ದೇಶೀವಾದ

Author : ರಾಜೇಂದ್ರ ಚೆನ್ನಿ

Pages 72

₹ 20.00




Year of Publication: 1989
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು - 560002

Synopsys

’ದೇಶೀವಾದ; ಎನ್ನುವುದು ಸಾಹಿತ್ಯ ವಿಮರ್ಶೆಯಲ್ಲಿ ಅಥವಾ ಸಿದ್ಧಾಂತದಲ್ಲಿ ಕಂಡುಬರುವ ಪದ. ದೇಶೀವಾದ ಎನ್ನುವ ಪದವನ್ನು ಇಂಗ್ಲಿಷ್ ಪಾರಿಭಾಷಿಕವಾದ  ‘Nativism’ ನ ತರ್ಜುಮೆಯಾಗಿ ಬಳಸಿಕೊಳ್ಳಲಾಗಿದೆ.

ದೇಶೀವಾದದ ಹಿಂದಿರುವ ಸಂಸ್ಕೃತಿ- ಸಾಹಿತ್ಯದ ಪರಿಕಲ್ಪನೆಗಳು, ಕೆಲವು ಲಕ್ಷಣಗಳು, ಅದರ ವ್ಯಾಪ್ತಿಯನ್ನು ಈ ಕೃತಿ ತಿಳಿಸುತ್ತದೆ. ದೇಶೀವಾದದ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕಾದರೆ ಅನ್ಯ ಸಂಸ್ಕೃತಿ ಮತ್ತು ದೇಶೀ ಸಂಸ್ಕೃತಿಗಳ ಸಂಪರ್ಕದ ಬಗೆಗಿನ ವ್ಯಾಖ್ಯೆಯನ್ನು ಸೂಕ್ಷ್ಮವಾಗಿ ಗ್ರಹಿಸುವ ಬಗ್ಗೆ ’ದೇಶೀವಾದ’ ಚರ್ಚಿಸುತ್ತದೆ.

ಸಾಹಿತ್ಯ ಕ್ಷೇತ್ರದಲ್ಲಿ ದೇಶೀವಾದವು ಅನ್ಯ ಸಾಹಿತ್ಯಕ ಪ್ರಭಾವಗಳ ವಿರುದ್ಧ ದೇಶೀ ಸಾಹಿತ್ಯದ ಅನನ್ಯತೆಯನ್ನು ಈ ಕೃತಿ ಸಮರ್ಥಿಸುತ್ತದೆ. ದೇಶೀವಾದದಲ್ಲಿನ ಇತರೆ ನೆಲೆಗಳ ಬಗ್ಗೆ ಸಂಕ್ಷಿಪ್ತ  ಮಾಹಿತಿಯನ್ನೂ, ದೇಶೀವಾದಿ ನಿಲುವುಗಳು ಹುಟ್ಟಿಕೊಳ್ಳುವ ಸನ್ನಿವೇಶದ ಹಿನ್ನಲೆಯನ್ನೂ ಈ ಕೃತಿ ನೀಡುತ್ತದೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಮುಖ ಸಂದರ್ಭಗಳಲ್ಲಿ ವ್ಯಕ್ತವಾದ ದೇಶೀವಾದಿ ನಿಲುವುಗಳನ್ನು , ಸಾಹಿತ್ಯ ಮಾರ್ಗದಲ್ಲಿ ಗಮನಿಸುವ ಅಂಶವನ್ನು ತೋರಿಸಿಕೊಡುವ ಪ್ರಯತ್ನ ಈ ಕೃತಿಯಲ್ಲಿ ವ್ಯಕ್ತವಾಗಿದೆ.

’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಪುಸ್ತಕಗಳನ್ನು  ಸಾಹಿತಿ ಡಾ, ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದ್ದು, ಲೇಖಕರಾದ ರಾಜೇಂದ್ರ ಚೆನ್ನಿ ಅವರ ರಚನೆಯಲ್ಲಿ ”ದೇಶೀವಾದ ’ಪುಸ್ತಕವನ್ನು ಹೊರತರಲಾಗಿದೆ.

 

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books