ಓದು ಒಕ್ಕಾಲು

Author : ಅರುಣ್ ಜೋಳದಕೂಡ್ಲಿಗಿ

Pages 164

₹ 150.00




Year of Publication: 2020
Published by: ಪ್ರಗತಿ ಪ್ರಕಾಶನ
Address: ಮೇಲ್ಮಹಡಿ, ನಂ:2406/2407/K-1, ಮೊದಲ ಕ್ರಾಸ್, ಹೊಸ ಬಂಡೀಕೇರಿ, ಕೆ.ಆರ್.ಮೊಹಲ್ಲಾ, ಮೈಸೂರು-570004
Phone: 0821-4287558

Synopsys

‘ಓದುಒಕ್ಕಾಲು’ ಲೇಖಕ ಡಾ.ಅರುಣ್ ಜೋಳದಕೂಡ್ಲಿಗಿ ಅವರ ವಿಮರ್ಶಾ ಲೇಖನಗಳ ಸಂಕಲನ. ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ ಕಾಲ ಕಾಲಕ್ಕೆ ಅವರ ಆಯ್ಕೆಯ ಪುಸ್ತಕಗಳನ್ನು ಓದಿ ಪ್ರತಿಕ್ರಿಯಿಸಿದ ಟಿಪ್ಪಣಿಗಳ ಪುಸ್ತಕ. ಕೃಷ್ಣಮೂರ್ತಿ ಹನೂರ್ ಅವರ 'ಕಾಲುದಾರಿಯ ಕಥನಗಳು' ಕೃತಿ ವಿಮರ್ಶೆ ಮೊದಲುಗೊಂಡು ಕವಿ ಮಲ್ಲಿಕಾರ್ಜುನಗೌಡ  ಅವರ ಈಚಿನ 'ಹೇಳಲೆ ಬೇಕಾದ್ದು ಇನ್ನೂ ಇದೆ' ಸಂಕಲನದ ಬಗ್ಗೆ ಬರೆದ ಪತ್ರದವರೆಗೂ ಸೇರಿ ಒಟ್ಟು 32 ಲೇಖನಗಳಿವೆ.

ಲೇಖಕ ರಹಮತ್ ತರೀಕೆರೆ, ಮೀರಸಾಬಿಹಳ್ಳಿ ಶಿವಣ್ಣ, ಸಿ.ಎನ್.ರಾಮಚಂದ್ರನ್, ನಟರಾಜ ಹುಳಿಯಾರ್, ಸಿ.ವೀರಣ್ಣ, ಕೆ.ಶರೀಫಾ ಮೊದಲಾದ ಹಿರಿಯ ಲೇಖಕರ ಪುಸ್ತಕಗಳಿಗೆ ಬರೆದ ಟಿಪ್ಪಣಿಗಳ ಜತೆಗೆ ಟಿ.ಎಸ್.ಗೊರವರ,  ಹನಮಂತ ಹಾಲಿಗೇರಿ, ಪರಿಮಳ ಜಿ.ಕಮತರ, ಸತೀಶ್ ಜಿ.ಟಿ, ಸೃಜನ್, ಮೋದೂರು ತೇಜ, ಹರಿಪ್ರಸಾದ್, ವಿಠ್ಠಲ ದಳವಾಯಿ, ರೇವತಿ, ಸೈಫ್ ಜಾನ್ಸೆ ಮೊದಲಾದ ಹೊಸ ತಲೆಮಾರಿನವರ ಪುಸ್ತಕಗಳಿಗೆ ಪ್ರತಿಕ್ರಿಯಿಸಿರುವ ಟಿಪ್ಪಣಿಗಳೂ ಸಂಕಲನಗೊಂಡಿವೆ 

About the Author

ಅರುಣ್ ಜೋಳದಕೂಡ್ಲಿಗಿ
(13 February 1980)

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ...

READ MORE

Related Books