ವಿಸ್ತರಣೆ

Author : ಶ್ರೀಧರ ಹೆಗಡೆ ಭದ್ರನ್‍

Pages 180

₹ 100.00




Year of Publication: 2009
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಶ್ರೀಧರ ಹೆಗಡೆ ಭದ್ರನ್ ಪ್ರತಿಭಾನ್ವಿತ ವಿಮರ್ಶಕ, ಅಧ್ಯಾಪಕ, ಸಂಸ್ಕೃತ , ಜೈನ ಪಠ್ಯಗಳೂ ಸೇರಿದಂತೆ ಕನ್ನಡ ಸಾಹಿತ್ಯವನ್ನು ಆಳವಾಗಿಬಲ್ಲವರು. ’ವಿಸ್ತರಣೆ’ ಕೃತಿಯಲ್ಲಿನ ಲೇಖನಗಳು ಪ್ರಾಸಂಗಿಕವಾಗಿ ಬರೆದುದಾದರೂ ಅದರಾಚೆಗೂ ಅವು ವಿಸ್ತಾರವಾದ ಗ್ರಹಿಕೆ ಮತ್ತು ತಾತ್ವಿಕತೆಗಳ ಕಾರಣದಿಂದಾಗಿ ಪ್ರಸ್ತುತವಾಗಿವೆ. ಸರಳವಾದ ಶೈಲಿಯಲ್ಲಿ ಅಷ್ಟೇ ನೇರವಾದ ಅಭಿಪ್ರಾಯಗಳಲ್ಲಿ ಮತ್ತು ಸ್ಪಷ್ಟ ವಿಚಾರಗಳಲ್ಲಿ ಕೃತಿ ಮತ್ತು ಕೃತಿಕಾರರನ್ನು ಗಮನಿಸುವ, ಗುರುತಿಸುವ ಕೆಲಸವನ್ನು ಶ್ರೀಧರ್ ಹೆಗಡೆ ಭದ್ರನ್ ಈ ಕೃತಿಯಲ್ಲಿ ಮಾಡಿದ್ದಾರೆ. 

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books