ಕುವೆಂಪು ಕುರಿತ ಚಿಂತನೆಗಳು

Author : ಹಂಪ ನಾಗರಾಜಯ್ಯ

Pages 92

₹ 70.00




Year of Publication: 2011
Published by: ಸುಂದರ ಪ್ರಕಾಶನ, ಧಾರವಾಡ

Synopsys

ರಾಷ್ಟ್ರಕವಿ ಕುವೆಂಪು ಕುರಿತ ವಿಚಾರಗಳನ್ನು ಹಿರಿಯ ವಿದ್ವಾಂಸ ಹಂ.ಪ. ನಾಗರಾಜಯ್ಯ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಧಾರವಾಡದ ಸುಂದರ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ತಮ್ಮ ಪ್ರಖರ ವಿಚಾರ ವೈಖರಿಯ ಮೂಲಕ ನಾಡಿಗೆ ಪರಿಚಿತರಾವರು ಕುವೆಂಪು. ಕುವೆಂಪು ವೈಚಾರಿಕ ಖಚಿತತೆ ಹಾಗೂ ಅದರ ಜೀವಪರ ಸ್ವರೂಪ, ಕಾವ್ಯ ಚಿಂತನೆಯಲ್ಲಿ ಕುವೆಂಪು ನಡೆಸಿದ ಪ್ರಯತ್ನಗಳನ್ನು ಕುರಿತ ವಿಚಾರಗಳನ್ನು ಮಂಡಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

About the Author

ಹಂಪ ನಾಗರಾಜಯ್ಯ
(07 October 1936)

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು.   ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...

READ MORE

Related Books