ಹೊನ್ನಸಿರಿ

Author : ಮಹೇಂದ್ರ ಕುರ್ಡಿ

Pages 93

₹ 60.00
Year of Publication: 2017
Published by: ಪವನ್ ಪ್ರಕಾಶನ
Address: ಹಟ್ಟಿ ಚಿನ್ನದ ಗಣಿ-585115 ತಾಲೂಕು: ಲಿಂಗಸೂಗೂರು, ಜಿಲ್ಲೆ ರಾಯಚೂರು.
Phone: 9483591141

Synopsys

ಕವಿ ಮಹೇಂದ್ರ ಕುರ್ಡಿ ಅವರು ಬರೆದ ಮೊದಲ ಕವನಗಳ ಸಂಕಲನ-ಹೊನ್ನಸಿರಿ. ಕನ್ನಡಾಂಬೆಗೆ ನುಡಿನಮನ, ನನ್ನ ಬದುಕು, ಕನ್ನಡ ಕೃಷಿ, ನನ್ನ ಕನ್ನಡ, ನಿರಾಳ, ದೀಪ, ಬತ್ತಿದ ಆಸೆ, ಪ್ರೇತಾತ್ಮ, ನೆನಪು, ಆತ್ಮಜ್ಯೋತಿ, ಅಜ್ಞಾನಿ, ಮಡದಿ ಮಡಿಲು, ನಾವು ದೇವರಲ್ಲ ಹೀಗೆ ಸಾಮಾಜಿಕ ಕಳಕಳಿ , ಆಧ್ಯಾತ್ಮಿಕ , ಮೌಢ್ಯತೆ ಮತ್ತು ಪ್ರೀತಿ ಪ್ರೇಮ ಒಳಗೊಂಡು ವಸ್ತು ವೈವಿಧ್ಯತೆ ಇರುವ ಒಟ್ಟು 69 ಕವನಗಳನ್ನು ಸಂಕಲಿಸಿದೆ. ಕವಿತೆಯ ವಸ್ತು, ಶೈಲಿ, ಸಾಮಾಜಿಕ ಹೊಣೆಗಾರಿಕೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕವಿತೆಗಳು ಗಮನ ಸೆಳೆಯುತ್ತವೆ. ಸಾಹಿತಿ ನೀ. ಶ್ರೀಶೈಲ ಅವರು ಕೃತಿಗೆ ಬೆನ್ನುಡಿ ಬರೆದು ‘ ಮಹೇಂದ್ರ ಕುರ್ಡಿ ಅವರಿಗೆ ಪದ ಕಟ್ಟುವ, ಭಾವ ತಟ್ಟುವ ಕಲೆ ಕರಗತವಾಗಿದೆ’ ಎಂದೂ ಮತ್ತು ಸಾಹಿತಿ ಜಿ.ವಿ. ಕೆಂಚನಗುಡ್ಡ  ಅವರು ಕೃತಿಗೆ ಮುನ್ನುಡಿ ಬರೆದು ಕಾವ್ಯ ರಚನಾ ಶೈಲಿಯನ್ನು ಶ್ಲಾಘಿಸಿದ್ದಾರೆ. 


 

About the Author

ಮಹೇಂದ್ರ ಕುರ್ಡಿ
(01 June 1972)

ಲೇಖಕ ಮಹೇಂದ್ರ ಕುರ್ಡಿ ಅವರು ಮೂಲತಃ: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯವರು. ತಂದೆ ಮಲ್ಲಪ್ಪ, ತಾಯಿ ಭೀಮಾಬಾಯಿ.  ತಮ್ಮೂರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢ ನಂತರ ಪದವಿ ಪೂರ್ವ ಶಿಕ್ಷಣ ಪೂರೈಸಿ, ಲಿಂಗಸೂಗೂರಿನ ವಳಬಳ್ಳಾರಿಯ ಚನ್ನಬಸವೇಶ್ವರ ಪದವಿ ಕಾಲೇಜಿನಲ್ಲಿ ಪದವಿ ಹಾಗೂ ರಾಯಚೂರಿನ ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. 1999 ರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಮಿಕರಾಗಿ ಸೇರಿ, ಸದ್ಯ, ಗಣಿ ತಾಂತ್ರಿಕ ವಿಭಾಗದಲ್ಲಿ ಅಪರೇಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2000ರಲ್ಲಿ ಹಟ್ಟಿನ ಚಿನ್ನದ ಗಣಿಯಲ್ಲಿ ಶ್ರೀ ವಿನಾಯಕ ವಿದ್ಯಾ ಸಂಸ್ಥೆ ಸ್ಥಾಪಿಸಿದ್ದಾರೆ. ಪ್ರಸ್ತುತ ಲಿಂಗಸುಗೂರು ತಾಲ್ಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು.   ಕೃತಿಗಳು: ಹೊನ್ನಸಿರಿ ...

READ MORE

Related Books