ಆರೋಹಣ

Author : ಸಿ.ಎಸ್.ಭೀಮರಾಯ (ಸಿಎಸ್ಬಿ)

Pages 1

₹ 1.00




Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ - 585 101
Phone: 9448124431, 9880020809

Synopsys

ಆರೋಹಣ' ಸಿಎಸ್.ಭೀಮರಾಯರ ಐದನೆಯ ವಿಮರ್ಶಾ ಲೇಖನಗಳ ಸಂಗ್ರಹ. ಈ ಕೃತಿಯಲ್ಲಿ ಇಪ್ಪತ್ತು ವಿಮರ್ಶಾ ಲೇಖನಗಳಿವೆ. 

ಕೃತಿಯ ಕುರಿತು ಲೇಖಕ ಬಸವರಾಜ ಸಬರದ ಆಡಿರುವ ಮಾತು ಹೀಗಿದೆ: '...ಈ ಕೃತಿ ಭೀಮರಾಯರ ಗಂಭೀರವಾದ ಸಾಹಿತ್ಯ ಅಧ್ಯಯನ, ಚಿಂತನ, ಕಾಳಜಿಗಳನ್ನು ಸಹಜವಾಗಿ ಬಿಂಬಿಸುತ್ತದೆ, ಬಹಳಷ್ಟು ವೈವಿಧವಾದ, ವಿಮರ್ಶೆ ಮತ್ತು ವಿಚಾರಗಳಿಗೆ ಸಂಬಂಧಿಸಿದ ಈ ವಿಶಿಷ್ಟ ಕೃತಿ ಸಾಹಿತ್ಯಾಸಕ್ತರಿಗೆ ಉಪಯುಕ್ತವಾಗುವುದರಲ್ಲಿ ಸಂಶಯವಿಲ್ಲ.'

About the Author

ಸಿ.ಎಸ್.ಭೀಮರಾಯ (ಸಿಎಸ್ಬಿ)

ಲೇಖಕ ಸಿ.ಎಸ್.ಭೀಮರಾಯ  ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ  ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ.  ಕೃತಿಗಳು: ...

READ MORE

Related Books