ನಾಗಾರ್ಜುನನ ಮಧ್ಯಮ ಮಾರ್ಗ

Author : ಎಸ್. ನಟರಾಜ ಬೂದಾಳು

Pages 34

₹ 10.00




Year of Publication: 2007
Published by: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ,
Address: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276

Synopsys

ಬೌದ್ಧ ಚಿಂತಕ, ತಾತ್ವಿಕ ನಾಗಾರ್ಜುನನ ಮಧ್ಯಮ ಮಾರ್ಗ ತಾತ್ವಿಕತೆಯನ್ನು ಪರಿಚಯಿಸುವ ಪುಟ್ಟ ಪುಸ್ತಕ. ಪರಿಚಾಯತ್ಮಕ ನೆಲೆಯಲ್ಲಿದ್ದರೂ ಲೇಖಕರ ಆಳವಾದ ಅಧ್ಯಯನದ ಅರಿವು ಆಗದೇ ಇರದು. ಬೌದ್ಧ ಧರ್ಶನದಲ್ಲಿ ನಾಗಾರ್ಜುನನಿಗೆ ಎರಡನೆಯ ಬೌದ್ಧ ಎಂಬ ವಿಶೇಷಣವಿದೆ. ಅವನಿಗೆ ಸಮನಾದ ಇನ್ನೊಬ್ಬ ತಾತ್ವಿಕ ಇಲ್ಲವೆಂದೇ ಹೇಳಬಹುದು. ಕರ್ನಾಟಕದ ಅತ್ಯಂತ ಪ್ರಾಚೀನ ಎರಡು ಬೌದ್ಧವಿಶ್ವವಿದ್ಯಾಲಯಗಳಲ್ಲಿ ಒಂದಾದ ಬಳ್ಳಿಗಾವೆಯ ಕೋಢಿಮಟದ ಜೊತೆಗೆ ನಾಗಾರ್ಜುನನ ಹೆಸರು ಜೋಡಣೆಯಾಗಿದೆ. ನಾಗಾರ್ಜುನನ ಪರಿಚಯದ ಮೂಲಕ ಮುಖಾಮುಖಿ ಆಗುವುದರೊಂದಿಗೆ ಆರಂಭವಾಗುವ ಪುಸ್ತಕದಲ್ಲಿ ‘ಬುದ್ಧ ಮತ್ತು ನಾಗಾರ್ಜುನ’, ನಾಗಾರ್ಜುನನ ಮೂಲಮಧ್ಯಮಕ ಕಾರಿಕಾ, ಅರ್ಪಣೆಯ ವಚನ, ಅನುಚ್ಛೇದ- ಅಶಾಶ್ವತ, ಅನೇಕಾರ್ಥ-ಅನಾನಾರ್ಥ, ಅನಾಗಮಂ- ಅನಿರ್ಗಮಂ, ಪ್ರತೀತ್ಯ- ಸಮುತ್ಪಾದ, ಭಿನ್ನಾಭಿನ್ನ ನಿರಾಕರಣೆ, ಪ್ರಮಾಣ ನಿರಾಕರಣೆ ಉಪ ಶೀರ್ಷಿಕೆಗಳ ಅಡಿಯಲ್ಲಿ ಪರಿಚಯಿಸಲಾಗಿದೆ. ಕೊನೆಯಲ್ಲಿ ನೀಡಿರುವ ಗ್ರಂಥಋಣದ ಪಟ್ಟಿ ಹಾಗೂ ಪದಕೋಶಗಳು ಪುಸ್ತಕದ ಸೊಗಸು ಹೆಚ್ಚಿಸಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರಕಟಿಸುತ್ತಿರುವ ‘ಮಂಟಪ ಮಾಲೆ’ ಸರಣಿಯ 146ನೇ ಪುಸ್ತಿಕೆಯಿದು.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books