ಧರಣಿ ಹೆಜ್ಜೆಯ ಸದ್ದು

Author : ಡಾ. ಧರಣೀದೇವಿ ಮಾಲಗತ್ತಿ

Pages 269

₹ 250.00




Year of Publication: 2012
Published by: ಪೂಜಾ ಮುದ್ರಣ ಮತ್ತು ಪ್ರಕಾಶನ
Address: 174, ಇಡಬ್ಲ್ಯೂಎಸ್, 11ನೇ ಕ್ರಾಸ್, ಗಂಗೋತ್ರಿ ಲೇಔಟ್, ಮೈಸೂರು- 570009

Synopsys

‘ಧರಣಿ ಹೆಜ್ಜೆಯ ಸದ್ದು’ ಧರಣಿದೇವಿ ಮಾಲಗತ್ತಿಯವರ ಸಾಹಿತ್ಯ ಮತ್ತು ಚಿಂತನ ಸಂಬಂಧಿತ ವಿಮರ್ಶಾತ್ಮಕ ಪ್ರಬಂಧಗಳ ಸಂಕಲನ. ಇಲ್ಲಿ 5 ಭಾಗಗಳಲ್ಲಿ ವಿಮರ್ಶಾ ಪ್ರಬಂಧಗಳನ್ನು ಸಂಕಲನ ಮಾಡಿದ್ದಾರೆ. ಭಾಗ-1ರಲ್ಲಿ ಬ್ರೆಡ್ ಜಾಮ್ ಮತ್ತು ಈವುರಿವ ದಿವ ಕವನಸಂಕಲನಗಳ ವಿಮರ್ಶೆ ಶೀರ್ಷಿಕೆಯಡಿ ಎಸ್. ಕಲ್ಪನಾ ಅವರು ಬರೆದಿರುವ ‘ಡಾ. ಧರಣಿದೇವಿ ಮಾಲಗತ್ತಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ’, ಧರಣಿದೇವಿ ಅವರ ಕಾವ್ಯದ ವಿಭಿನ್ನ ನೆಲೆಗಳು, ಎಚ್ಚೆಸ್ಕೆ ಅವರ ವ್ಯಕ್ತಿತ್ವದ ಒಳಹೊರಗನ್ನೆಲ್ಲ ಆವರಿಸಿಕೊಳ್ಳುವ ಧರಣಿ ಕಾವ್ಯ, ಡಾ. ಎನ್. ಕೆ. ಕೋದಂಡರಾಮ ಅವರ ಧರಣಿದೇವಿ ಮಾಲಗತ್ತಿ ಅವರ ಈವುರಿವ ದಿವ, ಡಾ.ಕೆ. ಕೇಶವಶರ್ಮ ಅವರ ಶಬ್ದ ಸೂತಕಕ್ಕೆ ಅಂಜದ ಧರಣಿಯವರ ಕಾವ್ಯ, ಡಾ.ಬಿ.ಎ. ವಿವೇಕ ರೈ ಅವರ ಕನ್ನಡ ಕಾವ್ಯ ಉತ್ತರಿಸಬೇಕಾದ ಸವಾಲು, ಡಾ.ಸಿ.ಎನ್. ರಾಮಚಂದ್ರನ್ ಅವರ ವಿಶಿಷ್ಟ ಸಂವೇದನ ಕಾವ್ಯ, ಡಾ. ಸುಮತೀಂದ್ರ ನಾಡಿಗ್ ಅವರ ಹೆಮ್ಮರವಾಗಿ ಬೆಳೆಯಬಹುದಾದ ಸಸಿ, ಡಾ. ಮಾಧವ ಪೆರಾಜೆ ಅವರ ಬೇರೆಯೇ ದಾರಿ ಹುಡುಕುವ ಧರಣಿಯವರ ಕಾವ್ಯ, ಎ.ಪಿ. ವಾತ್ಸಾಯನ ಅವರ ಬ್ರೆಡ್ ಜಾಮ್: ಲಂಕೇಶರ ಎರಡು ಟಿಪ್ಪಣಿ ಸಂಕಲನಗೊಂಡಿವೆ. ಭಾಗ - 2ರಲ್ಲಿ ಆಯ್ದ ಕವನಗಳ ವಿಮರ್ಶೆ ಶೀರ್ಷಿಕೆಯಡಿ ನಾರಾಯಣ ಕೆ. ಕ್ಯಾಸಂಬಳಿ ಅವರ ಧರಣಿದೇವಿ ಮಾಲಗತ್ತಿಯವರ ಈಕೆ ಕವಿತೆಯ ಓದಿನ ನೆಪದಲ್ಲಿ, ಶ್ವೇತಾರಾಣಿ ಎಸ್ ಅವರ ಕರಿಮಣಿ ನುಂಗುವ ಕೊರಳು ವ್ಯಕ್ತಿತ್ವಗಳ ಜಿಜ್ಞಾಸೆ, ಪದ್ಮಾವತಿ ಎನ್ ಅವರ ನಾವು ರಾಣಿಯರು ಕವಿತೆಯ ಚೌಕಟ್ಟಿನೊಳಗಿನ ಹೆಣ್ಣುಗಳು, ಅಂಬರೀಶ್ ಎನ್ ಅವರ ಕ್ಲಿಪ್ ಮತ್ತು ಹಲ್ಲು: ಬಂಧನ ಮತ್ತು ಸ್ವಾತಂತ್ರ್ಯ, ಎಸ್. ಕಲ್ಪನಾ ಅವರ ನಮಸ್ಕಾರ ಹಾಗೂ ಹಪ್ಪಳದ ಹರೆಯ ಹಾಗೂ ಕೆಲವು ವಚನಗಳು, ಭಾರತಿ ಅವರ ಬ್ರೆಡ್ ಜಾಮ್ ಮತ್ತು ನಮಸ್ಕಾರ ಕವನಗಳ ಅಂತರಂಗ, ಎಂ. ಸವಿತ ಅವರ ಫಸ್ಟ್ ಕ್ರೈ ಮತ್ತು ಬ್ರೆಡ್ ಜಾಮ್ ಹೆಣ್ತನದ ಕಾವ್ಯದ ಮಾದರಿ ಕವನಗಳು, ಬಸವರಾಜ ನಾಗವ್ವನವರ ಅವರ ಎರಡಕ್ಷರ ಆ ಪದ ವಿಮರ್ಶಾ ಲೇಖನಗಳು ಸಂಕಲನಗೊಂಡಿವೆ. ಭಾಗ- 3ರಲ್ಲಿ ಇಳಾಭಾರಂತ ಮಹಾಕಾವ್ಯದ ಮಾತು ಮಥನ ಶೀರ್ಷಿಕೆಯಡಿ ನಿ.ಮಾ. ಪ್ರಸನ್ನ ಕುಮಾರ್ ಅವರ ಇಳಾಭಾರತಂ ಮಹಾಕಾವ್ಯದ ಒಂದು ಪ್ರವೇಶ, ಲಿಖಿತ ಜಿ. ಬಾಳಗೋಡು ಅವರ ರಮಣಿ ಧರಣಿಯ ಕಾವ್ಯ ಭಾಮಿನಿ, ಶ್ವೇತಾರಾಣಿ ಎಚ್. ಅವರ ಇಳಾಭಾರತಂ ಗತವೈಭವಕ್ಕೆ ನವ ಭಾಷ್ಯ ವಿಮರ್ಶಾ ಲೇಖನಗಳು ಭಾಗ - 4ರಲ್ಲಿ ವಿಮರ್ಶೆಯ ಕೃತಿಗಳು ಹಾಗೂ ಅಂಕಣ ಬರಹ ಶೀರ್ಷಿಕೆಯಡಿ ಆರ್. ಇಂದಿರಾ ಅವರ ಸ್ತ್ರೀವಾದ ಮತ್ತು ಭಾರತೀಯತೆ: ಸ್ತ್ರೀ ಸಂವೇದನಾ ಸಾಹಿತ್ಯದ ಪುನರ್ ವಿಮರ್ಶೆಗೊಂದು ಆಹ್ವಾನ, ಕೆ.ಎಂ. ಭೈರಪ್ಪ ಅವರ ಭಾರತೀಯ ಮಣ್ಣ ಕಣ್ಣಲ್ಲಿ ಕಂಡ ಸ್ತ್ರೀವಾದ, ಡಾ. ಕವಿತಾ ರೈ ಅವರ ಮಹಿಳೆ ಮತ್ತು ಅಸಾಂಪ್ರದಾಯಿಕತೆ, ಪ್ರವೀಣ್ ಕುಮಾರ್ ಎಸ್. ಅವರ ದಹರಾಕಾಶ, ಡಾ.ಎಸ್.ಡಿ.ಶಶಿಕಲಾ ಅವರ ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ: ಒಂದು ಪಕ್ಷಿನೋಟ, ಡಾ.ಕೆ ಸೌಭಾಗ್ಯವತಿ ಅವರ ಅನನ್ಯ ಬರಹಗಳ ಗುಚ್ಛ: ಸಾಹಿತ್ಯ ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ, ನಿ.ಮಾ. ಪ್ರಸನ್ನಕುಮಾರ್ ಅರ ಇಳೆಯ ಕಣ್ಣು, ಪುಷ್ಪಲತಾ ಎಚ್.ಎಸ್. ಅವರ ಮಹಿಳಾ ಪ್ರಜ್ಞೆ ಮತ್ತು ಅನ್ವಯಿಕತೆ, ಡಾ.ಎಸ್.ಪಿ. ಪದ್ಮಪ್ರಸಾದ್ ಅವರ ಧರಣಿದೇವಿಯವರ ಅಂಕಣ ಬರಹಗಳು, ಡಾ.ಎನ್. ಕೆ. ಲೋಲಾಕ್ಷಿ ಅವರ ಇಳೆಯ ಕಣ್ಣು: ಧರಣಿ ತತ್ವ ನಿರೂಪಣೆ ಲೇಖನಗಳು ಸಂಕಲನಗೊಂಡಿವೆ ಭಾಗ- 5ರಲ್ಲಿ ಸಂದರ್ಶನಗಳು ಶೀರ್ಷಿಕೆಯಡಿ ಚಿದಂಬರ ಬೈಕಂಪಾಡಿ ಅವರ ಪರಸ್ಪರ ದೂರದರ್ಶನದ ಸಂದರ್ಶನ, ಸಂದರ್ಶಕರು, ಪ್ರೊ.ಎಂ. ನೀಲಗಿರಿ ತಳವಾರ್ ಅವರ ಚಂದನ ದೂರದರ್ಶನದ ಸಾಹಿತ್ಯ ಸಂವಾದ ಸಂದರ್ಶಕರು, ಕೆ.ಜಿ. ಮರಿಯಪ್ಪ ಅವರ ಪ್ರಜಾವಾಣಿ: ಲೇಖನಿಯಿಂದ ಲಾಠಿಗೆ ಸಂದರ್ಶಕರು, ಗೀತಾ ಶ್ರೀನಿವಾಸನ್ ಅವರ ಹೆಣ್ಣು ಅಲ್ಲ ವ್ಯಕ್ತಿ ಅಂತ ಗುರುತಿಸಿಕೊಳ್ಳಿ ಹಾಗೂ ಸಿ.ಪಿ.ಕೆ ಮತ್ತು ಆರ್.ಜಿ. ಶಶಿಕಲಾ ಅವರ ಪುಸ್ತಕ ಬಹುಮಾನ: ಒಂದು ಲಘು ಸಂವಾದ ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books