ರೂಪ ನಿರೂಪ

Author : ಲಕ್ಷ್ಮಣ ಬಾದಾಮಿ

Pages 48

₹ 70.00




Year of Publication: 2014
Published by: ಅಭಿಲಾಷ ಪ್ರಕಾಶನ
Address: ನೇಕಾರ ಪೇಟೆ ಸಿರೂರ -587156 ಬಾಗಲಕೋಟ ಜಿಲ್ಲೆ
Phone: 8050791997

Synopsys

ಕಲಾವಿದ ಲಕ್ಷ್ಮಣ ಬಾದಾಮಿ ಅವರ ಕೃತಿ-ರೂಪ-ನಿರೂಪ. ದೃಶ್ಯಕಲೆ ಕುರಿತ ಕನ್ನಡದ ಲೇಖನಗಳನ್ನು ಒಟ್ಟುಗೂಡಿಸಲಾಗಿದೆ. ಕೃತಿಗೆ ಮುನ್ನುಡಿ ಬರೆದ ಎಚ್.ಎ. ಅನಿಲಕುಮಾರ ‘ಲಕ್ಷ್ಮಣ ಬಾದಾಮಿ ಅವರ ಈ ಪುಸ್ತಕದಲ್ಲಿ ಹಲವು ವಿಶೇಷಗಳು ಒಮ್ಮೆಲೇ ಗೋಚರಿಸುತ್ತವೆ. ತಾವು ರಚಿಸಿದ ಕಲಾಕೃತಿಗಳ ಬಗ್ಗೆ ಸ್ವತಃ ಆಯಾ ಕಲಾವಿದರೇ 'ವಿವರಣೆ' ನೀಡುವಂತೆ ಅವರಿಂದ ಬರವಣಿಗೆಯನ್ನು ಮಾಡಿಸಿ, ಜೊತೆಗೆ ಪ್ರತಿಯೊಂದು ಕೃತಿಯ ಬಗ್ಗೆಯೂ ಸ್ವತಃ ಲಕ್ಷ್ಮಣ್ ಅವರೇ ಅವುಗಳನ್ನು ವಿಶ್ಲೇಷಿಸಿದ್ದಾರೆ. ಈ ದೃಶ್ಯ ಜುಗಲ್ಬಂದಿಗೆ ಮತ್ತಷ್ಟು ವಿಶೇಷಗಳಿವೆ: "ಕರ್ತೃವಿನ ದೃಷ್ಟಿಕೋನ " ಹಾಗೂ "ವಿಮರ್ಶನ" ಎಂಬೆರಡು ಬರವಣಿಗೆ ಇದನ್ನು ಸಾಬೀತುಪಡಿಸಿವೆ. ಈ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟ ಪ್ರಯೋಗ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ.

 ಲಕ್ಷ್ಮಣರ ಬರವಣಿಗೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಸಾರಾಸಗಟಾಗಿ ಕನ್ನಡ ಕಲಾಸಾಹಿತ್ಯದ ಅಭಿವ್ಯಕ್ತಿಯ ಗುಣಮಟ್ಟವನ್ನು ಕಾಯ್ದುಕೊಂಡಿದೆ-ಇವರ ಭಾಷಾ ಪ್ರಯೋಗ. ಈ ಲೇಖಕರು 1. ತಮ್ಮ ಬರವಣಿಗೆ, 2. ಅವುಗಳಿಗೆ ಮೂಲ ಆಕರಗಳಾದ ಕಲಾವಿದರ ಕೃತಿಗಳು ಮತ್ತು 3. ಅವುಗಳ ಅರ್ಥವಂತಿಕೆಯನ್ನು ವಿವರಿಸುವ ಕಲಾವಿದರ ಬರವಣಿಗೆ - ಇವೆಲ್ಲವನ್ನೂ ಪುಸ್ತಕರೂಪದಲ್ಲಿ ರೂಪಿಸಿರುವುದು ಒಂದರ್ಥದಲ್ಲಿ `ವೃಷಭೇಂದ್ರ ವಿಳಾಸ' ಪುಸ್ತಕವನ್ನು ನೆನಪಿಸುತ್ತದೆ.

ಕಲಾಕೃತಿಯೊಂದನ್ನು ಹೇಗೆ ಗ್ರಹಿಸಬೇಕು ಎಂಬ ಪ್ರಶ್ನೆಗೆ ವಿಶ್ಲೇಷಣಾತ್ಮಕ ವಿವರಣೆ ಮಾತ್ರವೇ ಉತ್ತರಿಸಲು/ಉತ್ತರಿಸುವ ಮಾಧ್ಯಮ ಎಂಬ ರೂಢಿಯನ್ನು ಈ ಪುಸ್ತಕ -ಸ್ವತಃ ಆ ಮಾಧ್ಯಮಕ್ಕೆ ಪರ್ಯಾಯವಾಗಿ ಒದಗಿಬರುವ ಮೂಲಕ - ಪುನರ್ ನಿರ್ಮಾಣ ಮಾಡಿಬಿಟ್ಟಿದೆ ಎಂದು ಪ್ರಶಂಸಿಸಿದ್ದಾರೆ.

About the Author

ಲಕ್ಷ್ಮಣ ಬಾದಾಮಿ

ಲಕ್ಷ್ಮಣ ಬಾದಾಮಿ ಅವರ ಮೂಲ ಹೆಸರು ಲಕ್ಷ್ಮಣ ತುಕಾರಾಮ ಬಾದಾಮಿ. ಇವರು ಮೂಲತಃ ಬಾಗಲಕೋಟ ಜಿಲ್ಲೆ ಸಿರೂರು ಗ್ರಾಮದವರು. ಕಲಾ ವಿಭಾಗದಲ್ಲಿ ಎಂ.ಎಫ್.ಎ., ಎ.ಎಂ., ಜಿ.ಡಿ.(ಆರ್ಟ್) ಪೂರ್ಣಗೊಳಿಸಿದ್ದು, 2008ರಿಂದ ಸರಕಾರಿ ಪ್ರೌಢಶಾಲೆ ಕುರುಕುಂದದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಕಲೆ ಹಾಗೂ ಸಾಹಿತ್ಯ ವೇದಿಕೆ, ಸಿರೂರದ ಮೂಲಕ ಕಳೆದ 15 ವರ್ಷಗಳಿಂದ ಸಾಹಿತ್ಯ, ಜಾನಪದ ಕಲೆಗಳ ಪುನರುತ್ಥಾನಕ್ಕಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಕಲೆಯೊಂದಿಗೆ ಸಾಹಿತ್ಯದತ್ತರು ಆಸಕ್ತಿಹೊಂದಿರುವ ಅವರ ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ...

READ MORE

Related Books