ವರ್ಣಾವರಣ

Author : ಚಿ.ಸು. ಕೃಷ್ಣಸೆಟ್ಟಿ

Pages 166

₹ 150.00




Year of Publication: 2001
Published by: ಚಿತ್ತಾರ ಪ್ರಕಾಶನ
Address: 754, 3ನೇ ಹಂತ, ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿನಗರ್, ಬೆಂಗಳೂರು- 560098

Synopsys

‘ವರ್ಣಾವರಣ’ ಚಿ.ಸು. ಕೃಷ್ಣಸೆಟ್ಟಿ ಅವರ ಚಿತ್ರಕಲಾ ವಿಮರ್ಶಾ ಲೇಖನಗಳ ಸಂಕಲನ. ಈ ಲೇಖನಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಕಿ.ರಂ. ನಾಗರಾಜ ಅವರು ಕೃತಿಗೆ ಬೆನ್ನುಡಿ ಬರೆದು ‘ಸಮಕಾಲೀನ ಸಾಂಸ್ಕೃತಿಕ ಸಮಸ್ಯೆ, ಸವಾಲುಗಳ ನಡುವೆ ವಿಮರ್ಶೆಯ ವಿಭಿನ್ನ ಪರಿಕಲ್ಪನೆಗಳು ಈ ಹೊತ್ತಿನ ಕಲಾ ವಿಮರ್ಶೆ ಹಾಗೂ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಬಳಕೆಯಾಗುತ್ತಲಿವೆ. ಬೇರೆ ಬೇರೆ ಕಲಾ ಪ್ರಕಾರಗಳ ನಡುವಣ ಅಂತರ್ ಸಂಬಂಧಗಳು ದಟ್ಟಗೊಳ್ಳುತ್ತಿರುವ ಈ ಕಾಲದಲ್ಲಿ ಕಲಾವಿದ ಚಿ.ಸು. ಕೃಷ್ಣ ಸೆಟ್ಟಿ ತಮ್ಮ ವಿಮರ್ಶೆಯ ಲೇಖನಗಳ ಮೂಲಕ ಈ ನೆಲೆಗಳನ್ನು ಗಂಭೀರವಾಗಿ ಪ್ರವೇಶಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

 ವಿಭಿನ್ನ ಶೈಲಿಯ, ಧೋರಣೆಯ ಅನೇಕ ಕಲಾವಿದರ ಕಲಾಪ್ರದರ್ಶನಗಳನ್ನು ನೋಡಿ ಚಿ. ಸು. ಕೃಷ್ಣ ಶೆಟ್ಟಿ ಬರೆದಿರುವ ವಿಮರ್ಶಾತ್ಮಕ ಲೇಖನಗಳು ಈ ಸಂಕಲನದಲ್ಲಿ ಸೇರಿವೆ.

About the Author

ಚಿ.ಸು. ಕೃಷ್ಣಸೆಟ್ಟಿ
(17 August 1952)

ಲೇಖಕ, ಚಿತ್ರಕಲಾವಿದ, ಕಲಾ ವಿಮರ್ಶಕ ಚಿ.ಸು. ಕೃಷ್ಣಸೆಟ್ಟಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ತಂದೆ ಸಿ.ಪಿ. ಸುಬ್ಬಯ್ಯಶೆಟ್ಟಿ, ತಾಯಿ ಸರೋಜಮ್ಮ. ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್ ಅಂಡ್‌ಕ್ರಾಫ್ಟ್ ನಿಂದ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮಾ ಪದವಿ ಪಡೆದ ಅವರು ಕೇಂದ್ರ ಲಲಿತ ಕಲಾ ಅಕಾಡಮಿಯ ಸ್ಕಾಲರ್ ಷಿಪ್‌ನಿಂದ ಗಾರಿ ಸ್ಟುಡಿಯೋದಲ್ಲಿ ಗ್ರಾಫಿಕ್‌ ಕಲೆಯಲ್ಲಿ ಪರಿಣತಿ ಪಡೆದರು. ಭಾರತೀಯ ವಿದ್ಯಾಭವನದಿಂದ ಸಾರ್ವಜನಿಕ ಸಂಪರ್ಕ ಮಾಧ್ಯಮದಲ್ಲಿ ಕನ್ನಡ ಎಂ.ಎ. ಪದವಿಗಳಿಸಿದರು. ಆನಂತರ ದಾವಣಗೆರೆಯ ಸ್ಕೂಲ್‌ ಆಫ್‌ ಆರ್ಟ್ಸ್‌ನಲ್ಲಿ ಉಪನ್ಯಾಸಕರಾಗಿ ಕ್ಲಾರಿಟಾನ್‌ ಜಾಹೀರಾತು ಕಂಪನಿಯಲ್ಲಿ ಕಲಾ ನಿರ್ದೇಶಕರಾಗಿ, ವಿನ್ಯಾಸ ಜಾಹೀರಾತು ಕಂಪನಿಯ ...

READ MORE

Related Books