ಕನ್ನಡ ಕಾವ್ಯ ಮೀಮಾಂಸೆ

Author : ಎಸ್. ನಟರಾಜ ಬೂದಾಳು

Pages 184

₹ 120.00




Year of Publication: 2016
Published by: ಪ್ರಸಾರಾಂಗ,
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ-583276

Synopsys

ಸಂಸ್ಕೃತ ಕಾವ್ಯ ಮೀಮಾಂಸೆಯನ್ನೇ ಭಾರತೀಯ ಕಾವ್ಯ ಮೀಮಾಂಸೆ ಎಂದು ಓದುವ, ಚರ್ಚಿಸುವ ಪರಿಪಾಠ ಕನ್ನಡ ಸಾಹಿತ್ಯಲೋಕದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಕನ್ನಡಕ್ಕೆ ಕನ್ನಡದ್ದೇ ಆದ ಮೀಮಾಂಸೆ ಇದೆ. ಅದನ್ನು ಕನ್ನಡದ ಪಠ್ಯ- ಚಿಂತನೆಗಳನ್ನು ಆಧರಿಸಿ ರೂಪಿಸಿಕೊಳ್ಳಬೇಕು ಎಂಬ ಮಾತು ಕೆಲವು ವರ್ಷಗಳಿಂದ ಚಾಲ್ತಿಗೆ ಬಂದಿದೆ. ಸಹಜವಾಗಿಯೇ ಈ ಮೀಮಾಂಸೆಯು ಸಂಸ್ಕೃತ- ಭಾರತೀಯ ಕಾವ್ಯ ಮೀಮಾಂಸೆಗಿಂತ ಭಿನ್ನವಾದದ್ದೂ ಆಗಿರಲಿದೆ. ಅದು ಕನ್ನಡದ ಚಿಂತನೆ- ಸಂಸ್ಕೃತಿ- ಸಾಹಿತ್ಯದ ಅನನ್ಯತೆ ಸಾಬೀತು ಪಡಿಸುತ್ತದೆ ಎಂಬ ಯೋಚನೆ ಅದರ ಹಿಂದಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗಿರುವ ನಟರಾಜ ಬೂದಾಳು ಅವರ ಕನ್ನಡ ಕಾವ್ಯ ಮೀಮಾಂಸೆಯು ಈ ನಿಟ್ಟಿನಲ್ಲಿ ನಡೆದ ಅಪರೂಪದ ಮಹತ್ವದ ಪ್ರಯತ್ನ. ಇದಕ್ಕಿಂತ ಮುನ್ನ ಸ್ವತಃ ನಟರಾಜ ಬೂದಾಳು ಅವರೇ ತುಮಕೂರು ವಿಶ್ವವಿದ್ಯಾಲಯಕ್ಕಾಗಿ ‘ದೇಸಿಯೊಳ್ ಪುಗುವುದು’ ಎಂಬ ಪಠ್ಯ ಆಧಾರಿತ ಮೀಮಾಂಸೆ ನೀಡಿದ್ದರು. ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಹಮತ್ ತರೀಕೆರೆ ಅವರು ಈ ನಿಟ್ಟಿನಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದರು. ‘ಕನ್ನಡ ಮೀಮಾಂಸೆಗೊಂದು ಪ್ರವೇಶಿಕೆ’ ಎಂಬ ಅಧ್ಯಾಯ ಪ್ರಾರಂಭದಲ್ಲಿದೆ. ಕನ್ನಡ ಚಿಂತನೆ- ತಾತ್ವಿಕತೆ ಆಕರ ಅವು ಕಟ್ಟಿಕೊಡುವ ಮೀಮಾಂಸೆಯ ಸ್ವರೂಪವನ್ನು ಕುರಿತು ಚರ್ಚಿಸಲಾಗಿದೆ. ನಂತರದ ಅಧ್ಯಾಯಗಳಲ್ಲಿ ಪ್ರಕ್ರಿಯಾ ಮೀಮಾಂಸೆ, ಪ್ರಮಾಣ ನಿರಾಕರಣೆ, ಭಿನ್ನಾಭಿನ್ನ ನಿರಾಕರಣೆ, ದೇಹ ಮೀಮಾಂಸೆ, ಕಾಲ-ದೇಶ- ನಿರಾಕರಣೆ, ಸಹಜಯಾನ- ಕನ್ನಡ ಕಾವ್ಯದ ನಡೆ, ಕಾವ್ಯ ಪ್ರಯೋಜನ ಎಂಬ ಅಧ್ಯಾಯಗಳು ಕನ್ನಡ ಮೀಮಾಂಸೆಯನ್ನು ರೂಪಿಸಲು ಹಾಗೂ ಕಟ್ಟಿಕೊಡುತ್ತವೆ. ಇದೊಂದು ವಿಭಿನ್ನ ವಿಶಿಷ್ಟ ಪ್ರಯತ್ನ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Awards & Recognitions

Related Books