ಇಂದಿನ ಹೆಜ್ಜೆ

Author : ಓ. ಎಲ್. ನಾಗಭೂಷಣಸ್ವಾಮಿ

Pages 108

₹ 40.00




Year of Publication: 1997
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ತಾ: ಸಾಗರ, ಜಿ: ಶಿವಮೊಗ್ಗ-577417

Synopsys

ಶರಣರ ವಚನಗಳ ಮೇಲೆ ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ-ಇಂದಿನ ಹೆಜ್ಜೆ. ಓ.ಎಲ್. ನಾಗಭೂಷಣ ಅವರು ಲೇಖಕರು. ವಿಚಾರ ಸಂಕಿರಣಕ್ಕಾಗಿ, ದಿನದ ಮಾತಿಗಾಗಿ , ಬರೆಯದೇ ಇರಲಾರದ್ದರಿಂದ ಬರೆದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ ಎಂದು ಲೇಖಕರು ಹೇಳಿದ್ದಾರೆ. ಕೃತಿಯಲ್ಲಿ ಪರಾಮರ್ಶನ, ಸಂದರ್ಭಸೂಚಿ, ಶಬ್ದದೊಳಗಣ ನಿಶ್ಯಬ್ದ: ಅಲ್ಲಮನ ಆರು ವಚನಗಳು, ಬೆಡಗಿನ ವಚನಗಳು ಮತ್ತು ಪ್ರತಿಮೆ ಸಂಕೇತಗಳು, ಅರಿವಿನ ಸ್ವರೂಪ: ಅಲ್ಲಮ ಮತ್ತು ಬಸವಣ್ಣನವರ ಚಿಂತನೆಗಳು, ದೇಸೀಯತೆಯ ಪ್ರಶ್ನೆ, ಇಂದಿನ ಹೆಜ್ಜೆಯ ಜೊತೆಗೊಂದಿಷ್ಟು ಮಾತು ಹೀಗೆ ಒಟ್ಟು 13 ವಿಮರ್ಶಾತ್ಮಕ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Related Books