ಮತ್ತೆ ಮತ್ತೆ ಬೇಂದ್ರೆ

Author : ಕಿ.ರಂ. ನಾಗರಾಜ

Pages 104

₹ 100.00




Year of Publication: 2015
Published by: ಅಹರ್ನಿಶಿ ಪ್ರಕಾಶನ
Address: ಜನವಿಹಾರ ವಿಸ್ತರಣೆ, ಕಂಟ್ರಿ ಕ್ಲಬ್ ಮುಂಭಾಗ, ವಿದ್ಯಾನಗರ, ಶಿವಮೊಗ್ಗ-577203

Synopsys

ಮಾತುಗಾರಿಕೆ ಹಾಗೂ ಕಾವ್ಯದ ವಿಶ್ಲೇಷಣೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರಿಯರಾವರು ವಿಮರ್ಶಕ ಕಿ.ರಂ. ನಾಗರಾಜ. ಕಿ.ರಂ. ಅವರ ಬೇಂದ್ರೆ ಪ್ರೀತಿ ಅಸಾಧಾರಣವಾದದ್ದು. ಮೈಮೇಲೆ ಬೇಂದ್ರೆ ಆವಾಹನೆಯಾದಂತೆ ಮಾತನಾಡುತ್ತಿದ್ದ ಕಿ.ರಂ. ಅವರು ಬರೆದದ್ದು ಕಡಿಮೆ. ಬೇಂದ್ರೆಯರನ್ನು ಕುರಿತು ಬರೆದ ಹಾಗೂ ಅಲ್ಲಲ್ಲಿ ಮಾತನಾಡಿದ ಭಾಷಣಗಳನ್ನು ಮತ್ತೆ ಮತ್ತೆ ಬೇಂದ್ರೆ ಕೃತಿಯು ಒಳಗೊಂಡಿದೆ. ಬೇಂದ್ರೆ ಕಾವ್ಯದ ಕುರಿತು ಕಿ.ರಂ. ಅವರ ಅಪೂರ್ವ ಒಳನೋಟಗಳು ಈ ಕೃತಿಯಲ್ಲಿ ಸಿಗುತ್ತವೆ.

About the Author

ಕಿ.ರಂ. ನಾಗರಾಜ
(05 December 1943 - 07 August 2010)

ಕನ್ನಡ ವಿಮರ್ಶಾಲೋಕದಲ್ಲಿ ಕಿ.ರಂ. ಎಂದೇ ಚಿರಪರಿಚಿತರಾಗಿದ್ದರು ಕಿತ್ತಾನೆ ರಂಗಣ್ಣ ನಾಗರಾಜ್ ಅವರು. ಅಪಾರ ಶಿಷ್ಯವರ್ಗ ಹೊಂದಿದ್ದ ಕಿ.ರಂ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರ ಶಿಷ್ಯವರ್ಗದಲ್ಲಿ ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳಿಗಿಂತ ಕಾವ್ಯಾಸಕ್ತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಸನ ಜಿಲ್ಲೆಯ ’ಕಿತ್ತಾನೆ’ಯಲ್ಲಿ 1943ರ ಡಿಸೆಂಬರ್ 5 ರಂದು ಜನಿಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 'ಬಿ.ಎ.ಪದವಿ' ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಎಂ.ಎ) ಪದವಿ ಪಡೆದರು. ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಕಿ.ರಂ.  ಅವರು ನಂತರ ಮೂರು ...

READ MORE

Related Books