ಬೇಂದ್ರೆ-ಮಧುರಚೆನ್ನ: ಸಖ್ಯಯೋಗ

Author : ಗುರುಲಿಂಗ ಕಾಪಸೆ

Pages 56

₹ 10.00




Year of Publication: 2000
Published by: ಕನ್ನಡ ಸಂಘ ಕ್ರೈಸ್ಟ್ ಕಾಲೇಜ್
Address: ಕನ್ನಡ ಸಂಘ ಕ್ರೈಸ್ಟ್ ಕಾಲೇಜ್, ಕುವೆಂಪುನಗರ, ಬೆಂಗಳೂರು

Synopsys

ವರಕವಿ ಬೇಂದ್ರೆ ಮತ್ತು ಕವಿ ಮಧುರಚೆನ್ನರ ಸ್ನೇಹ ಒಡನಾಟ ಸಾಹಿತ್ಯದ ನಂಟಿನ ಕುರಿತಾದ ವಿಶ್ಲೇಷಣಾತ್ಮಕ ಕೃತಿ ಇದು. ಧಾರವಾಡದ ಬೇಂದ್ರೆಯವರು, ಹಲಸಂಗಿಯ ಮಧುರಚೆನ್ನರೊಂದಿಗೆ ಮಾಡಿದ ಸ್ನೇಹ ವಿಸ್ಮಯವನ್ನುಂಟುಮಾಡುತ್ತದೆ. ಯಾಕೆಂದರೆ ಅವರಿಬ್ಬರು ಬೆಳೆದ ವಾತಾವರಣಗಳು ಬೇರೆ ಬೇರೆ, ಹಾಗೇ ನೋಡಿದರೆ ಅವರು ಸಮವಯಸ್ಕರಲ್ಲ, ಸಹಪಾಠಿಗಳಲ್ಲ, ಜಾತಿಬಾಂಧವ್ಯ ಉಳ್ಳವರೂ ಅಲ್ಲ. ಬೇಂದ್ರೆಯವರು ಜನಿಸಿದ್ದು 1896ರಲ್ಲಿ, ಮಧುರಚೆನ್ನರು ಹುಟ್ಟಿದ್ದು 1903ರಲ್ಲಿ. ಅವರಿಬ್ಬರ ವಯಸ್ಸಿನಲ್ಲಿ ಏಳು ವರ್ಷಗಳ ಅಂತರವಿದೆ. ಬೇಂದ್ರೆಯವರು ಪದವೀಧರರು, ಮಧುರಚೆನ್ನರು ಮುಲ್ಕಿಪರೀಕ್ಷೆಯವರೆಗೆ ಮಾತ್ರ ಓದಿದವರು. ಬೇಂದ್ರೆಯವರು ಚಿತ್ಪಾವನರು, ಮಧುರಚೆನ್ನರು ವೀರಶೈವರು. ಧಾರವಾಡಕ್ಕೂ ಹಲಸಂಗಿಗೂ ಸುಮಾರು ಇನ್ನೂರು ಮೈಲುಗಳಷ್ಟು ಅಂತರ. ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಅವರೆಡು ಪರಸ್ಪರ ಅಪರಿಚಿತ ಸ್ಥಳಗಳೇ ಎತ್ತಣ ಮಾಮರ ಎತ್ತರ ಕೋಗಿಲೆ ಎಂದು ಹೇಳಬಹುದಾದಂತಹ ಅವುಗಳ ಸಂಬಂಧ ಅನಿರೀಕ್ಷಿತವಾದುದು, ಅಷ್ಟೇ ಆಕಸ್ಮಿಕವಾದದ್ದು. 

ಮಧುರಚೆನ್ನ ಮತ್ತು ಬೇಂದ್ರೆಯವರಿಗೆ ಗೆಳೆತನವು ಕೇವಲ ಲೌಕಿಕ ಸಂಬಂಧವಾಗಿರಲಿಲ್ಲ, ಅವರಿಬ್ಬರಿಗೆ ಕಾವ್ಯರಚನೆಯು ಕಾವ್ಯಯೋಗವಾಗಿರುವಂತೆ ಗೆಳತನದ ಸಂಬಂಧವೂ ಸಖ್ಯಯೋಗವಾಗಿತ್ತು. ಈ ಸಖ್ಯಯೋಗ ಒಬ್ಬಿಬ್ಬ ವ್ಯಕ್ತಿಗಳಿಗೆ ಸೀಮಿತವಾಗಿರಲಿಲ್ಲ, ಅದು ತುಂಬಾ ವ್ಯಾಪಕವಾಗಿತ್ತು. ಧಾರವಾಡದ ಗೆಳೆಯರು, ಹಲಸಂಗಿ ಗೆಳೆಯರು ಎಂದು ಗುರುತಿಸಲಾಗುತ್ತಿದ್ದರೂ ನಾಡಿನುದ್ದಗಲಕ್ಕೂ ಅವರಿಗೆ ಗೆಳೆಯರಿದ್ದರು. ಬೇಂದ್ರೆಯವರ ಒಲವು ಮಧುರಚೆನ್ನರ ಪ್ರೀತಿ ಅವರವರ ಸಾಧನೆಯಲ್ಲಿಯೇ ಅನನ್ಯವಾಗಿದ್ದವು. ಈ ಮಧುರ ಸ್ನೇಹದ ಕುರಿತಾದ ವಿಶ್ಲೇಷಣಾತ್ಮಕ ಕೃತಿ ಇದು. 

About the Author

ಗುರುಲಿಂಗ ಕಾಪಸೆ
(02 April 1928)

ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (1998, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆಯಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.  ಕೃತಿಗಳು: ಅಕ್ಕಮಹಾದೇವಿ, ಮಧುರಚೆನ್ನ, ಶ್ರೀ ಅರವಿಂದರು, ಬಸವೇಶ್ವರ, ಹಲಸಂಗಿ ಗೆಳೆಯರು, ಪ್ರವಾಸಕಥನ: ಶಾಲ್ಮಲೆಯಿಂದ ಗೋದಾವರಿಯವರೆಗೆ ಹಾಗೂ ಮಕ್ಕಳ ಸಾಹಿತ್ಯ: ಕವಿ ರವಿಂದ್ರರು, ಶಿ.ಶಿ.ಬಸವನಾಳ ಮತ್ತು ವಿಮರ್ಶೆ: ಸಾಹಿತ್ಯ ಸಂಬಂಧ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ. ಸಂಪಾದಿತ ಕೃತಿಗಳು: ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ...

READ MORE

Related Books