ಸಾಹಿತ್ಯ ಸಂಸ್ಕೃತಿ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 272

₹ 125.00




Year of Publication: 1998
Published by: ಅಂಕಿತ ಪುಸ್ತಕ
Address: 138, ಮೊದಲನೆ ಮಹಡಿ, ಗಾಂಧಿಬಜಾರ್ ಸರ್ಕಲ್ ಬಸವನಗುಡಿ, ಬೆಂಗಳೂರು- 560004
Phone: 6992014

Synopsys

‘ಸಾಹಿತ್ಯ ಸಂಸ್ಕೃತಿ’ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ವಿಮರ್ಶಾ ಲೇಖನಗಳ ಸಂಕಲನ. ಇಲ್ಲಿ ಕೃತಿ-ಸಂಸ್ಕೃತಿ, ಕೆ.ವಿ. ಸುಬ್ಬಣ್ಣ ಅವರ ಆಯ್ದ ಬರಹಗಳು, ಭವ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಸಮಗ್ರ ಗದ್ಯ, ಜುಗಾರಿಕ್ರಾಸ್, ಈವರೆಗಿನ ಹೇಳತೇನ ಕೇಳ, ಗೋವಿಂದಪೈ ಸಂಸೋಧನ ಸಂಪುಟ, ಅಗ್ನಿ ಮತ್ತು ಮಳೆ, ಉಚಲ್ಯಾ, ಬಿಸಿಲ ಹನಿಗಳು, ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ, ಹಳಗನ್ನಡ ಸಾಹಿತ್ಯಾಧ್ಯಯನ ಸಮೀಕ್ಷೆ, ಅರುಣಗೀತ, ಕನ್ನಡ ಸಾಹಿತ್ಯ ಸಂಗಾತಿ, ದೇಸಗತಿ, ಎಕ್ಕುಂಡಿ ನಮನ ಸೇರಿದಂತೆ ಕನ್ನಡ ಸಾಹಿತ್ಯ ಲೋಕದ ಹಲವು ಮಹತ್ವದ ಕೃತಿಗಳ ಕುರಿತ ಸೂಕ್ಷ್ಮ ವಿಮರ್ಶಾ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Related Books