ತರವಲ್ಲ ತಗಿ ನಿನ್ನ ತಂಬೂರಿ ಸ್ವರ…

Author : ಮೇಟಿ ಮಲ್ಲಿಕಾರ್ಜುನ

Pages 120

₹ 140.00




Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001

Synopsys

ಲೇಖಕ ಮೇಟಿ ಮಲ್ಲಿಕಾರ್ಜುನ ಅವರ ಲೇಖಕ ವಿಮಶಾತ್ಮಕ ಬರಹಗಳ ಸಂಗ್ರಹ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ…’ ಮುನ್ನುಡಿಯ ಮಾತುಗಳಲ್ಲಿ ಹೇಳುವಂತೆ, ಇಂದು ಸಾಹಿತ್ಯ ವಿಮರ್ಶೆ ಕನ್ನಡದ್ದು ಮಾತ್ರವಲ್ಲ ಜಾಗತಿಕವಾಗಿಯೂ ಅತ್ಯಂತ ಸಂಕಷ್ಟದಲ್ಲಿ ಸಿಲುಕಿದೆ. ಇದಕ್ಕೆ ಮುಖ್ಯ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಕ್ರಾಂತಿ. ಬರಹಗಾರರಿಗೆ ಅಡ್ಡಿಯಾಗಿದ್ದ ಪ್ರಕಾಶನದ ಹಂಗನ್ನು ಸಂಪೂರ್ಣವಾಗಿ ತೊಡೆದುಹಾಕಿದೆ. ಡಿಜಿಟಲ್ ಗೋಡೆಗಳ ಮೇಲೆ ನೇರವಾಗಿ ಬರೆದು ಲೋಕದ ಮುಂದೆ ಇಡುವ ಪ್ರಯೋಗ ವಿಶ್ವವ್ಯಾಪಿಯಾದ ನಡೆಯಾಗಿದೆ. ಸೃಜನಶೀಲ ಕೃತಿಗಳನ್ನು ಓದುಗರಿಗೆ ತಲುಪಿಸಲು ಹಿಂದೆ ಇದ್ದ ಅಡ್ಡಿಗಳನ್ನು ಈ ಪ್ರಕ್ರಿಯೆ ಮುಕ್ತವಾಗಿಸಿದಂತೆ, ವಿಮರ್ಶೆಗೆ ಅಗತ್ಯವಿದ್ದ ಪರಿಭಾಷೆಗಳ ಗ್ರಾಮರ್ ನ ಅವಶ್ಯವಿಲ್ಲದೆ ತಮ್ಮ ಯಾದೃಚ್ಛಿಕ ಅಭಿಪ್ರಾಯಗಳನ್ನು ಮೆಚ್ಚುಗೆ ಅಥವಾ ತಿರಸ್ಕಾರಗಳಿಗೆ ಸೀಮಿತವಾಗಿಸುವ ಹೊಸ ವಿದ್ಯಮಾನವು ವಿಮರ್ಶೆ ಎಂಬ ಬೌದ್ಧಿಕ ಅಧ್ಯಯನ ವಿಧಾನದ ತಳಹದಿಯನ್ನು ಸಡಿಲವಾಗಿಸಿದೆ ಎಂಬುದಾಗಿ ದಾಖಲಿಸಲಾಗಿದೆ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books