ಬೆರಗು

Author : ಮಲ್ಲಮ್ಮ ಯಾಟಗಲ್‌

Pages 86

₹ 90.00




Year of Publication: 2022
Published by: ಸಿದ್ದಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ
Address: ಮುಖ್ಯ ಬೀದಿ, ಸರಸ್ವತಿ ಗೋದಾಮು ಹತ್ತಿರ ಕಲಬುರಗಿ- 585 1011

Synopsys

`ಬೆರಗು’ ಮಲ್ಲಮ್ಮ ಯಾಟಗಲ್ ಅವರ ರಚನೆಯ ನಾಟಕದ ವಿಮರ್ಶೆಯಾಗಿದೆ. ರಂಗಪ್ರದರ್ಶನಗಳ ವಿಮರ್ಶೆ ಎನ್ನುವುದು ನಾಟಕದ ಸರಿ-ತಪ್ಪುಗಳನ್ನ ತಿದ್ದುವ ಅಥವಾ ನಾಟಕದ ಪರಿಣಾಮವನ್ನು ಹೊಗಳುವ ಇಲ್ಲವೇ ವಸ್ತುವಿನ ಮೇಲ್ಪದರಿನ ಗ್ರಹಿಕೆಯನ್ನು ಅವಲಂಬಿಸಿ ರೂಪುಗೊಳ್ಳುವ ಒಂದು ಫಾರ್ಮ್ಯಾಟ್ ಆಗಿದೆ. ಆ ಫಾರ್ಮ್ಯಾಟ್‌ನಲ್ಲಿ ನಾಟಕದ ಹೆಸರು, ತಂಡದ ಹೆಸರು, ನಿರ್ದೇಶಕ ನಟರ ಹೆಸರನ್ನು ಬದಲಿಸಿದರೆ ಸಾಕು ಮತ್ತೊಂದು ಲೇಖನವಾಗುವಷ್ಟು ತೆಳುವಾಗಿದೆ. ಅಂಥ ವಿಮರ್ಶಾ ಲೇಖನಗಳು ರಂಗಭೂಮಿಯ ಸಾಧ್ಯತೆಗಳನ್ನು ಅರಿಯುವಲ್ಲಿ ಸಹಕಾರಿಯಾಗಲಾರವು. ಅದರಲ್ಲೂ ನಾಟಕದ ವಿಮರ್ಶೆಗಳು ಕೇವಲ ಬೆಂಗಳೂರು ಮೈಸೂರಿನಲ್ಲಿ ನಡೆಯುವ ನಾಟಕ ಪ್ರದರ್ಶನಗಳಿಗೆ ಮಾತ್ರವೇ ಸೀಮಿತವಾಗಿರುವ ಹೊತ್ತಿನಲ್ಲಿ ಮಲ್ಲಮ್ಮ ಉತ್ತರ ಕರ್ನಾಟಕದಲ್ಲಿ ನಡೆಯುವ ನಾಟಕ ಪ್ರದರ್ಶನಗಳ ಬಗ್ಗೆ ದಾಖಲೀಕರಣ ಆರಂಭಿಸಿದರು. ಹಾಗಾಗಿ ಇಲ್ಲಿ ದಾಖಲಾಗಿರುವ ಪ್ರಾಯೋಗಿಕ ವಿಮರ್ಶೆಗಳು ವಿಶಾಲ ಕರ್ನಾಟಕದ ರಂಗಭೂಮಿಯ ಚಲನೆಯ ಸೊಗಸಿನವು ಆಗಿದ್ದಾವೆ. ಅಲ್ಲದೆ ಇಲ್ಲಿನ ಲೇಖನಗಳು ಬರೀ ನಾಟಕಗಳ ಕತೆಯನ್ನಷ್ಟೇ ವಿಮರ್ಶಿಸುವ ಗೋಜಿಗೊಳಪಟ್ಟಿಲ್ಲ. ಸ್ವತಃ ರಂಗಭೂಮಿ ನಟಿಯಾಗಿರುವ ಮಲ್ಲಮ್ಮ ತನ್ನದೇ ಆದ ಒಂದು ಹೊಸ ರೀತಿಯ ವಿಮರ್ಶಾ ಮಾದರಿಯನ್ನು ರೂಪಿಸಿಕೊಂಡು ನಾಟಕಗಳ ವಸ್ತು, ಕಾಣ್ಕೆ, ಪ್ರಸ್ತುತಿ ಮತ್ತು ಪರಿಣಾಮಗಳನ್ನು ದಾಖಲಿಸಿದ್ದಾರೆ.

About the Author

ಮಲ್ಲಮ್ಮ ಯಾಟಗಲ್‌

ಯುವ ಬರಹಗಾರ್ತಿ, ಕವಯತ್ರಿ ಮಲ್ಲಮ್ಮ ಯಾಟಗಲ್‌ ಇವರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದವರು.  ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆವರಿಗೆ ಹರಿದ ಬಟ್ಟೆ, ಕೆಂಪು ನಕ್ಷತ್ರದ ಕೆಳಗೆ (ಕವನ ಸಂಕಲನ), ಬೋದಿರಾಜನ ಬಯಲಾಟ, ಬೀದಿಯಲ್ಲಿ ಬಿದ್ದ ಚಂದ್ರಮರು (ನಾಟಕ) ಮುಂತಾದವು. ...

READ MORE

Related Books