ನವೋದಯ ವಿಮರ್ಶಾ ಸಾಹಿತ್ಯದ ಸ್ವರೂಪ

Author : ಸುಜಾತ ಲಕ್ಷ್ಮೀಪುರ

Pages 408

₹ 450.00




Year of Publication: 2021
Published by: ಪ್ರಗತಿ ಗ್ರಾಫಿಕ್ಸ್
Address: #119, 3ನೇ ಕ್ರಾಸ್, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104
Phone: 08023409512

Synopsys

‘ನವೋದಯ ವಿಮರ್ಶಾ ಸಾಹಿತ್ಯದ ಸ್ವರೂಪ’ ಡಾ. ಸುಜಾತಾ ಲಕ್ಷ್ಮೀಪುರ ಅವರ ಸಂಶೋಧನಾತ್ಮಕ ಕೃತಿ. ಈ ಕೃತಿಗೆ ಡಾ.ಬಸವರಾಜ ಸಿ.ಕಲ್ಗುಡಿ ಅವರ ಬೆನ್ನುಡಿ ಬರಹವಿದೆ. ಕನ್ನಡದ ಆಧುನಿಕತೆಯ ಹೊಸ್ತಿಲು ಎಂದು ಹೇಳಬಹುದಾದ ನವೋದಯ ಸಂಕೀರ್ಣವಾದ ರಾಜಕೀಯ ಸಮಾಜಿಕ ಹಾಗೂ ಸಾಂಸ್ಕೃತಿಕವಾದ ವಿಚಾರಧಾರೆಗಳಿಂದ ಕೂಡಿವೆ. ಪರಸ್ಪರ ಸಂವಾದ ಹಾಗೂ ಮುಖಾಮುಖಿಯ ಸ್ವರೂಪವನ್ನು ಪಡೆದುಕೊಂಡಿದೆ. ಈ ಸ್ವರೂಪವನ್ನು ಸರಳವಾದ ತೀರ್ಮಾನಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಈ ಪುಸ್ತಕವು ಇದನ್ನು ಒಂದು ಸವಾಲಾಗಿ ಸ್ವೀಕರಿಸಿದೆ ಎನ್ನುತ್ತಾರೆ ಬಸವರಾಜ ಸಿ. ಕಲ್ಗುಡಿ. ಬ್ರಿಟಿಷ್ ವಸಾಹತು ಪ್ರಭುತ್ವದ ಆಳ್ವಿಕೆಯ ಪರಿಣಾಮದಿಂದ ಉಂಟಾದ ಆಧುನಿಕತೆ, ಪರಂಪರೆಯ ಸವಾಲುಗಳು, ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯತೆಯ ಸಂಕೀರ್ಣ ಸ್ವರೂಪ, ಹೀಗೆ ನವೋದಯದ ಕಾಲವು ಒಂದು ಸಂಕೀರ್ಣವಾದ ಸಂಘರ್ಷದ ಕಾಲ. ಸುಜಾತಾ ಅವರು ಈ ಸಂಕೀರ್ಣ ಕಾಲಘಟ್ಟವನ್ನು ಸೂಕ್ಷ್ಮವಾಗಿ ವಿವೇಚಿಸಿದ್ದಾರೆ. ಕೆಲವನ್ನು ಇಲ್ಲಿ ಹೆಸರಿಸಬಹುದು. ಇಲ್ಲಿಯ ಸಂಸ್ಕೃತಿಯನ್ನು ಕುರಿತ ಆಗಿನ(ನವೋದಯ ಸಂದರ್ಭದ) ಓರಿಯಂಟಲಿಸ್ಟ್ ಆಲೋಚನಾ ಧಾಟಿಯನ್ನು, ಹಾೂ ಸಂಶೋಧನಾ ವಿಧಾನವನ್ನು ಸುಜಾತ ಗ್ರಹಿಸಿದ್ದಾರೆ ಹಾಗೂ ವಿಶ್ಲೇಷಿಸಿದ್ದಾರೆ. ಆಗಿನ ಸಾಹಿತ್ಯ ವಿಮರ್ಶೆಯು ಕೂಡಾ ಈ ಒಂದು ಸಂಕೀರ್ಣತೆಯ ಸ್ವರೂಪವನ್ನು ಹಿಡಿದ ವಿವಿಧ ಬಗೆಯನ್ನು ಅವರು ತೌಲನಿಕವಾಗಿ ವಿವೇಚಿಸಿದ್ದಾರೆ. ನವೋದಯ ಸಂದರ್ಭದ ವಿಮರ್ಶೆಯ ಹುಡುಕಾಟದಲ್ಲಿ ಅನೇಕ ಮಾದರಿಗಳಿವೆ. ಪಶ್ಚಿಮವನ್ನು ಒಪ್ಪಿದ ಮಾದರಿ ಹೀಗೆ ಹಲವು ಮಾದರಿಯ ಚಿಂತನೆಗಳು, ವಿಮರ್ಶೆಯಲ್ಲಿ ಹಾಸುಹೊಕ್ಕಾಗಿ ರೂಪುಗೊಂಡಿರುವ ಕಾಲ ಇದು. ಇವುಗಳ ವಿವೇಚನೆ ಇಲ್ಲಿದೆ.

About the Author

ಸುಜಾತ ಲಕ್ಷ್ಮೀಪುರ
(23 September 1975)

ಡಾ. ಸುಜಾತ ಲಕ್ಷ್ಮೀಪುರ  ಕನ್ನಡ ಸ್ನಾತಕೋತ್ತರ ಪದವಿಯನ್ನು ಎರಡು ಚಿನ್ನದ ಪದಕ, ತೃತೀಯ ರ್ಯಾಂಕ್ ನೊಂದಿಗೆ ಪಡೆದಿದ್ದಾರೆ. ಹದಿನೈದು ವರ್ಷಗಳಿಂದ ಕನ್ನಡ ಭಾಷಾ ಬೋಧನೆಯಲ್ಲಿ ತೊಡಗಿಕೊಂಡಿರುವ ಅವರು ಅಧ್ಯಯನ ಮತ್ತು ಬರವಣಿಗೆಗಳನ್ನು ತಮ್ಮ ನೆಚ್ಚಿನ ಹವ್ಯಾಸಗಳನ್ನಾಗಿಸಿಕೊಂಡಿದ್ದಾರೆ. ಅವರ ಹಲವಾರು ಕವಿತೆಗಳು. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ವಿಚಾರ ಸಂಕೀರ್ಣಗಳಲ್ಲಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿಷಯ ಮಂಡನೆ, ಕವಿಗೋಷ್ಠಿಗಳಲ್ಲಿ ಕವಿತಾ ವಾಚನ. ನಿರೂಪಣೆ, ಹೀಗೆ ಹಲವಾರು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಹಳೆಗನ್ನಡ ಸಾಹಿತ್ಯದ ಅಧ್ಯಯನ ಶಿಬಿರ, ಸರ್ಟಿಫಿಕೇಟ್ ಆಧಾರಿತ ...

READ MORE

Related Books