ಯುಗಾಂತ

Author : ಪಿ. ಶ್ರೀಪತಿ ತಂತ್ರಿ

Pages 236

₹ 175.00




Year of Publication: 2015
Published by: ಅಭಿನವ ಪ್ರಕಾಶನ
Address: # 17/18-2, ಮೊದಲನೇ ಮು ಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗೂರು-560 040

Synopsys

ಮಹಾಬಾರತದ ಪಾತ್ರಗಳ ವಿಶ್ಲೇಷಣೆಯನ್ನು ಅತ್ಯಂತ ಸುಂದರವಾಗಿ ನೀಡಿರುವ ಇರಾವತಿ ಕರ್ವೆ ಯುಗಾಂತ ಕೃತಿಯ ಕನ್ನಡಾನುವಾದವನ್ನು ಲೇಖಕ-ಸಾಹಿತಿ ಪಿ. ಶ್ರೀಪತಿ ತಂತ್ರಿ ಅವರು ಮಾಡಿದ್ದಾರೆ. ಗಾಂಧಾರಿ, ಕುಂತಿ, ದ್ರೌಪದಿ, ಕೃರ್ಷಣ ವಾಸುದೇವ, ಕರ್ಣ, ಮಯಸಭೆ ಇತ್ಯಾದಿ ಅಧ್ಯಾಯಗಳ ಮೂಲಕ ವಿದ್ವತ್ ಪೂರ್ಣ ವಿಚಾರ ಹಾಗೂ ತರ್ಕಗಳೊಂದಿಗೆ ಮಂಡಿತವಾದ ಇಲ್ಲಿಯ ವಿಚಾರಗಳು ವಿಶ್ವ ಕನ್ನಡ ಸಾಹಿತ್ಯದ ಗಮನ ಸೆಳೆದಿವೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯನ್ನು‘ ಶಾಸ್ತ್ರೀಯ ’ಎಂದು ಪರಿಗಣಿಸಲಾಗುತ್ತಿದೆ.

About the Author

ಪಿ. ಶ್ರೀಪತಿ ತಂತ್ರಿ

ಹಿರಿಯ ಸಾಹಿತಿ ಪಾದೂರು ಶ್ರೀಪತಿ ತಂತ್ರಿ ಅವರು ಸಮಾಜ ಶಾಸ್ತ್ರಜ್ಞರು. ಮೂಲತಃ ಉಡುಪಿಯವರು. ಮಹಾಭಾರತದ ಪಾತ್ರಗಳನ್ನು ಅತ್ಯಂತ ಪಾಂಡಿತ್ಯಪೂರ್ಣವಾಗಿ ವಿಶ್ಲೇಷಿಸಿದ ಇರಾವತಿ ಕರ್ವೆ ಅವರ ಕೃತಿಯನ್ನು ಯುಗಾಂತ ಶೀರ್ಷಿಕೆಯಡಿ ಅನುವಾದಿಸಿ ಕನ್ನಡಕ್ಕೆ ಒಂದು ಶಾಸ್ತ್ರೀಯ ಕೃತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕುಂದಾಪುರ ಭಂಡಾರ್‌ಕಾರ್ ಕಾಲೇಜು, ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ, ಶಿರ್ವದ ಎಂಎಸ್‌ಆರ್‌ಎಸ್‌ ಕಾಲೇಜು ಮತ್ತು ಮಣಿಪಾಲದ ಮಾಧವ ಪೈ ಕಾಲೇಜಿನಲ್ಲಿ ಪ್ರಾಂಶು ಪಾಲರಾಗಿದ್ದರು. ಮಣಿಪಾಲ ಕೆಎಂಸಿಯಲ್ಲಿಯೂ ಉಪನ್ಯಾಸಕರಾಗಿದ್ದರು. ಮಂಗಳೂರು, ಮೈಸೂರು ವಿ.ವಿ. ಸೆನೆಟ್ ಸದಸ್ಯರಾಗಿ, ಮಂಗಳೂರು ವಿ.ವಿ. ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾಗಿ, ವಿ.ವಿ. ...

READ MORE

Related Books