ಹೈದರಾಬಾದ ಕರ್ನಾಟಕ ಆಧುನಿಕ ಸಾಹಿತ್ಯ ಚರಿತ್ರೆ

Author : ಬಸವರಾಜ ಸಬರದ

Pages 1000

₹ 700.00




Published by: ಕನ್ನಡ ಸಾಹಿತ್ಯ ಪರಿಷತ್ತು
Address: ಬೆಂಗಳೂರು

Synopsys

ಡಾ. ಬಸವರಾಜ ಸಬರದ ಅವರ ಅಧ್ಯಯನ ಗ್ರಂಥ ‘ಹೈದರಾಬಾದ ಕರ್ನಾಟಕ ಆಧುನಿಕ ಸಾಹಿತ್ಯ ಚರಿತ್ರೆ’. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಈ ಗ್ರಂಥದ ಪ್ರಧಾನ ಸಂಪಾದಕರು ಡಾ. ಮನು ಬಳಿಗಾರ್ ಅವರು. ಗ್ರಂಥದ ಪರಿವಿಡಿಯಲ್ಲಿ ತಾತ್ವಿಕ ನೆಲೆಗಳು, ಕವಿ-ಕಾವ್ಯ ಪರಂಪರೆ, ಕಥನ ಸಾಹಿತ್ಯ ಪರಂಪರೆ, ನಾಟಕ ಸಾಹಿತ್ಯ, ವಿಮರ್ಶೆ ಸಮಶೋಧನಾ ಪರಂಪರೆ, ಸಂಕೀರ್ಣ ಸಾಹಿತ್ಯ ಪರಂಪರೆ ಎಂಬ 6 ಭಾಗಗಳಿದ್ದು, ಅನೇಕ ಉಪ ವಿಭಾಗಗಳಿವೆ. ಪ್ರತಿ ವಿಷಗಳಿಗೂ ಸಂಬಂಧಿಸಿದಂತೆ ಅನೇಕ ಲೇಖಕರು ಬರೆದ ಳೇಖನಗಳ ಸಂಗ್ರಹ ಇಲ್ಲಿದೆ.

About the Author

ಬಸವರಾಜ ಸಬರದ
(20 June 1954)

ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್‌ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.   ನನ್ನವರ ಹಾಡು, ಹೋರಾಟ, ...

READ MORE

Related Books