ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ

Author : ರಾಜು ಹೆಗಡೆ

Pages 236

₹ 140.00




Year of Publication: 2007
Published by: ಸಪ್ನ ಬುಕ್ ಹೌಸ್
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ್, ಬೆಂಗಳೂರು- 9
Phone: 40114455

Synopsys

‘ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ’ ಲೇಖಕ ರಾಜು ಹೆಗಡೆ ಅವರು ರಚಿಸಿರುವ ಕೃತಿ. ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡರು, ಕನ್ನಡ ಮತ್ತು ಭಾರತೀಯ ನಾಟಕ ಪ್ರಪಂಚದ ಅನನ್ಯ ಪ್ರತಿಭೆ. ಯಯಾತಿ, ತುಘಲಕ್, ಹಯವದನ. ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗ ಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪು ಸುಲ್ತಾನ ಕಂಡ ಕನಸು, ಮಾ ನಿಷಾದ, ಬಿಂಬದವರೆಗೆ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆಯನ್ನು ಕವಿ, ಕತೆಗಾರ, ಡಾ. ರಾಜು ಹೆಗಡೆ ಅವರು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.

ಇತಿಹಾಸ, ಪುರಾಣ, ಜಾನಪದ, ಸಾಮಾಜಿಕ, ವಸ್ತುವಿನ್ಯಾಸದ ವಿಭಿನ್ನ ಆಯಾಮ ಪಡೆದುಕೊಂಡ ಕಾರ್ನಾಡರ ನಾಟಕಗಳು, ವಾಸ್ತವವನ್ನು ಪ್ರತಿಬಿಂಬಿಸುತ್ತವೆ. ಅವುಗಳಲ್ಲಿ ಆಧುನಿಕ ಸಂವೇದನೆ ಅಂತಸ್ಥವಾಗಿದೆ. ಹೆಣ್ಣು-ಗಂಡಿನ ಸಂಬಂಧ, ಅನಾಥ ಪ್ರಜ್ಞೆ, ಪೂರ್ಣತೆ ಅಪೂರ್ಣತೆಯ ಚರ್ಚೆ, ಧರ್ಮ-ರಾಜಕೀಯ ಸಂಬಂಧದ ಸೂಕ್ಷ್ಮತೆಯನ್ನು, ಅಸ್ತಿತ್ವವಾದಿ ನಿಲುವುಗಳನ್ನು ನಿಖರವಾಗಿ ಚರ್ಚಿಸುವ ಕಾರ್ನಾಡರ ನಾಟಕಗಳು, ಬೌದ್ಧಿಕ ಚರ್ಚೆಗೆ ಗುರಿಯಾಗಿವೆ. ಕನ್ನಡ ಮತ್ತು ಭಾರತೀಯ ರಂಗಭೂಮಿಯಲ್ಲಿ ಕಾರ್ನಾಡರ ನಾಟಕಗಳು ಹವ್ಯಾಸಿ ರಂಗಭೂಮಿಯನ್ನು ಅರ್ಥಪೂರ್ಣವಾಗಿ ಬೆಸೆಯುವ ಪ್ರಯತ್ನದ ಫಲವೂ ಆಗಿವೆ. ಈ ಗ್ರಂಥವು ಗಿರೀಶ ಕಾರ್ನಾಡರ ಸಮಗ್ರ ನಾಟಕಗಳ ಅಧ್ಯಯನಕ್ಕೆ ಒಳನೋಟಗಳನ್ನು ಒದಗಿಸುತ್ತದೆ.

About the Author

ರಾಜು ಹೆಗಡೆ
(17 July 1964)

ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ  17ರಂದು ಜನಿಸಿದರು.  ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ).   ...

READ MORE

Related Books