ಕಾವ್ಯ ಮೀಮಾಂಸೆ: ಭಾರತೀಯ ಮತ್ತು ಪಾಶ್ಚಾತ್ಯ ಹೊಳಹುಗಳು

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 440

₹ 360.00




Year of Publication: 2017
Published by: ಬಂಡಾರು ಪ್ರಕಾಶನ
Address: ಮಸ್ಕಿ

Synopsys

‘ಕಾವ್ಯ ಮೀಮಾಂಸೆ’ ಭಾರತೀಯ ಮತ್ತು ಪಾಶ್ಚಾತ್ಯ ಹೊಳಹುಗಳು ಹಿರಿಯ ಲೇಖಕ, ಸಂಶೋಧಕ ಸಿ.ಪಿ. ಕೃಷ್ಣಕುಮಾರ್ ಅವರ ಕೃತಿ. ಈ ವಿಶಿಷ್ಟವಾದ ಪುಸ್ತಕ ನಿಯತವಾದ ತೌಲನಿಕ ಕಾವ್ಯಮೀಮಾಂಸೆ ಅಲ್ಲ, ಆದರೆ ಹಲವಾರು ತೌಲನಿಕ ಹೊಳಹುಗಳನ್ನು ಒಳಗೊಂಡು, ಸಮನ್ವಯ ಮೀಮಾಂಸೆಯ ಕಡೆಗೆ ಮುಖ ಹಾಕದೆ, ಇದರಲ್ಲಿ ಎರಡು ಭಾಗಗಳಿದ್ದು, ಪೂರ್ವಾರ್ಧ ಸ್ಥೂಲವಾಗಿ ಭಾರತೀಯ ಕಾವ್ಯಮೀಮಾಂಸೆಯನ್ನು, ಉತ್ತರಾರ್ಧ ಪಾಶ್ಚಾತ್ಯ ಕಾವ್ಯಮೀಮಾಂಸೆಯನ್ನು ಕುರಿತಿದೆ. ಮೊದಲ 19 ಲೇಖನಗಳು ಭಾರತೀಯ ಜಿಜ್ಞಾಸೆಯನ್ನು ಒಳಗೊಂಡು, ಆ ಮೇಲಿನ 17 ಲೇಖನಗಳು ಪಾಶ್ಚಾತ್ಯ ಪರಿಶೀಲನವನ್ನು ಕುರಿತಿದೆ, ಪೂರ್ವಾರ್ಧದ ಲೇಖನಗಳು ಸ್ವತಂತ್ರವಾಗಿದ್ದರೆ, ಉತ್ತರಾರ್ಧದ ಲೇಖನಗಳು ಅನುವಾದಗಳಾಗಿವೆ. ಒಟ್ಟಿನಲ್ಲಿ ಎರಡೂ ಭಾಗಗಳು ಪರಸ್ಪರ ಪೂರಕವಾಗಿವೆ.

ಕೃತಿಯಲ್ಲಿ ಕಾವ್ಯ ಸ್ವರೂಪ, ಶಬ್ದಾರ್ಥ ಸ್ವರೂಪ: ಭಾರತೀಯ ದೃಷ್ಟಿ, ಕಾವ್ಯದಲ್ಲಿ ಅಲಂಕಾರಗಳ ಸ್ಥಾನ, ರೀತಿ ಮತ್ತು ಶೈಲಿ, ಧ್ವನಿ: ತತ್ವ: ಕೆಲವು ವಿಚಾರಗಳು, ಧ್ವನ್ಯಾಲೋಕದಲ್ಲಿ ಉಪಮಾಲೋಕ, ರಸತತ್ತ್ವ: ಒಂದು ತ್ರಿಪದಿಯಲ್ಲಿ, ಸಾಧರಣೀಕರಣ, ಕಾವ್ಯ ಮತ್ತು ನೀತಿನಿಷ್ಠ ನಿಲುವುಗಳು, ಕುವೆಂಪು ಕಾವ್ಯ ಮೀಮಾಂಸೆ, ಭವ್ಯತೆ: ಬ್ರಾಡ್ಲೆ ಮತ್ತು ಕುವೆಂಪು, ಅಲ್ಪದಲ್ಲಿ ಭೂಮ, ಕಾವ್ಯ ರಚನೆ ಹೇಗೆ, ಕಾವ್ಯ ಪ್ರತಿಮೆ, ಕಾವ್ಯ ಮತ್ತು ಮನೋವಿಜ್ಞಾನ, ವಿಮರ್ಶೆ: ಕೆಲವು ವಿಚಾರಗಳು, ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಅಂಗೈಯಲ್ಲಿ ಭಾರತೀಯ ಕಾವ್ಯ ತತ್ತ್ವ, ಕಾವ್ಯದ ವಸ್ತು, ಸ್ಪೂರ್ತಿ ಮತ್ತು ಪ್ರತಿಭೆ, ಸಾಹಿತ್ಯ ಮತ್ತು ಭಾಷೆ, ಅರಿಸ್ಟಾಟಲನ ಕಾವ್ಯ ಮೀಮಾಂಸೆ, ಕಾವ್ಯ ಕಲೆ- ಹೊರೆಸ್, ಭವ್ಯತೆ, ಸಾಹಿತ್ಯದ ಸ್ವರೂಪ, ಸಾಹಿತ್ಯದ ಕಾರ್ಯ, ಸಾಹಿತ್ಯ ಮತ್ತು ಜೀವನಚರಿತ್ರೆ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ಮತ್ತು ಸಮಾಜ, ಸಾಹಿತ್ಯ ಮತ್ತು ಭಾವನೆಗಳು, ಕಾವ್ಯದ ಅಧ್ಯಯನ, ಕಾವ್ಯಕ್ಕಾಗಿ ಕಾವ್ಯ, ಪರಂಪರೆ ಮತ್ತು ವ್ಯಷ್ಟಿ ಪ್ರತಿಭೆ, ಮನಃಶಾಸ್ತ್ರ ಮತ್ತು ಸಾಹಿತ್ಯ, ಶುದ್ಧ ಕಾವ್ಯ, ಮಾನಸಿಕ ದೂರ(psychical distance)-ಎಡ್ವರ್ಡ್ ಬುಲ್ಲೋ, ಅನುಕರಣ ತತ್ವ(Theory of limitation)- ಪ್ಲೆಟೋ, ಪ್ರತಿಭಾ ಸಿದ್ಧಾಂತ (Theory of imagination) - ಕೋಲರಿಜ್. ಲೇಖನಗಳು ಸಂಕಲನಗೊಂಡಿವೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books