ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯಮೀಮಾಂಸೆ

Author : ಬಸವರಾಜ ಸಬರದ

Pages 210

₹ 180.00




Year of Publication: 2020
Published by: ಪಲ್ಲವಿ ಪ್ರಕಾಶನ
Address: ವಿಶ್ವವಿದ್ಯಾಲಯ ಅಂಚೆ, ಗುಲಬರ್ಗಾ- 585106
Phone: 9886619220

Synopsys

‘ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯಮೀಮಾಂಸೆ’ ಲೇಖಕ ಡಾ. ಬಸವರಾಜ ಸಬರದ ಅವರ ಕೃತಿ. ಈ ಕೃತಿಗೆ ಡಾ.ಎಸ್. ನಟರಾಜ ಬೂದಾಳು ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಡಾ. ಬಸವರಾಜ ಸಬರದ ವಿಮರ್ಶೆ-ಸಂಶೋಧನೆಯ ಕ್ಷೇತ್ರದಲ್ಲಿ ಅನೇಕ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದಂತೆ ಇದು ಇವರ ಪ್ರಥಮ ಕೃತಿಯಾಗಿದ್ದು, ಇಲ್ಲಿ ಮೀಮಾಂಸೆಯ ಹೊಸ ಆಯಾಮಗಳನ್ನು ಬಿಡಿಸಿ ತೋರಿಸಿದ್ದಾರೆ. ಅಂತಹ ಆಯಾಮಗಳು ಇಲ್ಲಿಯ ಕಾವ್ಯ ಮತ್ತು ಕಲೆಗಳಲ್ಲಿ ಎದ್ದು ಕಾಣುವಂತಿವೆ. ಸಬರದ ಅವರ ತತ್ವಪದಗಳ ಒಡನಾಟ ದೀರ್ಘಕಾಲೀನವೆನ್ನುವುದನ್ನು ಅದು ನುಡಿದು ತೋರುತ್ತದೆ. ತಾತ್ವಿಕ ವೈಶಿಷ್ಟತೆಯ ಅನೇಕ ಸಿದ್ಧ ಮಾದರಿಗಳನ್ನು ಸ್ಥಳೀಯತೆಯು ಹೇಗೆ ನಿಭಾಯಿಸಿದೆಯೆನ್ನುವುದು ಈ ಕೃತಿಯ ಮತ್ತೊಂದು ಆಯಾಮ. ದ್ವೈತಾದ್ವೈತಗಳಿಗೆ, ಅವುಗಳನ್ನು ದಾಟಿದ ಬಹುತ್ವಕ್ಕೆ, ಸಾಂಖ್ಯಿಕ ಉಪಾಧಿಗಳಿಂದ ಮುಕ್ತಗೊಳಿಸುವ ಶೂನ್ಯಕ್ಕೆ, ಸಂಕೇತಗಳನ್ನು ಬಂಧಿಸುವ ಸಮಯಾಚಾರಕ್ಕೆ ಸ್ಥಳೀಯತೆ ತೋರಿದ ಪ್ರತಿಕ್ರಿಯೆಯ ಸ್ವರೂಪ ಎಂಥದೆನ್ನುವುದನ್ನು ಗುರಿಯಿಟ್ಟಂತೆ ಈ ಕೃತಿ ಶೋಧಿಸುತ್ತದೆ. ಆಧುನಿಕ ವಚನ ಇವೆಲ್ಲದರ ಜೊತೆ ಮಾತನಾಡುತ್ತಲೇ ಬಸವರಾಜ ಸಬರದ ಅವರು ಬದುಕಿದವರಾದುದರಿಂದ ಇಂತಹದೊಂದು ಹೊತ್ತಗೆ ಅವರಿಂದಲೇ ಬಂದುದು ಸೂಕ್ತವಾದುದ್ದಾಗಿದೆ ಎಂದಿದ್ದಾರೆ ನಟರಾಜ ಬೂದಾಳು. ಹಾಗೇ ಈ ಪುಸ್ತಕದ ಬಹುಭಾಗವನ್ನು ರೊಟ್ಟಿ ಸೀಮೆಯ ಸಂಪತ್ತು ಆವರಿಸಿದೆ. ಹೈದ್ರಾಬಾದ ಕರ್ನಾಟಕದ ಭಾವುಣಿಕೆಯ ಜಗತ್ತನ್ನು ಯಾವುದೂ ಅಮುಖ್ಯವಲ್ಲವೆಂಬ ಅಂತಃಕರಣದಿಂದ ಸಬರದ ಅವರು ನಮ್ಮ ಮುಂದಿಟ್ಟಿದ್ದಾರೆ. ಇದಕ್ಕೆ ಅಗತ್ಯವಾದ ಮೀಮಾಂಸೆಯೊಂದನ್ನು ಸೂತ್ರೀಕರಿಸಿಕೊಳ್ಳಬೇಕಾದ ಹೊಣೆಯನ್ನು ನಮ್ಮೆಲ್ಲರಿಗೆ ನೆನಪಿಸುವ ಕೃತಿಯನ್ನು ನೀಡಿದ್ದಾರೆ. ಪ್ರಾದೇಶಿಕ ಸಾಹಿತ್ಯ ಮೀಮಾಂಸೆಯನ್ನು ಕಟ್ಟಿಕೊಡುವ ಪ್ರಥಮ ಕೃತಿ ಇದಾಗಿದ್ದು, ಸಬರದ ಅವರ ಮೀಮಾಂಸೆಯ ಒಳನೋಟಗಳು ಇಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿವೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books