ಬರೆಹದಲ್ಲಿ ಬೇಂದ್ರೆಯವರ ಬದುಕು

Author : ಜಿ. ಕೃಷ್ಣಪ್ಪ

Pages 180

₹ 200.00




Year of Publication: 2022
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: # 176, ಗೌಂಡ್ ಫ್ಲೋರ್‌, 12ನೇ ಮೇನ್, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು - 79

Synopsys

ಬರೆಹದಲ್ಲಿ ಬೇಂದ್ರೆಯವರ ಬದುಕು ಜಿ. ಕೃಷ್ಣಪ್ಪ ಅವರ ಕೃತಿಯಾಗಿದೆ. ಬೇಂದ್ರೆಯವರ ಕಾವ್ಯದಂತೆ ಅವರ ಬದುಕು ಕೂಡ ಅಭ್ಯಾಸ ಯೋಗ್ಯವಾದದ್ದು. ಯಾಕೆಂದರೆ, ಅವರ ಬದುಕಿಗೂ ಕಾವ್ಯಕ್ಕೂ ಅನ್ನೋನ್ಯವಾದ ಸಂಬಂಧವಿದೆ. ಅವರ ಎಷ್ಟೋ ಕವಿತೆಗಳಲ್ಲ ಅವರ ಬದುಕಿನ ಪಾಡೇ ಹಾಡಾಗಿ ಅಭಿವ್ಯಕ್ತಿ ಪಡೆದಿದೆ. ಅಂತೆ ಯೇ ಅವರ ಕವಿತೆ ಗಳನ್ನು ಅರ್ಥ ಮಾಡಿಕೊಳ್ಳಲಕ್ಕೆ ಅವುಗಳ ಭಾವಸಂದರ್ಭ' ದಂತೆ ಜೀವನ ಸಂದರ್ಭದ ಸಹಾಯವೂ ಬೇಕಾಗುತ್ತದೆ. ಬೇಂದ್ರೆಯವರ ಬದುಕು-ಬರಹಗಳ ವಿಶೇಷ ಅಧ್ಯಯನದಲ್ಲ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಡಾ.ಜಿ.ಕೃಷ್ಣಪ್ಪ ಅವರು ಈ ಹೊತ್ತಿಗೆಯಲ್ಲಿ ಬೇಂದ್ರೆಯವರ ಬದುಕನ್ನು ಅವರ ಗದ್ಯ ಹಾಗೂ ಕಾವ್ಯದ ಮೂಲಕ ಮನರಚಿಸುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ, ಅವರ ಬದುಕಿನ ಮಹತ್ವದ ಸಂದರ್ಭಗಳ ಸಹಾಯದಿಂದ ಅವರ ಕಾವ್ಯವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಇಮ್ಮುಖದ ಅಭ್ಯಾಸದಿಂದ ಬೇಂದ್ರೆಯವರ ಜೀವನ ಮತ್ತು ಎರಡೂ ಹೊಸ ಬೆಳಕಿನಲ್ಲಿ ಕಾಣಿಸಿಕೊಂಡಿವೆ. ಬೇಂದ್ರೆಯವರ ಅಭ್ಯಾಸಕ್ಕೆ ಇದೊಂದು ವಿಶಿಷ್ಟ ಕೊಡುಗೆಯಾಗಿದೆ ಎಂದು ಗಿರಡ್ಡಿ ಗೋವಿಂದರಾಜ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

 

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books