ನಾರೀ ನೋಟ

Author : ಸಬಿಹಾ ಭೂಮಿಗೌಡ

Pages 184

₹ 160.00




Year of Publication: 2020
Published by: ಕವಿ ಪ್ರಕಾಶನ
Address: ಕವಲಕ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.

Synopsys

ಸಾಹಿತಿ-ವಿಮರ್ಶಕಿ ಸಬಿಹಾ ಭೂಮಿಗೌಡ ಅವರ ವಿಮರ್ಶಾ ಬರಹಗಳ ಸಂಕಲನ-ನಾರೀ ನೋಟ. ಕನ್ನಡ ಸಾಹಿತ್ಯದಲ್ಲಿ ವಿಮರ್ಶೆ ವಲಯವು ಹೆಚ್ಚು ಕಾರ್ಯೋನ್ಮುಖವಾಗಿರದಿದ್ದ ಇಂದಿನ ಕಾಲಘಟ್ಟದಲ್ಲಿ ವಿಮರ್ಶಾ ಬರಹಗಳ ಇಂತಹ ಸಂಕಲನಗಳು ಹೆಚ್ಚು ಮಹತ್ವ ಪಡೆಯುತ್ತವೆ. ಕನ್ನಡ ಕೃತಿಗಳನ್ನು ಲೇಖಕಿಯು ವಿಮರ್ಶೆಗೆ ಒಳಪಡಿಸಿದ್ದು, ಕನ್ನಡ ಸಾಹಿತ್ಯ ಕೃತಿಗಳ ಗುಣಮಟ್ಟವನ್ನು ಒರೆಗೆ ಹಚ್ಚಿದ್ದಾರೆ ಮತ್ತು ಆ ಮೂಲಕ ಸಾಹಿತ್ಯ ಕೃಷಿಗೆ ಕೆಲ ಅಂಶಗಳ ಸಲಹೆ-ಸೂಚನೆ ನೀಡಿರುವುದು ಮಾತ್ರವಲ್ಲ; ಮತ್ತೇ ಕೆಲವು ಅಂಶಗಳನ್ನು ಕನ್ನಡ ಸಾಹಿತ್ಯ ಕೃಷಿಯಿಂದ ನಿರೀಕ್ಷಿಸಿದ್ದಾರೆ. ಹೀಗಾಗಿ, ಲೇಖಕರಿಗೆ, ಸಾಹಿತ್ಯ ರಚನೆಯ ಹೊಳವುಗಳನ್ನು ಈ ಕೃತಿ ನೀಡುತ್ತದೆ.

About the Author

ಸಬಿಹಾ ಭೂಮಿಗೌಡ
(04 July 1959)

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು.  ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...

READ MORE

Related Books