂ ದೊರಕಿಸಿದ್ದು ಈ ಕೃತಿಯ ಹೆಗ್ಗಳಿಕೆ. ವಿಮರ್ಶಕ ಶ್ರೀಶೈಲ ನಾಗರಾಳ ಅವರು ಕೃತಿಗೆ ಮುನ್ನುಡಿ ಬರೆದಿದ್ದರೆ, ರೈತ ಪರ ಹೋರಾಟಗಾರ ಶಿವಕುಮಾರ ನಾಟೇಕಾರ ಬೆನ್ನುಡಿ ಬರೆದಿದ್ದಾರೆ.

 

 

 

About the Author

ಬಿ.ಎಂ. ರಾವ್ ಆನೂರು

ಕವಿ ಬಿ.ಎಂ.ರಾವ್ ಆನೂರು ಮೂಲತಃ ಕಲಬುರಗಿ ಜಿಲ್ಲೆಯ  ಅಫಜಲಪುರ ತಾಲೂಕಿನ ಆನೂರು ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕಲಬುರಗಿಯಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ ನಂತರ ಬೆಂಗಳೂರು ವಿ.ವಿ.ಯಿಂದ ಎಂ.ಎ ಪದವೀಧರರು. ಮೈಸೂರು ವಿ.ವಿ.ಯಿಂದ ಎಂಫಿಲ್ ಪದವೀಧರರು. ಸದ್ಯ, ಅಫಜಲಪುರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು.ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಅಹಿಂದ ನೌಕರರ ಸಂಘದ ಅಧ್ಯಕ್ಷರಾಗಿ, ತಾಲೂಕು ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ, ದೇವರಾಜುಅರಸು ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದರು. ಕೃತಿಗಳು: ಕಣ್ಣಂಚಿನ ಹನಿಗಳು, ತೀರದ ತೆರೆ, ಶಿಕ್ಷಕರ ಸಾಹಿತ್ಯ, ಭಾವನೆಯ ಗೊಂಚಲು, ಮನದೊಳಗಿನ ಮೌನ, ಅಲೆಗಳು, ಭೀಮಾತೀರದಲ್ಲಿ ...

READ MORE

Related Books