ಕನ್ನಡ ನಾಟಕಗಳು ರಾತ್ರಿ ರೂಪಕಗಳು

Author : ಟಿ. ವೆಂಕಟೇಶಮೂರ್ತಿ

Pages 176

₹ 200.00




Year of Publication: 2022
Published by: ಕಿರಂ ಪ್ರಕಾಶನ
Address: ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜ ನಗರ ಬೆಂಗಳೂರು 560079
Phone: 911020711

Synopsys

ವೆಂಕಟೇಶಮೂರ್ತಿ ಅವರ ಈ ಕೃತಿಯಲ್ಲಿ ಕುವೆಂಪು ಅವರಿಂದ ಮೊದಲ್ಗೊಂಡು ಕಾರ್ನಾಡರ ತನಕ ಹೆಸರಾಂತ ನಾಟಕಕಾರರ ನಾಟಕಗಳನ್ನೇ ಕೇಂದ್ರವಾಗಿಟ್ಟುಕೊಂಡು ಚಿಂತನೆ ನಡೆಸಿಲ್ಲ. ಅದರ ಜೊತೆಗೆ ತನಗಿಂತ ಕಿರಿಯ ಲೇಖಕರ ಬಗ್ಗೆಯೂ ಅವರ ಗಮನವಿದೆ ಎಂಬುದಕ್ಕೆ ತರುಣ ನಾಟಕಕಾರ ನಟರಾಜ ತಲಘಟ್ಟಪುರ ಅವರ ನಾಟಕವನ್ನೂ ಕುರಿತಂತೆ ಬರೆದಿರುವುದೇ ಸಾಕ್ಷಿ. ನಟರಾಜ್ ಅವರ `ಸಾವಿರದ ರಾತ್ರಿ’ ನಾಟಕದ ಕರಾಳ ರಾತ್ರಿಗಳಲ್ಲಿನ ದುರಂತ ಘಟನೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸ್ತ್ರೀ ಸಂಕುಲದ ಸಂಕಟಗಳ ಅನಾವರಣ ಮತ್ತು ಸಾವಿನ ಮುಖಾಮುಖಿಯ ಚಿತ್ರಣಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ. ಹನ್ನೆರಡು ನಾಟಕಗಳ ಬಗ್ಗೆ ಬರೆದ ಈ ವಿಮರ್ಶೆಗಳು ಪ್ರತಿ ನಾಟಕದ ಪ್ರತಿ ಸಾಲನ್ನೂ, ಸಂಭಾಷಣೆಯನ್ನೂ, ದೃಶ್ಯವನ್ನೂ ಸೀಳಿ ನೋಡಿವೆ. ಕನ್ನಡ ನಾಟಕಗಳ ಕೇಂದ್ರ ಕ್ರಿಯೆಯನ್ನು ರಾತ್ರಿ ಕಥಾನಕವೆಂಬಂತೆ ಸಂಬದ್ಧಗೊಳಿಸಿ ಬರೆದಿರುವುದು ಒಂದು ವೈಶಿಷ್ಟ. ಕತ್ತಲು ಎಂಬುದು ಕೇವಲ ರಂಗದ ಮೇಲಿನ ಕತ್ತಲಲ್ಲ. ನಾಟಕಕಾರ ಮತ್ತು ಓದುಗನ ಅಂತರಂಗದ ಕತ್ತಲು. ಅದು ಲೋಕ ವ್ಯಾಪಕವಾಗಬಲ್ಲ ಕತ್ತಲು. ಕೇವಲ ವಿಮರ್ಶಾ ಕೃತಿಯಲ್ಲ. ವಿದ್ವತ್ ಜಗತ್ತಿನ ರಸ ರೋಮಾಂಚನಗಳನ್ನು ಸಹೃದಯರ ಎದೆಯಲ್ಲಿ ಸೃಷ್ಟಿಸುವ ಕೃತಿಯಾಗಿದೆ ಎನ್ನುತ್ತಾರೆ ಎಲ್‌.ಎನ್‌ ಮುಕುಂದರಾಜ್‌.

About the Author

ಟಿ. ವೆಂಕಟೇಶಮೂರ್ತಿ

ಲೇಖಕ, ನಾಟಕಕಾರ ಟಿ. ವೆಂಕಟೇಶಮೂರ್ತಿ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಯಾಜಮಾನ್ಯ ಸಂಕಥನ’ ಅವರ ನಾಟಕ ಕೃತಿ. ...

READ MORE

Related Books