ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ

Author : ಎಚ್.ಎಲ್. ಪುಷ್ಪ

Pages 149

₹ 120.00




Year of Publication: 2005
Published by: ಅಕ್ಕ ಪ್ರಕಾಶನ
Address: #930, ಕುವೆಂಪು ನಗರ, ಬಿ.ಎಂ. ರಸ್ತೆ, ಕುಣಿಗಲ್‌, ತುಮಕೂರು
Phone: 9341082824

Synopsys

'ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ' ಎಚ್.ಎಲ್. ಪುಷ್ಪ ಅವರ ಮೊದಲ ಸಾಹಿತ್ಯ ವಿಮರ್ಶಾ ಸಂಕಲನ. 12ನೆ ಶತಮಾನ ಒಂದು ವಿಶಿಷ್ಟ ಸಂದರ್ಭವಾಗಿದ್ದು, ಜಾತಿ, ಮತ, ಪಂಥಗಳ ವ್ಯತ್ಯಾಸವಿಲ್ಲದೆ ಎಲ್ಲ ಕಾಯಕ- ವರ್ಗದ ಜನ ಸಮಾನಮನಸ್ಕರಾಗಿ ಶಿವಭಕ್ತರೆಲ್ಲಾ ಒಂದೇ ಎನ್ನುವ ಭಾವನೆ ಮೂಡುವಂತೆ ಮಾಡಿದವರು ಬಸವಣ್ಣನವರಾಗಿದ್ದಾರೆ.

ತಾತ್ವಕಿ ಚರ್ಚೆಗಳಿಗಾಗಿ ಅನುಭವ ಮಂಟಪ ಸಜ್ಜುಗೊಂಡು ದೇಶದ ಮೂಲೆ ಮೂಲೆಗಳಿಂದ ಶಿವನ ಅಪ್ರತಿಮ ಭಕ್ತರಾದ ಶರಣರು ಬರಲಾರಂಭಿಸಿದರು. ಇವರಲ್ಲಿ ಮುಖ್ಯರಾದವರು ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನ ಬಸವಣ್ಣ, ಸಿದ್ಧರಾಮ, ಕಿನ್ನರಿ ಬೊಮ್ಮಯ್ಯ, ಚೋರ ಚಿಕ್ಕಯ್ಯ, ಮಾದಾರ ಚೆನ್ನಯ್ಯ ಮುಂತಾದವರು. ವಚನ ಸಾಹಿತ್ಯದ ಅಧ್ಯಯನವನ್ನು ಬಸವ, ಅಕ್ಕ, ಅಲ್ಲಮರ ಕೃತಿಗಳಿಗೆ ಸೀಮಿತಗೊಳಿಸಿಕೊಳ್ಳುವ ಬದಲಿಗೆ, ಅದನ್ನು ವಿಸ್ತರಿಸಿ ಕೆಳವರ್ಗದ ವಚನಕಾರರನ್ನು ಹಾಗೂ ಮಹಿಳಾ ವಚನಕಾರರನ್ನು ಕುರಿತು ಹೊಸ ಬಗೆಯಲ್ಲಿ ಇಲ್ಲಿ ಚರ್ಚಿಸಿದ್ದಾರೆ. ಅಲ್ಲದೆ, ಹೊಸ ಕಾಲದ ಲೇಖಕಿಯರ ಬಗ್ಗೆಯೂ ವಿವರಿಸಿದ್ದಾರೆ.

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books